Thursday, 20 December 2018

ಕನ್ನಡದ ಎಲ್ಲ ಚಿತ್ರಗಳ ದಾಖಲೆಯನ್ನು ಮುರಿದ K G F ವಿಮರ್ಶೆ


ನೀನು ಹೇಗೆ ಹುಟ್ಟಿದೆ ಅನ್ನೋದು ಮುಖ್ಯ ಅಲ್ಲ, ಸಾಯಬೇಕಾದ್ರೆ ದೊಡ್ಡ ಶ್ರೀಮಂತನಾಗಿ ಸಾಯಬೇಕು ಅದು ಹೇಗಾದ್ರೂ ಆಗಿರಲಿ. ಹೀಗೆ ಹೇಳುವ ತಾಯಿಯ ಮಾತನ್ನು ನಿಜ ಮಾಡಲು ಹೊರಡುವ ಹುಡುಗನ ಕಥೆ ಈ ಕೆಜಿಎಫ್‌. 


ಬಂಗಾರ ಅಗೆಯಲು ಕಾರ್ಮಿಕರನ್ನು ಬಳಸಿಕೊಂಡ ರೀತಿಯನ್ನು ನಿರ್ದೇಶಕ ಪ್ರಶಾಂತ್‌ ನೀಲ್‌ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ನಮ್ಮ ಮೈ ಮೇಲೆ ನಳ ನಳಿಸುವ ಬಂಗಾರ ಹಿಂದೆ ನೂರಾರು ಜನರ ನೋವಿದೆ ಎಂಬುದನ್ನು ಕಾಲ್ಪನಿಕ ಎಂದು ಹೇಳಿಯೇ ನೈಜ ಕಥೆಯನ್ನು ನಮ್ಮ ಮುಂದೆ ಬಿಚ್ಚಿಡುತ್ತಾರೆ


ಎರಡನೇ ಭಾಗವನ್ನು ನೋಡಲು ಕಾಯುತ್ತಿದ್ದೇವೆ ಎಂದು ಕೆಲವರು ಹೇಳಿದ್ದು, ಭಾರತೀಯ ಚಿತ್ರರಂಗದಲ್ಲೇ ಅತ್ಯುತ್ತಮ ಸೆಕೆಂಡ್ ಆಫ್ ಸಿನಿಮಾ. ಕಣ್ಣು ಒಂಚೂರು ಅತ್ತಿತ್ತ ಹೊರಳಿಸಲು ಬಿಡಲ್ಲ. ಕ್ಲೈಮ್ಯಾಕ್ಸ್ ಮ್ಯಾಜಿಕ್ ಸೂಪರ್ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಭಾವನಾತ್ಮಕ ಸನ್ನಿವೇಶಗಳಿಗೆ ಹಾಗೂ ಕಥೆಗೆ ಪೂರಕವಾಗಿ ರವಿ ಬಸ್ರೂರ್ ಅವರ ಸಂಗೀತ ಹಿತವಾಗಿದೆ. ಹಲವಾರು ಕಡೆ ಇವರ ಸಂಗೀತವೇ ಪ್ರಮುಖ ಆಕರ್ಷಣೆ ಎನ್ನಬಹುದು.  


ಟ್ವಿಟರ್‌ನಲ್ಲಿ ಅಭಿಮಾನಿಗಳ ಉತ್ತರ ನೋಡಿ 👇👇


ಒಟ್ಟಾರೆ ಕನ್ನಡದ ಎಲ್ಲ ಚಿತ್ರಗಳ ದಾಖಲೆಯನ್ನು ಮುರಿದ K G F .

ಇಂಥ ಕನ್ನಡ ಚಿತ್ರ ಮಿಸ್ ಮಾಡ್ಕೋಬೇಡಿ ಹತ್ತಿರದ ಚಿತ್ರ ಮಂದಿರಕ್ಕೆ ಹೋಗಿ ಚಿತ್ರವನ್ನು ನೋಡಿ .




K G F ಸಿನಿಮಾ ಮಧ್ಯಂತರ ತಡೆಯಾಜ್ಞೆ, ಯಶ್ ಅಭಿಮಾನಿಗಳಿಗೆ ನಿರಾಸೆ








ದೇಶಾದ್ಯಂತ ನಾಳೆ ತೆರೆಕಾಣಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹು ನಿರೀಕ್ಷಿತ 'ಕೆಜಿಎಫ್' ಬಿಡುಗಡೆಗೆ ಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.



 ಇದರಿಂದ 'ಕೆಜಿಎಫ್'ಗಾಗಿ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ.
'ಕೆಜಿಎಫ್' ರೌಡಿ ತಂಗಂ ಜೀವನಾಧರಿತ ಸಿನಿಮಾ ಆಗಿದೆ ಎಂದು ಆರೋಪಿಸಿ ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 10ನೇ ಸಿಟಿ ಸಿವಿಲ್ ಕೋರ್ಟ್, 2019, ಜನವರಿ 7ರ ವರೆಗೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ.




ತಂಗಂ ಎಂಬ ಕುಖ್ಯಾತ ರೌಡಿಯ ಜೀವನಾಧಾರಿತ ಕತೆಯನ್ನೇ 'ಕೆ.ಜಿ.ಎಫ್​' ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಆದರೆ ಈ ಹಿಂದೆಯೇ ತಂಗಂ ಜೀವನಾಧಾರಿತ ಕತೆಯನ್ನು ಚಿತ್ರೀಕರಿಸಲು ವೆಂಕಟೇಶ್​ ಅವರು ಹಕ್ಕು ಪಡೆದಿದ್ದರು. ಈಗ ವೆಂಕಟೇಶ್​ ಅವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.

ಅದೇ ರೀತಿ KGF ಎಂಬ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ
ಎಂದು ಅಲ್ಲಲ್ಲಿ ಗುಸು ಪಿಸು ಕೇಳಿ ಬರುತ್ತಿದೆ.

ಟ್ರಯಲ್ ಮೂಲಕ ಭಾರಿ ಸುದ್ದಿ ಮಾಡಿದ್ದ ಭರವಸೆ ಮೂಡಿಸಿದ್ದ ಕೆಜಿಎಫ್​ ಚಿತ್ರ ಸುಮಾರು 40 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಕನ್ನಡ ಸೇರಿದಂತೆ ಇತರೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಶುಕ್ರವಾರ ಬಿಡುಗಡೆಯಾಗಬೇಕಿತ್ತು.
ರಾಜ್ಯದಲ್ಲಿ 340ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ ಬಿಡುಗಡೆಗೆ ಸಿದ್ಧವಾಗಿತ್ತು.

ಇವೆಲ್ಲದರ ನಡುವೆ KGF ಸಿನಿಮಾ ನಾಳೆ ಬಿಡುಗಡೆ ಆಗೆ ಆಗುತ್ತೆ ಎನ್ನುವ ಭರವಸೆ K G F ತಂಡ ನೀಡಿದೆ.  ನಿರಾಶಾರಗದೆ ಕಾದು  ನೋಡೋಣ.

ಖ್ಯಾತ ನಟಿ ಸಿತಾರ ಸಂದರ್ಶನ ನೀಡುವ ವೇಳೆ ಒಂದು ದೊಡ್ಡ ಸತ್ಯವನ್ನು ಬಾಯಿಬಿಟ್ಟಿದ್ದಾರೆ



ಸಿತಾರಾ ಇವರು ಒಬ್ಬ ಪ್ರಸಿದ್ಧ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿ..ಸಿತಾರಾ ಅವರು ಹುಟ್ಟಿದ್ದು ಕೇರಳದಲ್ಲಿ 30 ಜೂನ್ 1973 ರಲ್ಲಿ.. ತಂದೆಯ ಹೆಸರು ಪರಮೇಶ್ವರಂ ತಾಯಿಯ ಹೆಸರು ವಲ್ಸಲಾ ನಾಯರ್. ಸಿತಾರ ಅವರ ಮೊದಲ ಚಿತ್ರ ತಮಿಳು ಪುದು ಪುದು ಅರ್ಥ0ಗಲ್ ಸಿನಿಮಾದ ಮುಖಾಂತರ ಚಿತ್ರರಂಗಕ್ಕೆ 1989 ರಲ್ಲಿ ಪ್ರವೇಶ ಮಾಡುತ್ತಾರೆ.




ತದನಂತರ ಕನ್ನಡ ತೆಲುಗು ಸೇರಿದಂತೆ 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಸಿತಾರ ಇತ್ತೀಚೆಗೆ ಒಂದು ಖಾಸಗಿ ವಾಹಿನಿಯಲ್ಲಿ ಸಂದರ್ಶನ ನೀಡುವ ವೇಳೆ ಒಂದು ದೊಡ್ಡ ಸತ್ಯವನ್ನು ಬಾಯಿಬಿಟ್ಟಿದ್ದಾರೆ, ಅದು ಏನೆಂದರೆ ಸಿತಾರಾ ಅವರಿಗೆ ಈಗ 45 ವರ್ಷ ಆಗಿದೆ ಆದರೂ ಮದುವೆ ಆಗಿಲ್ಲ ಅನ್ನುವ ಸುದ್ದಿ.ಇದಕ್ಕೆ ಕಾರಣ ಕೂಡ ಅವರೇ ಕೊಟ್ಟಿದ್ದಾರೆ.ಸಿತಾರಾ ಅವರಿಗೆ ನಟ ಮುರಳಿ ಎಂಬುವರು ತುಂಬಾ ಹತ್ತಿರದ ಗೆಳೆಯ ಆಗಿದ್ದರು,ಮುರಳಿ ಅಕಾಲಿಕ ಸಾವಿನಿಂದ ಸಿತಾರಾ ಜೀವನ ಇಷ್ಟೆ ಎನ್ನುವ ಖಿನ್ನತೆ ಉಂಟು ಆಯಿತಂತೆ,




 ಅದೇ ಸಮಯದಲ್ಲಿ ತನ್ನ ತಂದೆ ಕೂಡ ತೀರಿ ಹೋದರಂತೆ.. ಈ ಎರಡು ಘಟನೆಗಳು ಸಿತಾರಗೆ ತುಂಬಾ ನೋವನ್ನು ಉಂಟು ಮಾಡಿತು..ಇಂಥಹ ಎರಡು ನೋವಿನ ಘಟನೆಗಳು ತಮ್ಮ ಜೀವನದಲ್ಲಿ ಮದುವೆ ಆಗದೇ ಹೀಗೆ ಇರಬೇಕು ಎನ್ನುವ ನಿರ್ಧಾರ ಕೈ ತೆಗೆದುಕೊಂಡರಂತೆ. ಆದರು ಕೂಡಾ ತಮ್ಮ ಚಿತ್ರರಂಗ ಜೀವನವನ್ನು ಬಿಡದೆ ಪೋಷಕ ನಟಿ ಆಗಿ ಜೀವನ ಸಾಗಿಸುತ್ತ ಇದ್ದಾರೆ ಹೀಗೆ ಒಂದು ಸಂದರ್ಶನದ ವೇಳೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ...


Subscribe Actioncut Studio YouTube Channel for more updates and videos.

Wednesday, 19 December 2018

16 ನೇ ವರ್ಷಕ್ಕೆ ಕೋಟಿ ದುಡ್ಡು ತನ್ನ ದಾಗಿಸಿಕೊಂಡ ಪ್ರಯಾಸ್ - ಅಷ್ಟಕ್ಕೂ ಆರ್ ಸಿ ಬಿ ಖರೀದಿಸಿದ್ದೂ ಏಕೆ??


ಜೈಪುರ: 2019ರ ಐಪಿಎಲ್ ಆವೃತ್ತಿಯಲ್ಲಿ ಭಾರತದ ಯುವ ಆಟಗಾರರು ಹೆಚ್ಚಿನ ಅವಕಾಶಗಳನ್ನು ಪಡೆದಿದ್ದು, 20 ಲಕ್ಷ ರೂ. ಮೂಲ ಬೆಲೆ ಹೊಂದಿದ್ದ 16 ವರ್ಷದ ಪ್ರಯಾಸ್ ರೇ ಬರ್ಮನ್ ಬರೋಬ್ಬರಿ 1.5 ಕೋಟಿ ರೂ.ಗೆ ಹರಾಜು ಆಗುವ ಮೂಲಕ ದಾಖಲೆ ಬರೆದಿದ್ದಾರೆ.

ಬೆಂಗಾಲ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ಪ್ರಯಾಸ್ 16 ವರ್ಷಕ್ಕೆ ಕೋಟಿ ರೂ. ಮೊತ್ತಕ್ಕೆ ಹರಾಜದ ಹೆಗ್ಗಳಿಕೆಯನ್ನು ಪಡೆದಿದ್ದು, ಆರ್‌ಸಿಬಿ ತಂಡ ಪ್ರಯಾಸ್ ಅವರನ್ನು ಖರೀದಿಸಿದೆ. ಕೇವಲ ಪ್ರಯಾಸ್ ಮಾತ್ರವಲ್ಲದೇ ಹಲವು ಯುವ ಭಾರತೀಯ ಆಟಗಾರರಿಗೆ ಈ ಬಾರಿಯ ಐಪಿಎಲ್ ಹರಾಜು ಪ್ರಕ್ರಿಯೆ ಹಲವು ಅಚ್ಚರಿ ಫಲಿತಾಂಶಗಳನ್ನು ನೀಡಿದೆ.





ಯುವ ಆಟಗಾರ ಕೊಹ್ಲಿ ನಾಯಕತ್ವದ ತಂಡಕ್ಕೆ ಆಗುವ ಮೂಲಕ ತನ್ನ ಸಾಮರ್ಥ್ಯವನ್ನ ಸಾಬೀತು ಪಡಿಸಲು ಉತ್ತಮ ಅವಕಾಶವನ್ನು ಪಡೆದಿದ್ದು, `ಮಿಸ್ಟರಿ’ ಸ್ಪಿನ್ನರ್ ಎಂಬ ಹೆಸರು ಪಡೆದಿರುವ ಪ್ರಯಾಸ್ 20 ರನ್ ನೀಡಿ 4 ವಿಕೆಟ್ ಪಡೆದಿರುವುದು ಇದೂವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ. 2002 ರಲ್ಲಿ ಜನಿಸಿರುವ ಪ್ರಯಾಸ್ ಬೌಲರ್ ಮಾತ್ರವಲ್ಲದೇ ಉತ್ತಮ ಆಲ್‍ರೌಂಡರ್ ಆಗಿದ್ದು, ಬಲಗೈ ಬ್ಯಾಟ್ಸ್ ಮನ್ ಕೂಡ ಆಗಿದ್ದಾರೆ.

ಇದುವರೆಗೂ ಆಡಿರುವ 9 ಲಿಸ್ಟ್ ಪಂದ್ಯಗಳನ್ನು ಆಡಿರುವ ಪ್ರಯಾಸ್ 6 ಇನ್ನಿಂಗ್ಸ್ ಗಳಲ್ಲಿ ಬ್ಯಾಟಿಂಗ್ ನಡೆಸಿ 47 ರನ್ ಗಳಿಸಿದ್ದರೆ ಹಾಗೂ ಬೌಲಿಂಗ್‍ನಲ್ಲಿ 11 ವಿಕೆಟ್ ಪಡೆದಿದ್ದಾರೆ. ಉಳಿದಂತೆ ವಿಜಯ್ ಹಜಾರೆ ಟೂರ್ನಿಯಲ್ಲಿ ಉತ್ತಮ ಎಕಾನಮಿಯೊಂದಿಗೆ 11 ವಿಕೆಟ್ ಪಡೆದುಕೊಂಡಿದ್ದಾರೆ. ಮೊದಲು ದೆಹಲಿ ತಂಡದ ಪರ ಆಡಿದ್ದ ಪ್ರಯಾಸ್ ಬಳಿಕ ಬೆಂಗಾಲ್ ತಂಡವನ್ನು ಸೇರಿಕೊಂಡಿದ್ದರು.





ರಾತ್ರೋರಾತ್ರಿ ದೇಶಾದ್ಯಂತ ಸುದ್ದಿಯಾಗಿರುವ ಪ್ರಯಾಸ್ ಕೆಲ ದಿನಗಳ ಹಿಂದೆ ಟೀಂ ಇಂಡಿಯಾ ನಾಯಕ ಕೊಹ್ಲಿ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹವಣಿಸುತ್ತದ್ದರು. ಆದರೆ ಇಂದು ಕೊಹ್ಲಿ ನಾಯಕತ್ವದ ತಂಡದಲ್ಲಿ ಸ್ಥಾನಗಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಯಾಸ್ ಆಯ್ಕೆಯ ಕುರಿತು ಭಾರೀ ಚರ್ಚೆ ಕೂಡ ನಡೆದಿದ್ದು, ಪ್ರಯಾಸ್ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



Subscribe Actioncut Studio YouTube Channel for more updates and videos.

Tuesday, 18 December 2018

Kannada Top 20 WhatsApp statuses ಗಳು



  1. ಇರೋದನ್ನ ಇರೋಕೆ ಬಿಡದೆ, ಇರುವೆ ಬಿಟ್ಕೊಳೋದೆ ಜೀವನ. (Life, which we take risk even though it is not related to us).
  2. ಕಾಣದ ಕಡಲಿಗೆ. ಹಂಬಲಿಸಿದೆ ಮನ. (Want to see that ocean [life, desire], which I didn’t see yet).
  3. ಪ್ರೀತಿ ಸಾಯೋಲ್ಲ ನಿಜ, ಪ್ರೀತ್ಸೋಳ್ ಸಾಯಲ್ವ? ಪ್ರೀತ್ಸೋಳ್ ಸತ್ಮೇಲೆ ಇನ್ನೊಬ್ಬಳು ಸಿಗಲ್ವಾ? ( Truth is love won't die, but lovers does)
  4. ಪ್ರೀತಿ, ಬಾ ಎಂದು ಅಂದಾಗ ಎಂದು ಬರೋದಿಲ್ಲ...! ಹೋಗ್ ಎಂದು ಅಂದಾಗ, ಎಂದೆಂದೂ ಹೋಗೋಲ್ಲ...! (Love, never comes when you want, never go away when you don’t)
  5. ರಸಿಕ ಕಣ್ಣಿಗೆ, ಚೆಲುವೆಯೆ ಹೋಳಿಗೆ (beauty Is sweet for those who loves beauty).
  6. ಬೆಳಗಿನ ಸೂರ್ಯನಂತೆ ಹೊಳೆಯುತಿರುವೆ ನೀನು (you're shining like a rising sun ☀ in morning)
  7. ಮತ್ತೆ ಮತ್ತೆ ನೆನಪಾಗಬೇಡ ಗೆಳತಿ, ಪ್ರತಿ ಸಾರಿ ಕಣ್ಣಿಗೆ ದೂಳು ಬಿತ್ತೆಂದರೆ ಯಾರೂ ನಂಬುವುದಿಲ್ಲ.
  8. ಭಯಕೃತ್ ಭಯನಾಶನಃ- ಭಯ ಹುಟ್ಟಿದೆಡೆಯಲ್ಲೇ ನಾಶ ಕೂಡ (where fear born, there only it will die)
  9. ಮೊಗ್ಗನ್ನು ಒತ್ತಾಯಿಸಿ ಅರಳಿಸಿದಂತೆ ನಗು ಮುಖಗಳು…
  10. ನಾವು ಮನುಷ್ಯರಾಗಿ ಹುಟ್ಟಿಲ್ಲ , ಮನುಷ್ಯರಾಗಲು ಹುಟ್ಟಿದ್ದೇವೆ :)
  11. ಮರೆಯಲೆತ್ನಿಸಿದರು ಮರುಕಳಿಸೊ ನೆನಪಿರಲು ಜೊತೆಯಲಿ: when you try to forget something, but those memories that reiterate in your mind
  12. ಹರಿವ ನೀರಂತಿರಲಿ ಜೀವನ: life should be like running water
  13. ಮತ್ತೆ ಮಳೆ ಹುಯ್ಯುತಿದೆ, ಎಲ್ಲಾ ನೆನಪಾಗುತಿದೆ. - It's raining again reminding everything!
  14. ಅಲ್ಲೊಂದು ಹಕ್ಕಿ ಇಲ್ಲೊಂದು ಮುಗುಳು. A dove yonder and a smile here!
  15. ಕಡಲ ನೀಲಿಯೊಳು ಕರಗಬಹುದೆ ನಾನು? Will I ever be able to merge into its (the blue sea) colour?
  16. ಪಾಟಿ ಮ್ಯಾಲ್ ಪಾಟಿ, ನಮ್ ಸಾಲಿ ಸೂಟಿ! Throw slates aside, it's vacations!
  17. ಇದ್ಕೊಂದ್ ಸ್ಟೇಟಸ್ ಬೇರೆ ಕೇಡು! - This(WhatsApp) even deserves a status!
  18. ಎಂದಾದರೊಂದು ದಿನ ನನ್ನ ಸಹನೆ ನಿನ್ನ ವಂಚನೆ ಮಾತಾಡಿಕೊಳ್ಳಲಿ.- Let my patience and your betrayal converse with each other someday.
  19. ಕಣ್ನು ತೆರೆದು ಕಾಣುವ ಕನಸೇ ಜೀವನ (Kannu teredu kaanuva, kanase jeevana).
  20. ಬದುಕು ಜಟಕಾಬಂಡಿ, ವಿಧಿ ಅದರ ಸಾಹೇಬ (Baduku jataka bandi, vidhi adara saheba),

Monday, 17 December 2018

ವಯಸ್ಸಿಗೆ ಬಂದ ಮಗಳನ್ನು ನೋಡಿದಾಗ ತಂದೆಯ ಮನಸಲ್ಲಿ ಮೂಡುವ ಅಂಶವೇನು


ಹೆಣ್ಣು ಮಕ್ಕಳನ್ನು ಪಡೆದಿರುವ ಎಲ್ಲಾ ಅದೃಷ್ಟವಂತ ಅಪ್ಪಂದಿರಿಗೆ ಇದು ಸಮರ್ಪಣೆ..😊😊
ಹೆರಿಗೆಗೆಂದು ಆಪರೇಷನ್ ರೂಮಿನೊಳಗೆ ಕೊಂಡೊಯ್ಯುತ್ತಿರುವ ತನ್ನ ಪತ್ನಿಯನ್ನು ಕೊನೆಯದಾಗಿ ” ನಿನಗೇನೂ ಆಗಲ್ಲ ಚಿನ್ನೂ , ಏನೂ ಹೆದರಬೇಡ ” ಅಂತ ಒಳಗೊಳಗೆ ಅಳುತ್ತಿದ್ದರೂ , ತೋರ್ಪಡಿಸದೆ ಆಕೆಯ ಕೂದಲ ಮೇಲೆ ಪ್ರೀತಿಯಿಂದ ಸವರುತ್ತಾ, ಆಕೆಯ ಹಣೆಗೆ ಮುತ್ತಿಕ್ಕಿ  ಸಾಂತ್ವನ ಹೇಳುತ್ತಾ ಕಳುಹಿಸಿಕೊಡುವಾಗ – ” ಓ ದೇವರೇ ತಾಯಿ ಮಗುವನ್ನು ನೀನೇ ಕಾಪಾಡು ” ಎಂಬ ಪ್ರಾರ್ಥನೆಯಾಗಿರುತ್ತದೆ ಗಂಡನಾದವನ ಮನಸಲ್ಲಿ….


ನಿಮ್ಮ ಪತ್ನಿ ಹೆಣ್ಣುಮಗುವೊಂದಕ್ಕೆ ಜನ್ಮ ನೀಡಿದ್ದಾಳೆ ತಾಯಿ ಮಗು ಚೆನ್ನಾಗಿದ್ದಾರೆ… ಅಂತ ಡೋರ್ ತೆರೆದು ಬಂದ ನರ್ಸ್ ಹೇಳುವಾಗ ಆತನ ಕಣ್ಣುಗಳಲ್ಲಿ ಆತಂಕ ಮತ್ತು ಮನದೊಳಗೆ ಸಂತೋಷವೂ ಕಾಣಿಸುತ್ತದೆ ಆ ತಂದೆಯಲ್ಲಿ….

ನಂತರದ ದಿನಗಳಲ್ಲಿ ಆ ಮುದ್ದು ಮಗಳ ಉತ್ತಮ ಭವಿಷ್ಯವನ್ನು ರೂಪಿಸುವ ತಯಾರಿಯಲ್ಲಿ ಮಾತ್ರ ಬ್ಯುಸಿಯಾಗಿರುತ್ತಾರೆ ಆ ತಂದೆ…..


ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲುಹಿ, ಸಂತೋಷದ ದಿನಗಳುರುಳುತ್ತಿದ್ದಂತೆ ಒಂದು ದಿನ ಆಕೆ ಋತುಮತಿಯಾದಾಗ ,  ಮೊದಲು ಆ ತಂದೆಯ ಮನಸೊಮ್ಮೆ ಮರುಗಿತಾದರೂ , ಈ ಕ್ರಿಯೆಯು ಯಾವತ್ತಾದರೂ ಹೆಣ್ಣೊಬ್ಬಳಿಗೆ ಆಗಲೇ ಬೇಕಲ್ಲವೇ ಅಂತ ತನ್ನನ್ನು ತಾನೇ ಸಂತೈಸುವ ಮನಸಾಗಿರುತ್ತದೆ ಆ ತಂದೆಯದ್ದು….


ವಯಸಿಗೆ ಬಂದ ಮಗಳ ಶರೀರ ಭಾಗಗಳಲ್ಲಿ ಬೆಳವಣಿಗೆಯ ಬದಲಾವಣೆಯಾದಾಗ ಆ ತಂದೆಯ ಮನಸಲ್ಲಿ ಭಯವೆಂಬ ಕಪ್ಪುಛಾಯೆ ನೆಲೆಯೂರುತ್ತದೆ….


ನಂತರದ ದಿನಗಳಲ್ಲಿ ಮಗಳ ಪ್ರಯಾಣ ಮತ್ತು ವಸ್ತ್ರಧಾರಣೆಯು ತಂದೆ ಹೇಳುವ ಪ್ರಕಾರವೇ ಆಗಿರುತ್ತದೆ….


ದಿನನಿತ್ಯ ಮನೆಗೆ ಬೇಕಾದ ಸಾಮಾನುಗಳನ್ನು ಖರೀದಿಸುವಾಗ ಖರ್ಚುಗಳನ್ನು ಕಡಿಮೆ ಮಾಡಿಯೂ , ಸಾಮಾನುಗಳ ಬೆಲೆಯನ್ನು ಚರ್ಚೆ ಮಾಡಿಯೂ ಮಗಳ ಮದುವೆ ಖರ್ಚಿಗಾಗಿ ಒಂದೊಂದು ರುಪಾಯಿಗಳನ್ನು ಒಟ್ಟುಗೂಡಿಸುತ್ತಿರುತ್ತಾರೆ ಆ ತಂದೆ….

ತಡ ರಾತ್ರಿಯವರೆಗೂ ಮಗಳ ಕೋಣೆಯಲ್ಲಿ ಲೈಟ್ ಆನ್ ಮತ್ತು ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಾ ಕುಳಿತಿರುವ ಮಗಳನ್ನು ನೋಡುವಾಗ ಆ ತಂದೆಯ ಮನಸಿನಲ್ಲಿ ಒಂದೇ ಪ್ರಾರ್ಥನೆಯಾಗಿರುತ್ತದೆ – “ದೇವರೇ ಮಗಳು ದಾರಿತಪ್ಪದಿರಲಿ… ಮಗಳ ನಡೆ ಒಂದು ಅವಗಡಕ್ಕೆ ಕಾರಣವಾಗದಿರಲಿ…..”


ಮಗಳನ್ನು ಕಾಣಲು ಬಂದ ವರನ ಮುಂದೆ ಮಗಳನ್ನು ಕರೆತಂದು ನಿಲ್ಲಿಸುವಾಗ ಆ ತಂದೆಯ ಮುಖದಲ್ಲಿ ಮುಗುಳ್ನಗುವಿದ್ದರೂ, ಆ ಮನಸಲ್ಲಿ ಒಂದು ನಡುಕ ಉಂಟಾಗುವುದು….. ತನ್ನ ಮುದ್ದು ಮಗಳನ್ನು ಅಪರಿಚಿತನೊಬ್ಬನ ಮನೆಗೆ ಕಳುಹಿಸಿಕೊಡುವುದನ್ನು ನೆನೆದು ಉಂಟಾದ ನಡುಕ….


ಮದುವೆ ನಿಶ್ಚಯವಾದರೆ ದಿನಗಳು ಬೇಗಬೇಗ ಉರುಳುತ್ತಿರುವಂತೆ ಅನಿಸುತ್ತದೆ ಆ ತಂದೆಗೆ…. ಮನೆಯಲ್ಲಿ ಒಂದು ಕಪ್ ಟೀಯನ್ನು ಕೂಡಾ ನೆಮ್ಮದಿಯಿಂದ ಕುಡಿಯಲು ಸಾಧ್ಯವಾಗದಷ್ಟು ಅಲ್ಲೋಲಕಲ್ಲೋಲವಾಗಿರುತ್ತದೆ ಆ ತಂದೆಯ ಮನಸು…..


ಮದುವೆ ದಿನದಂದು ಆ ಅಪರಿಚಿತನ ಕೈಗೆ ತನ್ನ ಮಗಳ ಕೈಯನ್ನು ಜೋಡಿಸಿ ಹಿಡಿಯುವಾಗ ಆ ತಂದೆಯ ತುಂಬಿದ ಕಣ್ಣುಗಳು ಮತ್ತು ದುಃಖ ತಡೆಯಲಾಗದೆ ನಡುಗುತ್ತಿರುವ ತುಟಿಗಳು ಕಾಣುವುದು…


ಮನೆಯ ಮೆಟ್ಟಿಲುಗಳನ್ನು ಇಳಿದು ಹೋಗುವಾಗ ತನ್ನ ಎದೆಯ ಮೇಲೆ ಮಲಗಿದ ಮುದ್ದು ಮಗಳ ಬಾಲ್ಯದ ನೆನಪುಗಳಾಗಿರುತ್ತದೆ ಆ ತಂದೆಯ ಮನಸಲ್ಲಿ…..


ಮದುವೆಯ ಕಾರ್ಯಕ್ರಮವೆಲ್ಲಾ ಮುಗಿದ ನಂತರದ ದಿನಗಳಲ್ಲಿ ಮದುವೆಯ ಖರ್ಚು ವೆಚ್ಚಗಳ ಲೆಕ್ಕಾಚಾರ ಮತ್ತು ಮದುವೆಗಾಗಿ ಮಾಡಿದ ಸಾಲವನ್ನು ತೀರಿಸಲು ಆ ತಂದೆಯು ಕಷ್ಟಪಡುವ ದಿನರಾತ್ರಿಗಳಾಗಿರುತ್ತದೆ….


ತಂದೆಯ ತ್ಯಾಗಮಯವಾದ ಜವಾಬ್ದಾರಿಕೆಗೆ ಬೆಲೆಕಟ್ಟಲಾಗದು…..

ಲವ್ ಯು ಅಪ್ಪ ..🙏🙏🙏 -


Subscribe Actioncut Studio YouTube Channel for more updates and videos.

K G F ನ ಧೀರ ಧೀರ ಹಾಡು ಸಾಹಿತ್ಯ ದೊಂದಿಗೆ ರಿಲೀಸ್ ಆಗಿದೆ ನೋಡಿ







Subscribe Actioncut Studio YouTube Channel for more updates and videos.



9ನೇ ತರಗತಿಯಲ್ಲಿ ರಾಕೀ ಕಟ್ಟಿದ ಹುಡುಗಿ , ಅವಳ ಮದುವೆ ಆದ ನಂತರ ರಾಕೀ ಕಟ್ಟಿದ ಹುಡುಗನಿಗೆ ಏನು ಮಾಡಿದಳು.


ಮನುಷ್ಯ ಮನುಷ್ಯರ ನಡುವೆ ಒಂದು ಸಣ್ಣ ಅಂಶ ಎಷ್ಟು ದಿನ ಇರುತ್ತೆ ಒಂದು ಸಣ್ಣ ಕಥಾ ನಿಮಗಾಗಿ 
1 ನಿಮಿಷ ಸಮಯವಿದ್ದರೆ ತಪ್ಪದೇ ಈ ಮನಮುಟ್ಟುವ ಕಥೆಯನ್ನೊಮ್ಮೆ ಓದಿ. ಶೇರ್ ಮಾಡಿ
9 ನೇ ಕ್ಲಾಸಿನಲ್ಲಿ ರಾಕಿ ಕಟ್ಟಿ ಎಲ್ಲೊ ಹೋದಳು.. ಈಗ ಬಂದು ಮಾಡಿದ್ದೇನು ಗೊತ್ತಾ?? ನಿಜಕ್ಕೂ ಕಣ್ಣೀರು ಜಾರುವ ಕತೆ.. ತಪ್ಪದೇ ಇದನ್ನೊಮ್ಮೆ ಓದಿ..


ಆ ಹುಡುಗ ರಿಕ್ಷಾ ಓಡಿಸ್ಕೊಂಡು ಜೀವನ ಸಾಗಿಸ್ತಿದ್ದ ಬಡವ.. ಒಂದು ದಿನ ಅಪಘಾತಕ್ಕೀಡಾಗಿ ಎರಡೂ ಕಾಲು ಕಳೆದುಕೊಂಡು ಮಣಿಪಾಲ್ ಆಸ್ಪತ್ರೆಯಲ್ಲಿ ನರಳಾಡ್ತಿದ್ದ..ಈ ವಿಷಯ ತಿಳಿದು ದೂರದ ದೆಹಲಿಯಿಂದ ಒಂದು ಹುಡುಗಿ ಮಣಿಪಾಲ್ ಆಸ್ಪತ್ರೆಗೆ ಬಂದು ನೆರವಿಗೆ ನಿಂತಳು. ಅವಳು ಯಾರು??.. 


16 ವರ್ಷದ ಹಿಂದೆ ರಾಖಿ ಕಟ್ಟಿದ ಒಂದು ಹುಡುಗಿ… ಬೆಡ್ ಮೇಲೆ ಮಲಗಿರೋ ಈತನ ಹೆಸರು ರಮಾನಂದ್.ನಮ್ಮ ರಾಜ್ಯದ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಬಳಿ ವಾಸವಿದ್ದವ ಈತ…ಎಸ್ಎಸ್ಎಲ್​ಸಿ ಬಳಿಕ ಮುಂದೆ ಓದಲಾಗದೆ ಬಸ್ ಕ್ಲೀನರ್, ಕಂಡಕ್ಟರ್ ಆಗಿದ್ದ ರಮಾನಂದ್ ಕೊನೆಗೆ ಸಾಲ ಮಾಡಿ ಒಂದು ಆಟೋ ರಿಕ್ಷಾ ತಗೊಂಡಿದ್ದ. ನಂತರ ಆಟೋ ಓಡಿಸಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ರಮಾನಂದ್​ಗೆ ಆಗಸ್ಟ್ 20ರಂದು ಕಾರ್ಕಳ ಬಳಿ ಅಪಘಾತವಾಯ್ತು… 


ಆಗ ಎರಡೂ ಕಾಲು ಕಳೆದುಕೊಂಡ ಅವನನ್ನು ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಈತನದ್ದು ಬಡ ಕುಟುಂಬ ಆಸ್ಪತ್ರೆ ಖರ್ಚು ನಿರ್ವಹಣೆ ಮಾಡುವುದಕ್ಕೂ ಕಷ್ಟ.. ಈ ಸಮಯದಲ್ಲಿ ರಮಾನಂದನ ಕೆಲವು ಗೆಳೆಯರು ಸಾಮಾಜಿಕ ಜಾಲತಾಣಗಳಲ್ಲಿ ಸಹಾಯಕ್ಕಾಗಿ ಪೋಸ್ಟ್​ಗಳನ್ನು ಹಾಕಿದ್ದರು.. ಬಹಳಷ್ಟು ಜನ ಇದನ್ನು ನೋಡಿ ಸಹಾಯ ಮಾಡಿದರು.ಅಷ್ಟೇ ಅಲ್ಲ ಈ ಸಮಯದಲ್ಲಿ ಹೈಸ್ಕೂಲ್​​ನಲ್ಲಿ ರಾಖಿ ಕಟ್ಟಿದ ತಂಗಿಯೊಬ್ಬಳು ಸಹಾಯಕ್ಕೆ ಬಂದಿದ್ದು ನಿಜಕ್ಕೂ ಮಾನವೀಯತೆ ಬದುಕಿದೆ ಎಂಬುದ ತೋರುತ್ತದೆ..


ಈಕೆಯೇ ಸ್ಮಿತಾ ಸಂಪತ್. 9ನೇ ತರಗತಿಯಲ್ಲಿದ್ದಾಗ ಈಕೆ ರಮಾನಂದ್​ಗೆ ರಾಖಿ ಕಟ್ಟಿದ್ದಳು.ಈಗ ಸುಮಾರು 16 ವರ್ಷ ಕಳೆದಿದೆ. ಈಗ ಸ್ಮಿತಾ ಮದುವೆಯಾಗಿ ದೆಹಲಿಯಲ್ಲಿದ್ದಳು. ಇವರಿಗ್ರ್ ರಮಾನಂದ್​ಗೆ ಅಪಘಾತವಾಗಿ ಆಸ್ಪತ್ರೆ ಸೇರಿದ್ದಾನೆ ಎಂದು ಗೊತ್ತಾಗ್ತಿದ್ದಂಗೆ ಸ್ಮಿತಾ ದೆಹಲಿಯಿಂದ ಮಣಿಪಾಲ್​ಗೆ ಬಂದಿದ್ದಾರೆ..ಆಸ್ಪತ್ರೆಗೆ ಹೋದ ಸ್ಮಿತಾ ರಮಾನಂದ್​ ಆರೋಗ್ಯ ವಿಚಾರಿಸಿದ್ದಾರೆ. ಸ್ಮಿತಾ ಅವರು ಆಸ್ಪತ್ರೆಯಲ್ಲೇ ಇದ್ದು ತಾನು ರಾಕಿ ಕಟ್ಟಿದ ಅಣ್ಣನ ಯೋಗಕ್ಷೇಮ ವಿಚಾರಿಸಿ… ತನ್ನ ಕೈಲಾದ ಆರ್ಥಿಕ ಸಹಾಯ ಮಾಡಿದ್ದಾಳೆ..


 ಅಷ್ಟಕ್ಕೇ ಸುಮ್ಮನಾಗದ ಸ್ಮಿತ.. ತನ್ನ ಗೆಳೆಯರನ್ನೆಲ್ಲ ಸಂಪರ್ಕಿಸಿ ಹಣ ಸಂಗ್ರಹಿಸಿ ರಮಾನಂದ್​ನ ಆಸ್ಪತ್ರೆ ವೆಚ್ಚ ಭರಿಸಲು ನೆರವಾದಳು. ಇವರೆಲ್ಲ ಸೇರಿಕೊಂಡು ಈಗಾಗಲೇ ಸುಮಾರು ಎರಡೂವರೆ ಲಕ್ಷ ರೂ. ಹಣ ಸಂಗ್ರಹಿಸಿ ರಮಾನಂದ್ ಕುಟುಂಬಕ್ಕೆ ನೀಡಿದ್ದಾರೆ.ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ರಮಾನಂದ್ ನಡೆಯಲು ಆಗುವುದಿಲ್ಲ.. ಹಾಸಿಗೆ ಮೇಲೆ ದಿನ ಕಳೆಯುತ್ತಿದ್ದಾರೆ… 


ಆದರೆ ಸ್ಮಿತಾ ಮಾತ್ರ ತಾನು ಮಾಡಿದ ಸಹಾಯದ ಬಗ್ಗೆ ಎಲ್ಲೂ ಹೇಳಿಕೊಂಡಿರಲಿಲ್ಲ. ಸ್ಮಿತಾಳ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದಿದ್ದರಿಂದ ವಿಚಾರ ತಿಳಿದುಬಂದಿದೆ…ಸಣ್ಣ ವಿಚಾರಕ್ಕಾಗಿ.. ಜಗಳ ಆಡುವ ಅದೆಷ್ಟೋ ಜನ ಸಹೋದರ ಸಹೋದರಿ.. ಸ್ನೇಹಿತರಿಗೆ.. ಸ್ಮಿತ ನಿಜಕ್ಕೂ ಮಾದರಿಯಾಗಿ ನಿಂತಿದ್ದಾರೆ.. ಇವರಿಗೊಣ್ದು ಹ್ಯಾಟ್ಸ್ ಆಫ್.


Subscribe Actioncut Studio YouTube Channel for more updates and videos.

Sunday, 16 December 2018

ತನ್ನ ತಾಯಿಯ ಮರಣದ ದಿನ ಆ ಪತ್ರದಲ್ಲಿ ಕೊನೆಯ ಮಾತು ಎನ್ ಆಗಿತ್ತು ಒಮ್ಮೆ ನೋಡಿ





ಒಂದೂರಿನಲ್ಲಿ ಒಕ್ಕಣ್ಣ ವಿಧವಾ ಸ್ತ್ರೀಯೊಬ್ಬಳು ತನ್ನ ಪುಟ್ಟ ಮಗುವಿನೊಂದಿಗೆ ವಾಸವಾಗಿದ್ದಳು.
ಪ್ರತೀ ದಿನ ಮುಂಜಾನೆ ಎದ್ದು ಅಕ್ಕಪಕ್ಕದ ಮನೆಗಳಲ್ಲಿ ಮುಸುರೆ ತಿಕ್ಕಿ ತನ್ನ ಮಗುವಿನ ಭವಿಷ್ಯ ಕಟ್ಟಲು ಪ್ರಯತ್ನಿಸುತ್ತಿದ್ದಳು.

ಹೀಗೆ ಕಾಲಚಕ್ರ ಉರುಳುತಿತ್ತು.ಮಗು ಬೆಳೆದು ಪ್ರೌಡಾವಸ್ಥೆ ತಲುಪಿತು.ಮಗು ತಾಯಿಯ‌ಬಳಿ "ಅಮ್ಮ ನಿನ್ನ ಒಂದು ಕಣ್ಣಿಗೆ ಏನಾಯಿತು" ಕೇಳಿದಾಗ,ಏನೋ ಒಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು.ಆ ತಾಯಿಗೆ ತನ್ನ ಮಗ ತಾನು ಪಟ್ಟ ಕಷ್ಟ ಪಡದೆ,ಜೀವನದಲ್ಲಿ ಒಬ್ಬ ಸ್ಥಿತಿವಂತನಾಗಬೇಕೆಂಬ ಹಂಬಲ ಮನಸ್ಸೊಳಗೆ ತಳವೂರಿತ್ತು.ಅದಕ್ಕಾಗಿ ಮಗನಿಗೆ ಯಾವುದಕ್ಕೂ ಕೊರತೆ ಬರದಂತೆ ನೋಡಿಕೊಳ್ಳುತ್ತಿದ್ದಳು.

ಮಗು ಹಠ ಮಾಡಿತೆಂದು ಅವರಿವರ ಬಳಿ ಸಾಲ ಮಾಡಿ ಸೈಕಲ್ ಕೊಡಿಸಿದ್ದೂ ಆಯ್ತು.
ಹೀಗಿರುವಾಗ ಒಂದು ದಿನ ತಾಯಿ ತನ್ನ ಮಗನ ಶಾಲೆಗೆ ತೆರಳಿ ಮಗುವಿನ ವಿಧ್ಯಾಬ್ಯಾಸದ ಕುರಿತು ಶಿಕ್ಷಕರ ಜೊತೆ ಮಾತಾಡಿ ಬಂದಳು.ಸಂಜೆ ಮನೆಗೆ ಬಂದ ಮಗ ಜೋರಾಗಿ ಕಿರುಚಿ ರಂಪಾಟ ಮಾಡಿದ.ಆ ತಾಯಿ ಮಗನಲ್ಲಿ ಯಾಕೆ ಏನಾಯಿತು ಅಂತ ಕೇಳುವಾಗ "ಅಮ್ಮಾ ನೀನಿನ್ನು ನನ್ನ ಶಾಲೆಗೆ ಬರಕೂಡದು.ನನ್ನ ಸಹಪಾಠಿ ವಿಧಾರ್ಥಿಗಳೆಲ್ಲಾ ನಿನ್ನ ಒಕ್ಕಣ್ಣು ನೋಡಿ ತಮಾಷೆ ಮಾಡುತ್ತಾರೆ" ಎಂದು ಹೇಳಿಬಿಟ್ಟ.

ತಾಯಿಗೆ ಮನಸ್ಸೊಳಗೆ ಅತೀವ ನೋವಾದರೂ ತನ್ನ ಮಗುವಿಗೆ ಮುಜುಗರ ಆಗಬಾರದೆಂಬ ಕಾರಣಕ್ಕೆ ಇನ್ನು ಶಾಲೆಗೆ ಬರಲಾರೆ ಎಂದು ಸಮಾದಾನಿಸಿದಳು.
ಮಗು ಬೆಳೆದು ಕಾಲೇಜ್ ಸೇರಿದ.ಈಗ ತನಗೆ ಬೈಕ್ ಬೇಕೆಂದು ಹಠ ಮಾಡತೊಡಗಿದ.ಕೈಯಲ್ಲಿ ನಯಪೈಸೆ ಇಲ್ಲದ ಆ ತಾಯಿ ತನ್ನ ಕತ್ತಿನಲ್ಲಿದ್ದ ಸರವನ್ನೂ ಮಾರಿ ಮಗನಿಗೊಂದು ಬೈಕ್ ತೆಗೆದು ಕೊಟ್ಟಳು.

ಮಗ ಕಾಲೇಜ್ ಮುಗಿಸಿ ಒಂದು ‌ಕಂಪನಿಯಲ್ಲಿ ಕೆಲಸಕ್ಕೆ ಸೇರಿದ.ಒಳ್ಳೆಯ ಸಂಬಳ ಕೂಡ ಬರುತಿತ್ತು.ಇನ್ನು ತನ್ನ ಮಗನಿಗೆ ಮದುವೆ ಮಾಡಿಸಿ ತನ್ನ ಕರ್ತವ್ಯದಿಂದ ಮುಕ್ತಿ ಪಡೆಯಬೇಕೆಂದು ಕೊಂಡಳು.ಅದೇ ರಾತ್ರಿ ಮನೆಗೆ ಬಂದ ಮಗನೊಡನೆ ಈ ವಿಚಾರ ಮಾತಾಡಿದಳು.

ಆಗ ಮಗ ತಾನು ತನ್ನ ಕಂಪನಿಯಲ್ಲೆ ಕೆಲಸ ಮಾಡುವ ಯುವತಿಯೊಬ್ಬಳನ್ನು ಪ್ರೀತಿಸುವುದಾಗಿಯೂ ಅವಳನ್ನೇ ಮದುವೆಯಾಗುವುದಾಗಿಯೂ ಹೇಳಿಬಿಟ್ಟ.ಸರಿ ವಯಸ್ಸಿಗೆ ಬಂದ ಮಗನಿಗೆ ಎದುರು ಮಾತಾಡಿ ಮನಸ್ಸು ನೋಯಿಸುವುದು ಬೇಡವೆಂದು ಅದಕ್ಕೂ ಒಪ್ಪಿಗೆ ನೀಡಿದಳು.
ಮಗನ ಇಚ್ಛೆಯಂತೆ ಅದೇ ಹುಡುಗಿ‌ ಜತೆ ಮದುವೆ ನಡೆಯಿತು.

ಮೊದ ಮೊದಲು ಸರಿಯಾಗೇ ಇದ್ದ ಸೊಸೆ ಸ್ವಲ್ಪದಿನ ಕಳೆದಂತೆ ಬೇರೆ ಮನೆ ಮಾಡುವಂತೆ ತನ್ನ ಗಂಡನನ್ನು ದಿನವೂ ಪೀಡಿಸುತ್ತಿದ್ದಳು.
ಈಗಂತು ಕೈಯಲ್ಲೊಂದಷ್ಟು ಹಣವೂ ಇತ್ತು.ಪತ್ನಿಯ ಇಷ್ಟದಂತೆ ಹೊಸ ಮನೆ ಮಾಡಿದ್ದೂ ಆಯಿತು.ಈಗೀಗ ಸೊಸೆಗೆ ತನ್ನ ಒಕ್ಕಣ್ಣ ಅತ್ತೆ ಗಂಡ ಹೆಂಡಿರ ನಡುವೆ ಇರುವುದು ಸರಿತೋರಲಿಲ್ಲ.ಮತ್ತೆ ತನ್ನ ಗಂಡನ ತಲೆಗೆ ಹುಳಬಿಟ್ಟಳು.ಒಂದು ದಿನ ಮಗ ನೆಪವೊಂದನ್ನ ಹೇಳಿ ತಾಯಿಯ ವಾಸ್ತವ್ಯವನ್ನ ಹಳೇ ಮನೆಗೆ ವರ್ಗಾಯಿಸಿಬಿಟ್ಟ.

ಈಗಂತು ಆ ತಾಯಿ ಸಂಪೂರ್ಣ ಕುಸಿದೇ ಹೋದಳು.ಮಗನ ಬೇಕುಬೇಡವನ್ನೆಲ್ಲಾ ಪೂರೈಸುವ ಬರದಲ್ಲಿ ನಯಾ ಪೈಸೆಯೂ ಕೂಡಿಟ್ಟಿರಲಿಲ್ಲ.ಮೊದಮೊದಲು ಪ್ರತಿವಾರವೂ ಬಂದು ಒಂದಷ್ಟು ಹಣ ನೀಡಿ ಹೋಗುತಿದ್ದವ ಈಗೀಗ ಬರವುದೂ ಅಪರೂಪವಾಗಿಬಿಟ್ಟಿತು.
ಆ ತಾಯಿಗೆ ಒಂದು ಹೊತ್ತಿನ ಊಟಕ್ಕೂ ಮಗನ ಹಾದಿ ಕಾಯುವ ಸ್ಥಿತಿ ಬಂತು.ಒಂದು ದಿನ ನೇರವಾಗಿ ಮಗನ ಮನೆಗೆ ಬಂದ ತಾಯಿಗೆ ಸೊಸೆಯ ಚುಚ್ಚು ಮಾತು ಅಪಮಾನವೇ ಬಹುಮಾನವಾಗಿತ್ತು.ಮನನೊಂದ ತಾಯಿ ಉಪವಾಸ ಸತ್ತರೂ ಚಿಂತೆಯಿಲ್ಲ ಮಗನ ಮನೆಗೆ ಮತ್ತೆಂದೂ ಕಾಲಿಡಲಾರೆ ಎಂದು ಮನಸ್ಸಿನಲ್ಲೇ ದೃಡ ಸಂಕಲ್ಪ ಮಾಡಿದಳು.ನೇರವಾಗಿ ಮನಗೆ ಬಂದವಳೇ ವಿಪರೀತ ಜ್ವರದಿಂದ ಹಾಸಿಗೆ ಹಿಡಿದು ಬಿಟ್ಟಳು.ಮಗನಿಗೆ ಸೂಜಿಮೊನೆಯಷ್ಟು ನೋವಾಗಬಾರದೆಂದು ತನ್ನ ಹೃದಯದೊಳಗೆ ಕಾಪಾಡಿದ ತಾಯಿ ದಿನ ಕಳೆದಂತೆ ಹಾಸಿಗೆ ಬಿಟ್ಟು ಏಳಲಾರದ ಸ್ಥಿತಿಗೆ ತಲುಪಿದಳು.

ಒಂದು ದಿನ ಆಫೀಸಿನಲ್ಲಿದ್ದ ಮಗನಿಗೆ ಕರೆಯೊಂದು ಬಂತು."ನಿನ್ನ ತಾಯಿ ಇಂದು ಮುಂಜಾನೆ ತೀರಿ ಹೋದರು,ಚಿತೆಗೆ ಬೆಂಕಿ ಇಡುವುದಕ್ಕಾದರೂ ಬಾ"ಎಂದಷ್ಟೇ ಹೇಳಿ ಕರೆ ಕಟ್ಟ್ ಆಯಿತು.ಸರಿ ಇದೂ ಆಗಲಿ ಮುಂದೆಂದೂ ಆಮುದುಕಿಯ ಕಿರಿಕಿರಿ ಇಲ್ಲವಲ್ಲಾ ಎಂದು ಎದ್ದು ನೇರವಾಗಿ ತಾಯಿಯ ಮನೆಗೆ ಹೋದ.

ಹೋಗಿ ತಾಯಿಯ ಶವ ನೋಡುತ್ತಾನೆ ಇವಳೇನಾ ನನ್ನ ಹೆತ್ತ ತಾಯಿ ಎಂಬ ಸ್ಥಿತಿಗೆ ತಲುಪಿತ್ತು ಆ ತಾಯಿಯ ‌ದೇಹ.ಶವದ ಕಣ್ಣಂಚಲ್ಲಿ ಇನ್ನೂ ನೀರಿತ್ತು.ಸರಿ ಶವ ಸಂಸ್ಕಾರ ಮುಗಿಸಿ ಮನೆಗೆ ಹೊರಟು ನಿಂತ ಮಗನಿಗೆ ನೆರೆಮನೆಯಾತ ಒಂದು ಕಾಗದವನ್ನು ಕೈಗಿಟ್ಟು ಹೋದ.

ಕಾಗದ ತೆಗೆದು ನೋಡಿದ ಮಗನಿಗೆ ನೂರು ಸಿಡಿಲು ಒಂದೇ ಕ್ಷಣ ಬಡಿದಂತ ಅನುಭವವಾಯಿತು.
ಆ ಕಾಗದದಲ್ಲಿ ಹೀಗೆ ಬರೆದಿತ್ತು.

"ಮಗನೇ ನಾನಿನ್ನು ಹೋಗುತ್ತೇನೆ ಆದರೆ ನನ್ನ ಒಂದು ಕಣ್ಣು ಏನಾಯಿತು ಎಂದು ಚಿಕ್ಕವನಿದ್ದಾಗ ನೀನು ಕೇಳುತ್ತಿದ್ದೆ.ಆದರೆ ಇನ್ನೂ ಚಿಕ್ಕ ಮಗುವಾಗಿದ್ದ ನಿನ್ನ ಮನಸ್ಸು ನೋಯಿಸಬಾರದೆಂದು ಏನೇನೋ ಸುಳ್ಳು ಹೇಳುತ್ತಿದ್ದೆ.ಇಂದು ನೀನೂ ಬೆಳೆದು ದೊಡ್ಡವನಾಗಿದ್ದೀಯ.ಸತ್ಯ ನಿನಗೂ ತಿಳಿಯಲಿ.ನೀನು ಚಿಕ್ಕವನಿರುವಾಗ ಆಟವಾಡುವಾಗ ಕೋಲೊಂದು ತಾಗಿ ನಿನ್ನ ಕಣ್ಣು ಹೋಗಿತ್ತು.ನನಗೆ ಇನ್ನು ಆಗಬೇಕಿರುವುದಾದರೂ ಏನು ತನ್ನ ಮಗನ ಜೀವನ ಹಾಳಾಗಬಾರದೆಂದು ನನ್ನ ಒಂದು ಕಣ್ಣನ್ನ ನಿನಗೆ ನೀಡಿದ್ದೆ.

ಇಂದು ನಿನಗೆ ಈ ಒಕ್ಕಣ್ಣ ತಾಯಿ ಬೇಡವಾದೆ.
ಪರವಾಗಿಲ್ಲ ಮಗು.ಆದರೆ ನನ್ನದೊಂದು ಪುಟ್ಟ ಕೋರಿಕೆಯಿದೆ.ನನ್ನ ಆ ಕಣ್ಣಿನಲ್ಲಿ ಎಂದಿಗೂ ನೀರು ಬರಬಾರದು". ಎಂದು ಬರೆದಿತ್ತು.ಆಗ ಮಗನಿಗೆ ಅರಿಯದಂತೆ ಕಣ್ಣಲ್ಲಿ ಧಾರಾಕಾರವಾಗಿ ನೀರಿಳಿಯಿತು.ಧಗಧಗನೆ ಉರಿಯುವ ತಾಯಿಯ‌ ಚಿತೆಯನ್ನೇ ನೋಡುತ್ತಾ ನಿಂತ ಮಗನಿಗೆ ತಾಯಿಯ‌ ಕಾಲಕೆಳಗೆ ಬಿದ್ದು ಅಳಬೇಕೆನಿಸಿತು.ಆದರೆ ಕಾಲ ಮೀರಿತ್ತು.ಆ ಮಹಾದಾನಿ ತಾಯಿ ಈ ಭೂಮಿಯಿಂದ ಬಹುದೂರ ಸಾಗಿ ಗಗನದಲ್ಲಿ ಮಿನುಗುವ ತಾರೆಯಂತೆ ಹೊಳೆಯುತಿದ್ದಾಳೆ.

(ಆತ್ಮೀಯ ಮಿತ್ರರೇ ತಾಯಿ ಎಂಬ ಎರಡು ಪದದಲ್ಲಿ ಅಸಾಧ್ಯವಾದ ತ್ಯಾಗವಿದೆ,ನೋವಿದೆ.ಮಕ್ಕಳ ಏಳಿಗಾಗಿ ಒಬ್ಬ ತಾಯಿ ಏನೆಲ್ಲಾ ತ್ಯಾಗ ಮಾಡಬಹುದೆಂದು ಒಂದು ಚಿಕ್ಕ ಕಥೆಯ ಮೂಲಕ ವಿವರಿಸುವುದು ಅಸಾಧ್ಯ.ತಾಯಿಯೆಂದರೆ ಅದು ದೇವರ ಪ್ರತಿರೂಪ ಅಲ್ಲವೇ..))

Friday, 14 December 2018

ಹೊಸ ಕಿರುಚಿತ್ರದ ಪೋಸ್ಟರ್ ರಿಲೀಸ್ ಸಂತೆ

ಪುಟಗೋಸಿ , ಗೋಣಿಚೀಲ , ಜೋಡಿಕುದುರೆ ಕಿರುಚಿತ್ರ ಖ್ಯಾತಿಯ ಟೀಮ್ ,

ಈಗ ಇನ್ನೊಂದು ಹೊಸ ಕಿರುಚಿತ್ರದ ಪೋಸ್ಟರ್ ರಿಲೀಸ್ ಮಾಡ್ದಿದಾರೆ.




ಕಿರುಚಿತ್ರದ ನಿರ್ದೇಶಕರಾದ ಸಂತೋಷ ಶ್ರೀಕಂಠಪ್ಪ  ಜನವರಿ ೧೫ ನಂತರ ಕಿರುಚಿತ್ರ ಬಿಡುವುದಾಗಿ ಹೇಳಿದ್ದಾರೆ . 

ಭೂಮಿ ಹುಣ್ಣಿಮೆ ಆಚರಣೆ

ಅನ್ನ ಕೊಡುವ ಭೂಮಿ ತಾಯಿಯನ್ನು ಪೂಜಿಸುವ ಹಬ್ಬವೇ ಭೂಮಿ ಹುಣ್ಣಿಮೆ. ಭೂಮಿ ತಾಯಿ ಬಯಕೆಯನ್ನು ತೀರಿಸುವ ವಿಶೇಷ ಆಚರಣೆ ಇದಾಗಿದೆ.

ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಮಣ್ಣಿನ ಎತ್ತಿನ ಮೂರ್ತಿಗಳನ್ನು ತಯಾರಿಸಿ, ಭೂಮಿ ತಾಯಿಯೊಂದಿಗೆ ಪೂಜಿಸಲಾಗುತ್ತದೆ. ಗರ್ಭಿಣಿಯಾದ ಭೂಮಿಯ ಬಯಕೆಯನ್ನು ತೀರಿಸಲು ರೈತಾಪಿ ವರ್ಗ ಕೆಲ ದಿನಗಳಿಂದಲೇ ಸಜ್ಜಾಗುತ್ತದೆ. ಗಾಡಿ, ಕೃಷಿ ಪರಿಕರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳು ವಿವಿಧ ರೀತಿಯ ಅಡುಗೆ ಮಾಡುತ್ತಾರೆ.

ಎಲ್ಲರೂ ಒಂದಾಗಿ ಜಮೀನು, ಗದ್ದೆ, ತೋಟಗಳಿಗೆ ತೆರಳಿ ದೇವಿಯ ಮೂರ್ತಿಯನ್ನಿಟ್ಟು ಪೂಜೆ ಸಲ್ಲಿಸುತ್ತಾರೆ. ಹೊಸ ಸೀರೆ, ಒಡವೆ ಹಾಕಿ, ವಿಶೇಷ ಖಾದ್ಯ ಇಟ್ಟು ನೈವೇದ್ಯ ಮಾಡುತ್ತಾರೆ. ಬಳಿಕ ಮನೆ ಮಂದಿಯೆಲ್ಲಾ ಊಟ ಮಾಡುತ್ತಾರೆ. ನಂತರ ಜಮೀನಿಗೆ ಚರಗ ಹಾಕುತ್ತಾರೆ.



 ತಮ್ಮನ್ನು ಸಲಹುವ ಭೂತಾಯಿಗೆ ವಿಶೇಷ ಪೂಜೆ ಮಾಡುವ ಇಲ್ಲಿನ ಜನರು ಹಿಂದಿನ ದಿನದ ರಾತ್ರಿಯೇ ಇದಕ್ಕೆ ತಯಾರಿ ನಡೆಸುತ್ತಾರೆ. ಭೂಮಿ ಹುಣ್ಣಿಮೆಯ ಮೊದಲ ದಿನವೇ ತರಕಾರಿಗಳನ್ನು ಕತ್ತರಿಸಿ, ಅದಕ್ಕೆ ಅಮಟೆಕಾಯಿ ಜೊತೆ ಎಲ್ಲಾ ತರಕಾರಿಯ ಎಲೆಗಳು, ಅರಸಿಣದ ಸೊಪ್ಪನ್ನೂ ಕೂಡ ಹಾಕಿ ಬೇಯಿಸಲಾಗುತ್ತೆ ಇದನ್ನು ಚರಗ ಎನ್ನುತ್ತಾರೆ. ಮುಂಜಾನೆ ಸೂರ್ಯೋದಯದ ಒಳಗೆ ಅದನ್ನು ಚಿತ್ತಾರದ ಭೂಮಿ ಹುಣ್ಣಿಮೆ ಬುಟ್ಟಿಯಲ್ಲಿ ಇಟ್ಟುಕೊಂಡು ಹೊಲಗಳಿಗೆ ಬೀರಲಾಗುತ್ತೆ. ಇದರ ಉದ್ದೇಶ ಇಲಿಗಳು ಹೆಗ್ಗಣಗಳಾದಿಯಾಗಿ ಎಲ್ಲಾ ಜೀವಿಗಳಿಗೂ ಹಬ್ಬದ ಸಂತಸ ಹಂಚುವುದಾಗಿದೆ. ನಂತರ ಆರಂಭವಾಗುವುದು ಪೂಜೆ. ಇಲ್ಲಿ ಕೆಲವರು ಗದ್ದೆಗಳಿಗೆ ಹೋಗಿ ತೆನೆಯನ್ನು ಕಟ್ಟಿ ಅಲ್ಲೇ ಪೂಜೆ ಮಾಡಿ ಊಟ ಮಾಡಿ ಬರುತ್ತಾರೆ. ಭತ್ತದ ಗದ್ದೆ ಇಲ್ಲದವರು ತೆಂಗಿನ ಮರ ಅಥವಾ ಅಡಕೆ ಮರಕ್ಕೆ ಪೂಜೆ ಮಾಡುತ್ತಾರೆ. ವಿಶೇಷವೆಂದರೆ ತೋಟ ಹಾಗೂ ಗದ್ದೆಯಲ್ಲೇ ಊಟ ಮಾಡುತ್ತಾರೆ. ಮಲೆನಾಡಿನಲ್ಲಿ ಭೂಮಿ ಹುಣ್ಣಿಮೆ ವಿಶೇಷ ಎಂದರೆ ಅದು ಭೂಮಿ ಹುಣ್ಣಿಮೆ ಬುಟ್ಟಿ. ಚೌತಿ ಕಳೆದ ಮೇಲೆ ಅಟ್ಟದ ಮೇಲಿನ ಬುಟ್ಟಿಯನ್ನು ಕೆಳಗೆ ಇಳಿಸಲಾಗುತ್ತದೆ. ಆ ಬುಟ್ಟಿಗೆ ಕೆಮ್ಮಣ್ಣು ಬಳಿಯಲಾಗುತ್ತದೆ. ಹಬ್ಬದ ದಿನ ಹತ್ತಿರ ಬರುತ್ತಿರುವಂತೆ ಅದರ ಮೇಲೆ ಚಿತ್ತಾರಗಳನ್ನು ಬಿಡಿಸಲಾಗುತ್ತದೆ. ಭತ್ತದ ದಂಟುವಿನಿಂದ ಮಾಡಿದ ಚಿಕ್ಕ ಬ್ರಷ್‍ಗಳನ್ನು ಮಾಡಿಕೊಂಡು ಹಿಟ್ಟಿನಿಂದ ಮಾಡಿದ ದ್ರಾವಣದಲ್ಲಿ ಅದ್ದಿ ಸೂಕ್ಷ್ಮ ಎಳೆಗಳ ರೀತಿ ಚಿತ್ತಾರ ಬಿಡಿಸಲಾಗುತ್ತದೆ. ಇದನ್ನು ದೀವ ಸಂಸ್ಕೃತಿಯ ಹಸೆಯಲ್ಲೂ ಕಾಣಬಹುದು. ಇದೇ ಬುಟ್ಟಿಯಲ್ಲಿ ಚರಗ ಬೀರಲಾಗುತ್ತದೆ. ಬಳಿಕ ಆಹಾರ ಪದಾರ್ಥಗಳು ಹಾಗೂ ಪೂಜಾ ಪರಿಕರಗಳನ್ನು ಇದರಲ್ಲಿ ಇಟ್ಟುಕೊಂಡು ಹೊಲ ಗದ್ದೆಗಳಿಗೆ ಹೋಗುತ್ತಾರೆ.

ಆದರೆ ಈ ಸಂಪ್ರದಾಯ ಮುಂದಿನ ತಲೆಮಾರಿಗೆ ಹಸ್ತಾಂತರವಾಗುತ್ತಿಲ್ಲ. ಇದೊಂದು ತಲೆಮಾರು ಕಳೆದರೆ ಹಸೆ ಸಂಪ್ರದಾಯದಂತೆ ಭೂಮಿ ಹುಣ್ಣಿಮೆ ಬುಟ್ಟಿ ಕೂಡ ಮರೆಯಾಗಲಿದೆಯೇನೋ ಎಂಬ ಆತಂಕ ಹಿರಿಯರದ್ದು.



ನೀತಿ ಕಥೆ

ಒಂದು ಊರಿನಲ್ಲಿ ಒಂದು ನದಿ. ಆ ನದಿಯ ದಡದಲ್ಲಿ ಎರಡು ಮರಗಳಿರುತ್ತವೆ.
ಅದೇ ದಾರಿಯಲ್ಲಿ ಹೋಗುತ್ತಿದ್ದ ಒಂದು ಗುಬ್ಬಿ, ತನಗೂ ತನ್ನ ಮರಿಗಳಿಗೂ ಒಂದು ಗೂಡು ಕಟ್ಟಿಕೊಳ್ಳ ಬೇಕೆಂದುಕೊಳ್ಳುತ್ತದೆ.
ಮೊದಲನೇ ಮರದ ಬಳಿ ಹೋಗಿ ” ಮಳೆಗಾಲ ಬರುತ್ತಿದೆ, ನಾನು ನನ್ನ ಮರಿಗಳು ವಾಸಿಸಲು ನಿನ್ನ ಕೊಂಬೆಯ ಮೇಲೆ ಒಂದು ಗೂಡು ಕಟ್ಟಿಕೊಳ್ಳಲೇ?’ ಎಂದು ಕೇಳುತ್ತದೆ.
” ಬೇಡ” ಎನ್ನಿತು ಮೊದಲ ಮರ.
ಆ ಚಿಕ್ಕ ಗುಬ್ಬಿಗೆ ಬೇಸರವಾಯಿತು.ನಿರಾಶೆಯಿಂದ ಎರಡನೇ ಮರದ ಬಳಿ ಹೋಗಿ ಸಹಾಯ ಮಾಡೆಂದು ಕೇಳಿಕೊಳ್ಳುತ್ತದೆ.
” ಸರಿ” ಎನ್ನುತ್ತದೆ ಎರಡನೇ ಮರ.
ಗುಬ್ಬಿ ಮಹದಾನಂದದಿಂದ ಕುಣಿದು ಕುಪ್ಪಳಿಸುತ್ತಾ…ಗೂಡು ಕಟ್ಟಲು ಪ್ರಾರಂಭಿಸಿತು. ಮಳೆಗಾಲ ಪ್ರಾರಂಭವಾಗುವುದಕ್ಕೆ ಮುನ್ನವೇ ಎರಡನೇ ಮರದ ಮೇಲೆ ಗೂಡು ಕಟ್ಟಿತು.

ಗುಬ್ಬಿ ತನ್ನ ಮರಿಗಳೊಂದಿಗೆ ಆನಂದದಿಂದ ಕಾಲ ಕಳೆಯತೊಡಗಿತು. ಅಷ್ಟರಲ್ಲೇ ಮಳೆಗಾಲ ಪ್ರಾರಂಭವಾಯಿತು.

ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. ಪ್ರವಾಹ ಪ್ರಾರಂಭವಾಯಿತು. ಆ ಪ್ರವಾಹದಲ್ಲಿ… ಮೊದಲ ಮರ ಬೇರು ಸಮೇತ ಕೊಚ್ಚಿಕೊಂಡು ಹೋಯಿತು. ಎರಡನೇ ಮರದ ಮೇಲೆ ಕುಳಿತಿದ್ದ ಗುಬ್ಬಿ ಆದೃಶ್ಯವನ್ನು ನೋಡಿ…
” ದೇವರು ನಿನಗೆ ಶಿಕ್ಷೆ ನೀಡಿದ್ದಾನೆ, ನನಗೆ ಸಹಾಯ ಮಾಡಲು ನಿರಾಕರಿಸಿದೆ ಯಲ್ಲವೇ?” ಎಂದು ನಗುತ್ತಾ ಹೇಳಿತು.

ನಾನು ಬಲಹೀನಳೆಂದು ನನಗೆ ಗೊತ್ತು. ಪ್ರವಾಹ ಬಂದರೆ, ಕೊಚ್ಚಿಕೊಂಡು ಹೋಗುತ್ತೇನೆಂದೂ ಸಹ ಗೊತ್ತು. ನನ್ನೊಂದಿಗೆ ನಿನ್ನ ಗೂಡು ಕೊಚ್ಚಿಕೊಂಡು ಹೋಗಬಾರದೆಂದು ಗೂಡು ಕಟ್ಟಲು ನಿನಗೆ ಅನುಮತಿ ನೀಡಲಿಲ್ಲ. ನನ್ನನ್ನು ಕ್ಷಮಿಸು. ನೀನು ನಿನ್ನ ಮರಿಗಳೊಂದಿಗೆ ಹಲವು ವರ್ಷ ಸುಖವಾಗಿ ಬಾಳು” ಎಂದು ಮೊದಲನೇ ಮರ ಹೇಳಿತು.

ಈ ಮಾತುಗಳನ್ನು ಕೇಳಿದ ಪುಟ್ಟ ಗುಬ್ಬಿಗೆ ಅತೀವ ವೇದನೆಯಾಯಿತು.




ನೀತಿ : ಯಾರಾದರೂ ನಮಗೆ ಸಹಾಯ ಮಾಡಲು ನಿರಾಕರಿಸಿದರೆ ತಪ್ಪಾಗಿ ಭಾವಿಸಬಾರದು. ಅವರ ಪರಿಸ್ಥಿತಿಯ ಬಗ್ಗೆ ಅವರಿಗೆ ಮಾತ್ರ ಅರಿವಿರುತ್ತದೆ.
ತಾಳ್ಮೆಯೊಂದೇ ಸಂಬಂಧಗಳನ್ನು ಹೆಚ್ಚು ಸಮಯ ಮುಂದುವರೆಯುವಂತೆ ಮಾಡುತ್ತದೆ.

Safest place to live in earth


A safe place to live on earth, is it in India? Where did you get that In the survey conducted by over 10 NGOs in 2001 and 2002, Chikmagalur is the second safe place to live on Earth.   Considering every aspect of rain, wind, sunshine, climate, and hill the next hundred years can be lived in Chikmagalur district ( Karnataka, India ) without any fear.




ಭೂಮಿಯಲ್ಲಿ ಬದುಕಲು ಸುರಕ್ಷಿತವಾದ ಸ್ಥಳ, ಅದು ಭಾರತದಲ್ಲಿ ?

ಎಲ್ಲಿ ಅಂದು ಕೊಂಡಿರ .
೨೦೦೧ ಹಾಗು ೨೦೦೨ ನೇ ಇಸವಿಯಲ್ಲಿ ವಿಶ್ವದ ೧೦ಕ್ಕೂ NGO ಗಳು ನಡೆಸಿದ ಸರ್ವೆಯಲ್ಲಿ , ಚಿಕ್ಕಮಗಳೂರು ಭೂಮಿಯಲ್ಲೇ ವಾಸಿಸುವ ಎರಡನೇ ಸುರಕ್ಷಿತ ಸ್ಥಳವಾಗಿದೆ ಎಂದು ತಿಳಿಸಿವೆ.

 ಮಳೆ, ಗಾಳಿ, ಬಿಸಿಲು , ವಾತಾವರಣ , ಬೆಟ್ಟ, ಗುಡ್ಡ  ಪ್ರತಿಯೊಂದು ವಿಚಾರವನ್ನು ಪರಿಗಣಿಸಿ, ಮುಂದಿನ ನೂರು ವರ್ಷಗಳು ಯಾವುದೇ ಭಯವಿಲ್ಲದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವಾಸಿಸಬಹುದಾಗಿದೆ.




ಕನ್ನಡ ನಾಡಿನ ಜೀವನದಿ ಕಾವೇರಿ


ನಾಡಿನ ಜನತೆಯ ದಾಹ, ಹಸಿವು ನೀಗಿಸುವ ಕಾವೇರಿ ಮಾತೆಯು ವರ್ಷಕ್ಕೊಮ್ಮೆ ನಡೆಯುವ ತೀಥೋ ದ್ಭವದ ದರ್ಶನಕ್ಕಾಗಿ ಭಕ್ತಾದಿಗಳ ಪ್ರವಾಹವೇ ತಲಕಾವೇರಿ ಯ ಕಡೆಗೆ ಹರಿದು ಬರುತ್ತಾರೆ. ನಿತ್ಯ ನದಿಯಾಗಿ ಹರಿಯುವ ಕಾವೇರಿ ಮಾತೆಯನ್ನು ನೋಡುವುದಕ್ಕಿಂತ ಈ ಕುಂಡದ ನೀರಿನ ಉದ್ಭದ ವೀಕ್ಷಣೆ ಮಾಡುವುದು ಸಾವಿರ ಪಟ್ಟು ಪವಿತ್ರ ಎಂಬುದು ಜನರ ನಂಬಿಕೆ. ಆ ನಂಬಿಕೆಯಂತೆ ಈ ಬಾರಿ ನಾಡಿನ ಜನತೆಗೆ ಅ. 17ರಂದು ನಸುಕಿನ 6.29ಕ್ಕೆ ತೀರ್ಥರೂಪಿಣಿಯಾಗಿ ಕಾವೇರಿ ತಾಯಿ ದರ್ಶನ ನೀಡಲಿದ್ದಾಳೆ. ಸೂರ್ಯ ತುಲಾರಾಶಿಗೆ ಪ್ರವೇಶಿಸುವ ಶುಭ ಸಂದರ್ಭದಲ್ಲಿ ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆ(ಬ್ರಹ್ಮ ಕುಂಡಿಕೆ)ಯಲ್ಲಿ ಕಾವೇರಿ ಮಾತೆಯು ತೀರ್ಥರೂಪಿಣಿಯಾಗಿ ಭಕ್ತಾದಿಗಳಿಗೆ ಕಾಣಿಸುಕೊಳ್ಳುತ್ತಾಳೆ. ದಕ್ಷಿಣ ಭಾರತದ ಪ್ರಮುಖ ನದಿ, ಕಾವೇರಿಯ ಉಗಮ ಸ್ಥಾನ, ತಲಕಾವೇರಿ. ಕರ್ನಾಟಕದ ಕೊಡಗು ಜಿಲ್ಲೆಯಲ್ಲಿದೆ. ಜಿಲ್ಲಾಕೇಂದ್ರವಾದ ಮಡಿಕೇರಿಯಿಂದ ಸುಮಾರು ೪೬ ಕಿ.ಮೀಗಳ ದೂರದಲ್ಲಿ, ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿದೆ.

 ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು 'ತೀರ್ಥೋದ್ಭವ' ಎನ್ನುವರು. ಹಲವಾರು ಭಕ್ತರು ಈ ಸಂದರ್ಭದಲ್ಲಿ ಇಲ್ಲಿ ನೆರೆದಿರು ತ್ತಾರೆ. ಈ ಸ್ಥಳವನ್ನುಶರಪಂಜರ, ಹುಲಿಯ ಹಾಲಿನ ಮೇವು ಚಿತ್ರಗಳಲ್ಲಿ ಚಿತ್ರೀಕರಿಸಲಾಗಿದೆ. ತಲಕಾವೇರಿ - ದಕ್ಷಿಣಭಾರತದಲ್ಲಿ ಹರಿಯುವ ಕಾವೇರಿ ನದಿಯ ಉಗಮ ಸ್ಥಾನ. ಕರ್ನಾಟಕ ರಾಜ್ಯದಲ್ಲಿರುವ ಕೊಡುಗೆ ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲ ಹೋಬಳಿಯಲ್ಲಿ ಭಾಗಮಂಡಲದ ಪಶ್ಚಿಮಕ್ಕೆ, ಪಶ್ಚಿಮ ಘಟ್ಟಗಳಲ್ಲಿರುವ ಬ್ರಹ್ಮಗಿರಿಯ ಇಳಿಜಾರಿನಲ್ಲಿ (ಉ.ಅ. 120 25' ; ಪೂ. ರೇ. 750 34') ಇದೆ. ಮಡಿಕೇರಿಯಿಂದ 39 ಕಿಮೀ, ದೂರದಲ್ಲಿರುವ ಭಾಗಮಂಡಲಕ್ಕೂ ತಲಕಾವೇರಿಗೂ 8 ಕಿಮೀ. ಉದ್ದದ ವಾಹನಯೋಗ್ಯ ರಸ್ತೆಯಿದೆ. ಕಾವೇರಿಯ ಉಗಮಸ್ಥಾನ 2' * 2' ಯ ಒಂದು ಪುಟ್ಟ ಕೊಳ. ಇದನ್ನು ಕುಂಡಿಗೆ ಎನ್ನುತ್ತಾರೆ. ಇದರ ಪಕ್ಕದಲ್ಲಿ ಉತ್ತರಕ್ಕೆ 4' ಎತ್ತರದ ಒಂದು ಮಂಟಪವಿದೆ. ಕುಂಡಿಗೆಯ ಮುಂದೆ ಒಂದು ಸಣ್ಣ ಕೊಳವಿದೆ. ಕುಂಡಿಗೆಯಿಂದ ಹೊರಟ ನೀರು ಸಣ್ಣ ಕೊಳ ಸೇರಿ ಅಂತರ್ಗಾಮಿಯಾಗಿ ಹರಿದು ಇನ್ನೊಂದು ಕೊಳವನ್ನು ತುಂಬುತ್ತದೆ. ಪುನಃ ನೀರು ಅಂತರ್ಗಾಮಿಯಾಗಿ ಹರಿದು ಕಣಿವೆಯಲ್ಲಿ ಕಾಣಿಸಿಕೊಂಡು ಮುಂದೆ ಹರಿಯುತ್ತದೆ.

ಕುಂಡಿಗೆಯಲ್ಲಿ ಕಾವೇರಿ ತೀರ್ಥ ಉದ್ಭವವಾಗುವುದೆಂದು ನಂಬಿಕೆಯಿದೆ. ಪ್ರತಿವರ್ಷ ತುಲಾ ಸಂಕ್ರಮಣದಂದು ಬೆಳಗಿನ ನಿಶ್ಚಿತ ಮುಹೂರ್ತದಲ್ಲಿ ಆ ಕುಂಡಿಗೆಯಿಂದ ನೀರು ಉಕ್ಕಿ ಹರಿಯುತ್ತದೆ. ಆ ಸಮಯಕ್ಕೆ ದೇಶದ ಅನೇಕ ಕಡೆಗಳಿಂದ ಹಿಂದೂ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ. ಇಲ್ಲಿ ಸ್ನಾನಮಾಡುತ್ತಾರೆ. ತುಲಾ ಸಂಕ್ರಮಣದಿಂದ ವೃಶ್ಚಿಕ ಸಂಕ್ರಮಣದ ವರೆಗೆ ತಲಕಾವೇರಿಯ ಬಳಿ ಜಾತ್ರೆ ನಡೆಯುತ್ತದೆ. ಇಲ್ಲಿ ಯಾತ್ರಿಕರಿಗೆ ಇಳಿದುಕೊಳ್ಳಲು ವಸತಿಗಳುಂಟು. ಇಲ್ಲಿಂದ ಸು. 300 ಅಡಿ ಎತ್ತರದಬ್ರಹ್ಮಗಿರಿಯ ನೆತ್ತಿಯ ಮೇಲೆ ಸಪ್ತಋಷಿಗಳು ಹೋಮ ಮಾಡಿದರೆಂದು ಹೇಳಲಾದ ಏಳು ಸಣ್ಣ ಗುಂಡಿಗಳಿವೆ. ಆಕಾಶ ಶುಭ್ರವಾಗಿರುವಾಗ ಬ್ರಹ್ಮಗಿರಿಯ ತುದಿಯಿಂದ ಬೆಟ್ಟದಪುರದ ಬೆಟ್ಟವೂ ನೀಲಗಿರಿಯೂ ಉತ್ತರದಕುದುರೆಮುಖ ಶಿಖರಗಳೂ ಪಶ್ಚಿಮದಲ್ಲಿ ಘಟ್ಟದ ಕೆಳಗಿನ ಕರಾವಳಿಯಲ್ಲಿ ಹಾವುಗಳಂತೆ ಹರಿಯುವ ನದಿಗಳೂ ಅವುಗಳಿಂದಾಚೆಗೆ ಅರಬ್ಬಿ ಸಮುದ್ರವೂ ಕಾಣುತ್ತವೆ. ಭಾಗಮಂಡಲದಿಂದ ತಲಕಾವೇರಿಗೆ ಹೋಗುವ ೫.೫ ಕಿಮೀ. ದೂರದ ಕಾಲುದಾರಿಯೊಂದುಂಟು. ಇದರ ನಡುವೆ ಭೀಮನಕಲ್ಲು ಎಂಬ ಒಂದು ಭಾರಿಬಂಡೆಯಿದೆ. ಪಾಂಡವರು ವನವಾಸದ ಸಮಯದಲ್ಲಿ ಇಲ್ಲಿಗೆ ಬಂದಿದ್ದರೆಂದೂ ಭೀಮ ಊಟಮಾಡುವಾಗ ಅನ್ನದಲ್ಲಿ ಸಿಕ್ಕಿದ ಕಲ್ಲನ್ನು ತೆಗೆದಿಟ್ಟನೆಂದೂ ಅದೇ ಭೀಮನಕಲ್ಲು ಎಂದೂ ಜನರಲ್ಲಿ ನಂಬಿಕೆಯಿದೆ.

ಭೀಮನಕಲ್ಲಿನಿಂದ ಮುಂದುವರಿದರೆ ಸಿಗುವುದು ಸಲಾಮ್ ಕಲ್ಲು. ಟೀಪು ಸುಲ್ತಾನ (ನೋಡಿ) ಕೊಡಗನ್ನು ವಶಪಡಿಸಿಕೊಂಡು ತಲಕಾವೇರಿಯ ದೇವಸ್ಥಾನಗಳನ್ನು ಕೊಳ್ಳೆ ಹೊಡೆಯಲು ಸೈನ್ಯದೊಂದಿಗೆ ಈ ಕಲ್ಲಿನ ವರೆಗೆ ಬಂದನೆಂದೂ ಇಲ್ಲಿ ನಿಂತು ಕಾವೇರಿಗೆ ನಮಸ್ಕರಿಸಿ ಹಿಂದಿರುಗಿದನೆಂದೂ ಪ್ರತೀತಿಯುಂಟು.

ತಲಕಾವೇರಿಯಲ್ಲಿ ಅಗಸ್ತ್ಯ ಋಷಿ ಪ್ರತಿóóಷ್ಠಿಸಿದ್ದೆಂದು ಹೇಳಲಾದ ಲಿಂಗ ಇರುವ ಅಗಸ್ತ್ಯೇಶ್ವರ ದೇವಾಲಯವೂ ಗಣಪತಿ ದೇವಾಲಯವೂ ಇವೆ. ಪರ್ವತ ಶ್ರೇಣಿಗಳು, ಎತ್ತರದ ಕಣಿವೆಗಳು, ಬತ್ತದ ಬಯಲು, ಕಾಫಿ-ಏಲಕ್ಕಿ ತೋಟಗಳು, ಹಸುರು ಕಾಡು-ಇವುಗಳ ನಡುವೆ ಇರುವ ತಲಕಾವೇರಿ ಒಂದು ರಮ್ಯವಾದ ತಾಣ.

ಸಹ್ಯಾದ್ರಿ ಘಟ್ಟಗಳು_ಸಹ್ಯಾದ್ರಿ ಮಡಿಲಲ್ಲಿ

ಪಶ್ಚಿಮ ಘಟ್ಟಗಳು ( ಸಹ್ಯಾದ್ರಿ ಎಂದೂ ಕರೆಯಲ್ಪಡುವ ದಿ ಬೆನೆವೊಲೆಂಟ್ ಪರ್ವತಗಳು ) ಭಾರತದ ಪರ್ವತದ ಪಶ್ಚಿಮ ಕರಾವಳಿಯನ್ನು ಸಂಪೂರ್ಣವಾಗಿ ಭಾರತದಲ್ಲಿ ನೆಲೆಗೊಂಡಿರುವ ಒಂದು ಪರ್ವತ ಶ್ರೇಣಿಯನ್ನು ಹೊಂದಿದೆ. ಇದು UNESCO ವಿಶ್ವ ಪರಂಪರೆ ತಾಣವಾಗಿದೆ ಮತ್ತು ಇದು ವಿಶ್ವದ ಜೈವಿಕ ವೈವಿಧ್ಯತೆಯ ಎಂಟು "ಅತ್ಯಂತ ಬಿಸಿ-ತಾಣಗಳು" ಆಗಿದೆ. [1] [2] ಇದನ್ನು ಕೆಲವೊಮ್ಮೆ ಗ್ರೇಟ್ ಎಸ್ಕಾರ್ಪ್ಮೆಂಟ್ ಆಫ್ ಇಂಡಿಯಾ ಎಂದು ಕರೆಯಲಾಗುತ್ತದೆ. [3] ವ್ಯಾಪ್ತಿಯು ಉತ್ತರದಿಂದ ದಕ್ಷಿಣಕ್ಕೆ ಡೆಕ್ಕನ್ ಪ್ರಸ್ಥಭೂಮಿಯ ಪಶ್ಚಿಮ ಅಂಚಿನಲ್ಲಿದೆ ಮತ್ತು ಅರೇಬಿಯನ್ ಸಮುದ್ರದ ಉದ್ದಕ್ಕೂ ಕೊಂಕಣ ಎಂದು ಕರೆಯಲ್ಪಡುವ ಕಿರಿದಾದ ಕರಾವಳಿ ಪ್ರದೇಶದಿಂದ ಪ್ರಸ್ಥಭೂಮಿಯನ್ನು ಬೇರ್ಪಡಿಸುತ್ತದೆ. ರಾಷ್ಟ್ರೀಯ ಉದ್ಯಾನವನಗಳು, ವನ್ಯಜೀವಿ ಅಭಯಾರಣ್ಯಗಳು ಮತ್ತು ಮೀಸಲು ಅರಣ್ಯಗಳು ಸೇರಿದಂತೆ ಒಟ್ಟು ಮೂವತ್ತೊಂಬತ್ತು ಗುಣಲಕ್ಷಣಗಳನ್ನು ವಿಶ್ವ ಪರಂಪರೆಯ ತಾಣಗಳಾಗಿ ಗುರುತಿಸಲಾಗಿದೆ - ಕೇರಳದಲ್ಲಿ ಇಪ್ಪತ್ತು, ಕರ್ನಾಟಕದಲ್ಲಿ ಹತ್ತು, ತಮಿಳುನಾಡಿನಲ್ಲಿ ಐದು ಮತ್ತು ಮಹಾರಾಷ್ಟ್ರದಲ್ಲಿ ನಾಲ್ಕು. [4] [5]
ಈ ಪ್ರದೇಶವು ಗುಜರಾತ್ ಮತ್ತು ಮಹಾರಾಷ್ಟ್ರ , ತಪತಿ ನದಿಯ ದಕ್ಷಿಣಕ್ಕೆ, ಮತ್ತು ಮಹಾರಾಷ್ಟ್ರ , ಗೋವಾ , ಕರ್ನಾಟಕ , ಕೇರಳ ಮತ್ತು ತಮಿಳುನಾಡುರಾಜ್ಯಗಳ ಮೂಲಕ ಸರಿಸುಮಾರು 1,600 ಕಿಮೀ (990 ಮೈಲಿ) ದೂರದಲ್ಲಿದೆ. ಕನ್ಯಾಕುಮಾರಿಯ ಸಮೀಪದ ಸ್ವಾಮಿತೋಪ್ನಲ್ಲಿ ದಕ್ಷಿಣಕ್ಕೆ ಭಾರತದ ತುದಿ.ಈ ಬೆಟ್ಟಗಳು 160,000 ಕಿಮೀ 2 (62,000 ಚದರ ಮೈಲಿ) ವ್ಯಾಪ್ತಿಗೆ ಒಳಗಾಗುತ್ತವೆ ಮತ್ತು ಸಂಕೀರ್ಣ ನದಿಯ ಒಳಚರಂಡಿ ವ್ಯವಸ್ಥೆಗಳಿಗೆ ಶೇಖರಣಾ ಪ್ರದೇಶವನ್ನು ರೂಪಿಸುತ್ತವೆ, ಇದು ಭಾರತದ ಸುಮಾರು 40% ನಷ್ಟು ಹರಿಯುತ್ತದೆ. ಪಶ್ಚಿಮ ಘಟ್ಟಗಳು ನೈಋತ್ಯ ಮಾನ್ಸೂನ್ ಗಾಳಿಯನ್ನು ಡೆಕ್ಕನ್ ಪ್ರಸ್ಥಭೂಮಿಯಲ್ಲಿ ತಲುಪಿವೆ. [6] ಸರಾಸರಿ ಎತ್ತರ ಸುಮಾರು 1,200 ಮೀ (3,900 ಅಡಿ). [7]
ಈ ಪ್ರದೇಶವು ವಿಶ್ವದ ಹತ್ತು "ಹಾಟೆಸ್ಟ್ ಬಯೋಡೈವರ್ಸಿಟಿ ಹಾಟ್ಸ್ಪಾಟ್ಗಳು " ಮತ್ತು 7,402 ಹೂಬಿಡುವ ಸಸ್ಯಗಳು, 1,814 ಹೂಬಿಡುವ ಸಸ್ಯಗಳಲ್ಲದ ಜಾತಿಗಳು, 139 ಸಸ್ತನಿ ಜಾತಿಗಳು, 508 ಪಕ್ಷಿ ಜಾತಿಗಳು, 179 ಉಭಯಚರ ಜೀವಿಗಳು, 6,000 ಕೀಟಗಳು ಮತ್ತು 290 ಸಿಹಿನೀರಿನ ಮೀನು ಜಾತಿಗಳನ್ನು ಹೊಂದಿದೆ ; ಪಶ್ಚಿಮ ಘಟ್ಟಗಳಲ್ಲಿ ಅನೇಕ ಪತ್ತೆಯಾಗದ ಜಾತಿಗಳು ವಾಸಿಸುವ ಸಾಧ್ಯತೆಯಿದೆ. ಪಶ್ಚಿಮ ಘಟ್ಟಗಳಲ್ಲಿ ಕನಿಷ್ಠ 325 ಜಾಗತಿಕವಾಗಿ ಬೆದರಿಕೆಯಿರುವ ಪ್ರಭೇದಗಳು ಸಂಭವಿಸುತ್ತವೆ. 

ಕೃಪೆ:ಗೂಗಲ್



ನೀರಿನ ಮಹತ್ವ ಮತ್ತು ಸಂರಕ್ಷಣೆ


ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನೀರಿನ ಮೇಲೆ ಎರಡು ಪುಟಗಳಿಗೆ ಮೀರದಂತೆ ಪ್ರಬಂಧ ಬರೆಯಿರಿ ಎಂಬ ಪ್ರಶ್ನೆಯನ್ನು ಈ ವರ್ಷ ಕೊಡಲಾಗಿತ್ತು. ಇಲ್ಲಿ ಒಬ್ಬ ಪ್ರತಿಭಾವಂತ ವಿದ್ಯಾರ್ಥಿ, ಬಾಗಲಕೋಟೆಯ ಅಡ್ನಾಡಿ ಅಪ್ಪಣ್ಣ ಬರೆದ ಪ್ರಬಂಧದ ನಕಲನ್ನು ಕೊಟ್ಟಿದ್ದೇನೆ.

ಕಾಲೇಜಿನವರು ನಮಗ ನೀರಿನ ಮ್ಯಾಲೆ ಒಂದು ಪ್ರಬಂಧ ಬರಿಲಿಕ್ಕೆ ಹೇಳ್ಯಾರ. ನೀರಿನ ಮ್ಯಾಲೆ ಏನಾರ ಬರಿಯುವದು ಅತ್ಯಂತ ತ್ರಾಸದ ಕೆಲಸ. ನೀರಿನ ಮ್ಯಾಲೆ ಎಣ್ಣಿ ತೇಲಿ ಬಿಟ್ಟು ಅದರ ಮ್ಯಾಲೆ ರಂಗೋಲಿಯಿಂದ ಬರೆಯುವದು ಒಂದು ಕಲೆ. ಆದರ ಪರೀಕ್ಷಾ ಹಾಲ್ ದೊಳಗ ಹಾಂಗ ಮಾಡೂದು ಸಾದ್ಯ ಇಲ್ಲ. ಇದಕ್ಕ ಎರಡು ಕಾರಣ ಅವ. ಮೊದಲನೇ ಕಾರಣ ಅಂದರ ಅದನ್ನ ನಮಗ ಕ್ಲಾಸಿನಾಗ ಕಲಿಸಿಲ್ಲ ಮತ್ತs  ಇದು ನಮ್ಮ ಸಿಲೆಬಸ್ ನಾಗ ಇಲ್ಲ. ಎರಡನೇ ಮಹತ್ವದ ಕಾರಣ ಅಂದ್ರ ನಮಗ ಪರೀಕ್ಷಾ ಹಾಲ್ ದೊಳಗ ಕುಡಿಲಿಕ್ಕೆ ನೀರ ಸಹಿತ ಕೊಟ್ಟಿಲ್ಲ. ಅಂದಮ್ಯಾಲೆ ನೀರಿನ ಮ್ಯಾಲೆ ಪ್ರಬಂಧ ಬರೆಯುವದು ಎಂಥಾ ಮಾತೋ! ಹಾಂಗ ಮಾಡಬೇಕಾದ್ರ ಪರೀಕ್ಷಾ ಬ್ಯಾಸಿಗಿ ಬದ್ಲು ಮಳೆಗಾಲದಾಗ ನಡಸೂದು ಛಲೊ.

ಮ್ಯಾಲಿನ ಅಂಶಗಳನ್ನು ಗಮನಿಸಿ ನಾವು ಅಂದ್ರ ಪಿ.ಯು.ಸಿ. ವಿದ್ಯಾರ್ಥಿಗಳು ನೀರಿನ ಮ್ಯಾಲೆ ಪ್ರಬಂಧ ಬರೆಯುದರ ಬದ್ಲು ನೀರಿನ ಬಗ್ಗೆ ಪ್ರಬಂಧ ಬರೆಯಲು ಎಲ್ಲಾ ವಿದ್ಯಾರ್ಥಗಳು ನಿರ್ಧರಿಸೀವಿ. ಮತ್ತ, ನಮ್ಮ ನಿರ್ಧಾರವನ್ನ ಕಾಲೇಜಿನವರು ಒಪ್ತಾರ ಅಂತ ತಿಳಕೊಂಡೀವಿ. ಯಾಕಂದ್ರ ಕಾಲೇಜಿನವರು ಯಾವಾಗ ನೋಡಿದ್ರೂ ವಿದ್ಯಾರ್ಥಿಗಳ ಹಿತಾನೆ ಬಯಸ್ತೀವಿ ಅಂತ ಹೊಯ್ಕೊಳ್ಳತಿರ್ತಾರ.

ಭೌತ ಹಾಗೂ ರಸಾಯನ ಶಾಸ್ತ್ರಗಳ ಪ್ರಕಾರ ನೀರು ಒಂದು ವರ್ಣರಹಿತ, ವಾಸನೆರಹಿತ,ರುಚಿರಹಿತ ದ್ರವ. ಆದ್ರ ನಮಗ ಗೊತ್ತಿದ್ದಂಗ ನೀರಿಗೆ ಹಲವಾರು ಬಣ್ಣಗಳಿವೆ. ಯಮುನಾ ನದಿ ನೀರಿನ ಬಣ್ಣ ನಮಗೆ ಗೊತ್ತಿದ್ದಂತೆ ಕಡುಗಪ್ಪಾಗಿದೆ. ಗಂಗಾ ನದಿ ನೀರಿನ ಬಣ್ಣ ವಿವಿಧ ವರ್ಣದ್ದಾಗಿದೆ ಹಾಗೂ ಸಾಂದ್ರತೆಯಲ್ಲಿ ಬಹು ಪ್ರಕಾರದ್ದಾಗಿದೆ. ತುಂಗಭದ್ರಾ ನದಿ ನೀರು ಮಂತ್ರಾಲಯದಲ್ಲಿ ಕೆಂಪು ಬಣ್ಣದ್ದಾಗಿದೆ. ಇನ್ನs ನಮ್ಮ ಹೆಮ್ಮೆಯ ರಾಜಧಾನಿ ಬೆಂಗ್ಳೂರಿನ ಮೈಸೂರು ರಸ್ತೆಯಲ್ಲಿರುವ ವೃಷಭಾವತಿಯ ನೀರು ಎಮ್ಮೆಯ ಬಣ್ಣವನ್ನು ಹೋಲುತ್ತದೆ.

ರುಚಿಯ ಬಗ್ಗೆಯೂ ರಸಾಯನ ವಿಜ್ಞಾನವು ತಪ್ಪಾಗಿದೆ. ಮೇಲೆ ಹೇಳಿದ ಎಲ್ಲಾ ನದಿಗಳ ನೀರಿಗೆ ವಿಶಿಷ್ಟ ರುಚಿಯಿದೆ. ಕಾಶಿಯಲ್ಲಿರುವ ಗಂಗಾ ನದಿಯ ನೀರಿಗೆ ಸುಟ್ಟ ಬೂದಿಯ ಹಾಗೂ ಕೊಳೆತ ವಾಸನೆಯಿದೆ. ಯಮುನೆಯ ನೀರಿಗೆ ಹಳತಾದ ವಾಸನೆಯಿದೆ.ಭದ್ರೆಗೆ ಮಣ್ಣಿನ ವಾಸನೆಯಿದೆ. ಇನ್ನು ,ವೃಷಭಾವತಿಯ ನೀರೀನ ರುಚಿಯನ್ನು ಆತ್ಮಹತ್ಯೆ ಮಾಡಿಕೊಳ್ಳುವವರೂ ನೋಡುವದಿಲ್ಲ. ಯಾಕಂದ್ರ ಅದು ವಾಂತಿ ಬರುವ, ಅನೇಕ ಕ್ರಿಮಿಕೀಟಗಳಿಂದ ಕೂಡಿರುವ ಹಾಗೂ ಅಪಥ್ಯದ ನೀರಿನ ರುಚಿ ಹೊಂದಿರುತ್ತದೆ. ಈ ಎಲ್ಲ ನೀರೂ ಅವುಗಳ ಕರ್ಮ, ಗುಣಧರ್ಮಗಳಂತೆ ನಾರುತ್ತವೆ. ಆದ್ದರಿಂದ ನೀರಿಗೆ ಬಣ್ಣವಿಲ್ಲ, ರುಚಿಯಿಲ್ಲ, ವಾಸನೆಯಿಲ್ಲ ಎಂಬ ಮಾತು ಘಂಟಾಘೋಷವಾಗಿ ತಪ್ಪಾಗುತ್ತದೆ ಎಂದು ಹೇಳಬೇಕಾಗ್ತದ.

ನೀರು ಮೇಲ್ಮಟ್ಟದಿಂದ ಕೆಳಮಟ್ಟಕ್ಕೆ ಹರಿಯುತ್ತದೆ ಎಂದು ಹೇಳುತ್ತಾರೆ. ಕಾವೆರಿ ಕರ್ನಾಟಕದಿಂದ ತಮಿಳುನಾಡಿಗೆ ಹರಿಯುತ್ತದೆ. ತಮಿಳುನಾಡಿನ ಜನರು
ನೀರಿನ ಈ ಮೇಲ್ಮಟ್ಟದಿಂದ ಕೆಳಮಟ್ಟಕ್ಕೆ ಹರಿಯುವ ಅಂಶದ ಬಗ್ಗೆ ಅಸಮಾಧಾನದಿಂದಿದ್ದಾರೆ. ಇದರಿಂದ ಕರ್ನಾಟಕವು ತಮಿಳುನಾಡಿಗಿಂತ ಮೇಲ್ಮಟ್ಟದಲ್ಲಿದ್ದಂತಾಯ್ತು. ಆದರೆ ತಮಿಳರು ಇದನ್ನು ಒಪ್ಪುವದಿಲ್ಲ. ಏಕೆಂದರೆ ತಮಿಳು ಕನ್ನಡಕ್ಕಿಂತ ಹಳೆಯದಾದ, ಸಂಪದ್ಭರಿತವಾದ ಪಾರಂಪರಿಕ ಭಾಷೆಯಾಗಿದೆಯೆಂದು ತಮಿಳರ ವಾದ. ಹಾಗಾಗಿ ನೀರು ಕೆಳಮಟ್ಟದಿಂದ ಮೇಲ್ಮಟ್ಟಕ್ಕೆ ಹರಿಯುತ್ತದೆ ಎಂಬುದು ಅವರ ವಾದ. ಈ ಅಂಶವನ್ನು ಕಾವೇರಿ ನ್ಯಾಯ ಮಂಡಳಿಯವರು ಗಮನಿಸುವದು ಸೂಕ್ತ.

ನೀರಿನ ಗುಣಧರ್ಮದ ಬಗ್ಗೆಯೂ ಕೆಲ ತಪ್ಪು ಅಭಿಪ್ರಾಯಗಳಿವೆ. ನೀರು ತನ್ನ ಲೆವೆಲ್ ನ್ನು (ಮಟ್ಟವನ್ನು) ಕಂಡುಕೊಳ್ಳುತ್ತದೆ ಎಂದು ಹೇಳುತ್ತಾರೆ. ಆದರೆ ಇದು ತಪ್ಪು. ಈಗ ಕಾವೇರಿಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಕಾವೇರಿಯ ನೀರು ಯಾವಾಗಲೂ ತಮಿಳುನಾಡಿನ ಜನತೆಯ ಮಟ್ಟದಲ್ಲಿದೆ ಅದು ಎಂದೆಂದೂ ಕನ್ನಡಿಗರ ಮಟ್ಟದಲ್ಲಿ ಇಲ್ಲ. ಇದರಿಂದ ನೀರು ಭಾಷಾ ಪರವಾಗಿದೆ ಮತ್ತು ತಮಿಳುನಾಡು ಪರವಾಗಿದೆ, ಅದು ಎಂದೆಂದೂ ಕರ್ನಾಟಕದ ಪರವಾಗಿಲ್ಲ ಎಂದು ತಿಳಿದು ಬರುತ್ತದೆ.

ನೀರಿನ ಇನ್ನೊಂದು ಅನಾರೋಗ್ಯಕರ ಅಂಶಕ್ಕೆ ಬರೋಣ. ನೀರು ಎಲ್ಲ ನೆರೆಹೊರೆ ರಾಜ್ಯಗಳ ವ್ಯಾಜ್ಯಕ್ಕೆ ಪ್ರಮುಖ ಕಾರಣವಾಗಿದೆ. ಈಗ ಕರ್ನಾಟಕ, ತಮಿಳುನಾಡು, ಗೋವಾ ಹಾಗೂ ಆಂಧ್ರಪ್ರದೇಶಗಳನ್ನೇ ತೆಗೆದುಕೊಳ್ಳಿ. ನೀರೊಂದಿಲ್ಲದಿದ್ದರೆ ಇವೆಲ್ಲ ರಾಜ್ಯಗಳು ಸೌಹಾರ್ದಯುತವಾಗಿರುತ್ತಿದ್ದವು. ಬೇರೆ ಸಂದರ್ಭಗಳಲ್ಲಿ ಒಮ್ಮತದಿಂದಿರುತ್ತಿದ್ದ ಈ ರಾಜ್ಯಗಳನ್ನು ಕಾವೇರಿ, ಮಲಪ್ರಭಾ, ಮತ್ತೂ ಕೃಷ್ಣಾ ನದಿಗಳು ಕಚ್ಚಾಡುವಂತೆ ಮಾಡಿವೆ. ಹಾಗಾಗಿ ಹರಿವ ನೀರು ನೆರೆಹೊರೆಯವರೊಂದಿಗೆ ಹೊರೆಯ ವಾತಾವರಣವನ್ನು ನಿರ್ಮಿಸುತ್ತದೆ ಎಂದು ಹೇಳಬೇಕಾಗುತ್ತದೆ.

ನೀರಿನ ಮೇಲೆ ನಾನು ಇನ್ನೊಂದು ಪ್ರಯೋಗವನ್ನು ಮಾಡಿದ್ದೇನೆ. ಎರಡು ಪಾತ್ರೆಗಳನ್ನು ಒಂದು ಟೆಬಲ್ ಮೇಲಿಟ್ಟು, ಒಂದರಲ್ಲಿ ನೀರನ್ನು ಮತ್ತು ಇನ್ನೊಂದರಲ್ಲಿ ಮದ್ಯವನ್ನು ಹಾಕಿದೆ ಹಾಗೂ ಅವುಗಳಲ್ಲಿ ಕೆಲ ಕ್ರಿಮಿ ಕೀಟಗಳನ್ನು ಬಿಟ್ಟೆ. ಮದ್ಯದಲ್ಲಿದ್ದ ಕ್ರಿಮಿಗಳು ಸತ್ತವು ಹಾಗೂ ನೀರಿನಲ್ಲಿದ್ದ  ಕ್ರಿಮಿಗಳು ಬದುಕಿದವು. ಇದರಿಂದ ನಮ್ಮ ಹೊಟ್ಟೆಯಲ್ಲಿದ್ದ ಕ್ರಿಮಿಕೀಟಗಳು ನೀರನ್ನು ಕುಡಿದಾಗ ಬದುಕುತ್ತವೆ ಹಾಗೂ ಮದ್ಯವನ್ನು ಕುಡಿದಾಗ ಸಾಯುತ್ತವೆ ಎಂದಾಯ್ತು. ಹಾಗಾಗಿ ನೀರು ದೇಹಕ್ಕೆ ಹಾನಿಕರ ಮದ್ಯ ಒಳ್ಳೆಯದು ಎಂಬ ಅಂಶ ಸಾಬೀತಾಗುತ್ತದೆ.

ನೀರಿನ ಇನ್ನೂ ಕೆಲ ಅಂಶಗಳ ಬಗ್ಗೆ ನಾವು ಗಮನ ಹರಿಸಿಲ್ಲವೆನಿಸುತ್ತದೆ. ನೀರು ಒಂದು ಅಪಾಯಕಾರಿಯಾದ ದ್ರವ. ಹೇಗೆಂದರೆ ನಾನು ನೀರನ್ನು ವ್ಹಿಸ್ಕಿಯೊಂದಿಗೆ ಬೆರೆಸಿ ಕುಡಿದೆ. ನನಗೆ ಚೆನ್ನಾಗಿ ಮತ್ತೇರಿತು. ನಾನು ನೀರನ್ನು ರಮ್ ನೊಂ  ದಿಗೆ ಬೆರೆಸಿ ಕುಡಿದೆ. ನನಗೆ ಚೆನ್ನಾಗಿ ಮತ್ತೇರಿತು. ನಾನು ನೀರನ್ನು ಎಲ್ಲ ಮತ್ತೇರಿಸುವ ದ್ರವಗಳೊಂದಿಗೆ ಬೆರೆಸಿ ಕುಡಿದೆ. ಪರಿಣಾಮ ಒಂದೇ ಆಗಿತ್ತು. ಆದ್ದರಿಂದ ನೀರು ಕಿಕ್ ಮತ್ತು ಮತ್ತೇರಿಕೆಗೆ ಕಾರಣ ಎಂಬ ನಿರ್ಧಾರಕ್ಕೆ ಬಂದು ನೀರನ್ನು ಕುಡಿಯುವದನ್ನು ಇನ್ನು ಮೇಲೆ ನಿಲ್ಲಿಸಬೇಕೆಂದಿದ್ದೇನೆ.

ನೀರು ಪುಲ್ಲಿಂಗವೋ ಸ್ತ್ರೀ ಲಿಂಗವೋ ಎಂಬ ಅಂಶ ನನ್ನನ್ನು ಬಹುವಾಗಿ ಕಾಡಿದೆ. ನನ್ನ ಪ್ರಕಾರ ನೀರು ಪುಲ್ಲಿಂಗ. ಯಾಕೆಂದರೆ ನೀರೆ ಎನ್ನುವದು ಸ್ತ್ರೀ ಲಿಂಗ. ಆದ್ದರಿಂದ ನೀರು ಪುಲ್ಲಿಂಗವಾಗಿರಲೇಬೇಕು.



ನೀರು ಮನುಷ್ಯನ ದೇಹದ ಬೇಡವಾದ ಜಾಗಗಳಾದ ಕಾಲು, ಸೊಂಟ, ಹೊಟ್ಟೆ, ಪುಪ್ಪಯಸಗಳಲ್ಲಿ ನುಗ್ಗಿ ಸಹಿಸಲಾಗದ ಯಾತನೆಯನ್ನು ಉಂಟು ಮಾಡುತ್ತದೆ. ನೀರು ಬೇಡದ ಜಾಗಗಳಲ್ಲಿ ಹೊಕ್ಕ ಮನುಷ್ಯನನ್ನು ಕೇಳಿದರೆ ಇದು ಸ್ಪಷ್ಟವಾದೀತು. ಆದ್ದರಿಂದ ನೀರು ನದಿ,ಸಂಪು, ಓವ್ಹರ್ ಹೆಡ್ ಟ್ಯಾಂಕ ಹಾಗೂ ಉಳಿದ ಜಲಾಶಯಗಳಲ್ಲಿದ್ದರೇ ಚೆಂದ, ಉಳಿದಲ್ಲಿ ಅದು ಎಲ್ಲಿದ್ದರೂ ಅಪಾಯ.

ನೀರು ನಮ್ಮ ಚಲನಚಿತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದು ಚಲನಚಿತ್ರ ಯಶಸ್ವಿಯಾಗಬೇಕಾದರೆ ನಾಯಕಿ ಮಳೆಯಲ್ಲಿ ಅಥವಾ ಶೊವರ್ ಕೆಳಗಡೆ ಮೈ ಕಾಣುವಂತೆ ನೆನೆಯುವದು ಅವಶ್ಯಕವಾಗಿದೆ. ನೀರು ಚಲನಚಿತ್ರಗಳಲ್ಲಿ ಒಂದು ಮಹತ್ವದ ಗುಣಧರ್ಮವನ್ನು ಪಡೆಯುತ್ತದೆ. ಅದು ನಾಯಕಿ ಹಾಗೂ ಎಲ್ಲ ಸ್ತ್ರೀ ಪಾತ್ರಧಾರಿಗಳನ್ನು ನೆನೆಸಿದರೂ ನಾಯಕನನ್ನು ಎಂದೂ ನೆನೆಸುವದಿಲ್ಲ.

ನೀರು ಗವಳಿಗಳಿಗೆ ಜೀವನಾಡಿ ಇದ್ದಂತೆ. ಈ ದ್ರವವೊಂದಿಲ್ಲದಿದ್ದರೆ ಅವರ ಜೀವನವೇ ನೀರುಪಾಲಾದಂತೆ. ಉಚಿತವಾಗಿ ಸಿಗುವ ನೀರು ಅವರ ಜೀವನಮಟ್ಟವನ್ನು ಬಹುಮಟ್ಟಿಗೆ ಸುಧಾರಿಸಿದೆ.

ಕೃಪೆ: WhatsApp

ಸಿಡಿಲಾಘಾತದಿಂದ_ತಪ್ಪಿಸಿಕೊಳ್ಳುವುದು_ಹೇಗೆ...?

ಸಿಡಿಲಾಘಾತದಿಂದ_ತಪ್ಪಿಸಿಕೊಳ್ಳುವುದು_ಹೇಗೆ...?


                               
ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಸಿಡಿಲನ್ನು ತಪ್ಪಿಸಲಾಗದು. ಆದರೆ. ಅದರಿಂದಾಗುವ ಸಾವು ನೋವು ಗಳನ್ನು ತಪ್ಪಿಸಬಹುದು.

#ರಕ್ಷಣೆ_ಹೇಗೆ......?

- ಗುಡುಗು-ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಬಯಲಿನಲ್ಲಿದ್ದರೆ. ತಕ್ಷಣವೇ ಇರುವುದರಲ್ಲಿ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಿ.ನಿಲ್ಲ ಬೇಡಿ

-ತಗ್ಗು ಪ್ರದೇಶ ಇಲ್ಲದೆ ಬಯಲಿನಲ್ಲೆ ಇರಬೇಕಾದರೆ. ನಿಮ್ಮ ತಲೆಯನ್ನು ಮೊಣಕಾಲುಗಳ ನಡುವೆ ಹುದುಗಿಸಿಕೊಳ್ಳಿ, ಇದು ಮಿಂಚಿನಿಂದ ಮೆದುಳಿಗೂ,ಹೃದಯಕ್ಕೂ ಆಗುವ ಹಾನಿಯನ್ನು ತಪ್ಪಿಸುತ್ತದೆ.


ಮರಗಳಿದ್ದ ಪ್ರದೇಶದಲ್ಲಿ ನೀವು ಇದ್ದರೆ, ಅಲ್ಲಿಂದ ಬೇಗನೆ ಹೊರಬರುವುದು ಒಳ್ಳೆಯದು.(ಯಾಕೆಂದರೆ ಸಿಡಿಲು ಮೋಡದಿಂದ ಭೂಮಿಗೆ ಹರಿಯಲು ಮರದಂತಹ ಹಸಿ, ಒದ್ದೆ ವಸ್ತುವನ್ನೇ ಆರಿಸಿಕೊಳ್ಳುತ್ತದೆ.)

- ಎತ್ತರದ ಗುಡ್ಡದ ಮೇಲಿದ್ದರೆ ತಗ್ಗಿಗೆ   ಇಳಿರಿ

- ಕುರಿ ಮಂದೆ ಅಥವಾ ಜಾನುವಾರುಗಳ ಮಧ್ಯ ನಿಂತಿದ್ದರೆ, ಅವುಗಳ ಮಧ್ಯದಲ್ಲಿ ಬಗ್ಗಿ ಕುಳಿತುಕೊಳ್ಳಿ, ( ಯಾಕೆಂದರೆ ಮಿಂಚು ಪ್ರಾಣಿಗಳಿಗಿಂತ ಎತ್ತರವಿರುವ ಮನುಷನನ್ನೇ ಆರಿಸಿಕೊಳ್ಳುತ್ತದೆ.)

-ಕೆರೆಯಲ್ಲಿ ಈಜುವುದು,ಸ್ನಾನ ಮಾಡುವುದು ಬೇಡ, ನೀರಿನಲ್ಲಿದ್ದರೆ ತಕ್ಷಣ ಹೊರಬನ್ನಿ .

- ವಿದ್ಯುತ್ ಕಂಬ, ಎಲಕ್ಟ್ರಿಕಲ್ ಟವರ್, ಮೊಬೈಲ್ ಟವರ್, ಟ್ರಾನ್ಸ್ ಫಾರ್ಮರ್ ಮುಂತಾದವುಗಳ ಹತ್ತಿರವೂ ಇರಬೇಡಿ.

-ತಂತಿಬೇಲಿ,ಭಟ್ಟ ಒಣಹಾಕುವ ತಂತಿ, ಇವುಗಳಿಂದ ದೊರವಿರಿ

- ಮಳೆ ಬರುವ ಸಮಯದಲ್ಲಿ ಮನೆಯ ಟೆರೇಸನ್ನು ಸ್ವಚ್ಛ ಮಾಡುವ ಸಾಹಸ ಬೇಡ.

- ಮನೆಯ ಕಿಟಕಿಯ ಬಳಿ ನಿಲ್ಲುವುದಕ್ಕಿಂತಲೂ ಮನೆಯ ಮಧ್ಯದಲ್ಲಿರುವುದು ಸುರಕ್ಷಿತ.

- ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್ ಮಾಡಬೇಡಿ. ಅದನ್ನು ಚಾರ್ಜ್ ಮಾಡುವ ಸಹಸವೂ ಬೇಡ.

- ಕಾರಿನಲ್ಲಿ ಪ್ರಯಾಣಿಸುತ್ತಿದ್ದರೆ ಗಾಜನ್ನು ಮುಚ್ಚಿಕೊಳ್ಳಿ. ಕಾರಿನ ಬಾಡಿಯನ್ನು ಸಾಧ್ಯವಾದಷ್ಟು ಸ್ಪರ್ಶಿಸದೆ ಮಧ್ಯದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು.

- ಕಂಪ್ಯೂಟರ್ ಗಳಿಂದ ದೂರ ಇರಿ

- ಮನೆಯ ಕಾoಕ್ರೇಟ್ ಗೋಡೆಗಳನ್ನು ಸ್ಪೆರ್ಶಿಸದೆ.ಕೋಣೆಯ  ಮಧ್ಯದಲ್ಲಿದ್ದರೆ ಹೆಚ್ಚು ಸುರಕ್ಷಿತ.

             ಈ ಸಂದೇಶವನ್ನು ನಿಮ್ಮ ಅಪ್ಪ ಅಮ್ಮ ಅಣ್ಣ ತಂಗಿಯರಿಗೂ ತಿಳಿಸಿ.

         "ಧನ್ಯವಾದಗಳೊಂದಿಗೆ"

Royal Enfield stealing ರಾಯಲ್ ಎನ್ಫೀಲ್ಡ್ ಕಳ್ಳರು



ಸಹ ಕಳ್ಳರು ಹೇಗೆ ನಿಭಾಯಿಸುತ್ತಾರೆ ಎಂದು ಎಂದಾದರೂ ಯೋಚಿಸಿದ್ದೀರಾ? ಒಳ್ಳೆಯದು, ಈ ಆಘಾತಕಾರಿ ವಿಡಿಯೋ ಅದನ್ನು ಹೇಗೆ ಮಾಡಿದೆ ಎಂಬುದನ್ನು ತಿಳಿಸುತ್ತದೆ. ರಾಯಲ್ ಎನ್ಫೀಲ್ಡ್ ಮೋಟಾರ್ಸೈಕಲ್ಗಳನ್ನು ಕದಿಯುವ ಕಳ್ಳರ ಗುಂಪನ್ನು ಪೊಲೀಸರು ಹಿಡಿದಿಟ್ಟುಕೊಂಡಿದ್ದಾರೆ. ಈ ಗ್ಯಾಂಗ್ ಅನ್ನು ವಶಪಡಿಸಿಕೊಂಡಿರುವ ಒಬ್ಬ ಪೋಲೀಸ್ ಈಗ ಮೋಟಾರು ಸೈಕಲ್ ಅನ್ನು ಮುಷ್ಕರ ಮಾಡಲು ಮತ್ತು ಮೋಟಾರುಗಳನ್ನು ಕದಿಯಲು ಬಳಸಿದ ವೀಡಿಯೊವನ್ನು ಮಾಡಿದ್ದಾನೆ. bike ಕದಿಯುವಲ್ಲಿ ಪರಿಣಿತರು, ಸರಿಯಾಗಿ ಲಾಕ್ ಮಾಡಲಾದ ಮೋಟಾರ್ಸೈಕಲ್ ಅನ್ನು ಕದಿಯಲು ಈ ಕಳ್ಳರು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತಾರೆ. ಇದನ್ನು ನಂಬಲು ಕೆಳಗಿನ ವೀಡಿಯೊವನ್ನು ವೀಕ್ಷಿಸಿ.

10 rupees fake coin,ಅಸಲಿ ಹಾಗು ನಕಲಿ ೧೦ ರೂಪಾಯಿ ನಾಣ್ಯದ ವ್ಯತ್ಯಾಸಗಳು.

  ಅಸಲಿ ಹಾಗು ನಕಲಿ ೧೦ ರೂಪಾಯಿ ನಾಣ್ಯದ ವ್ಯತ್ಯಾಸಗಳು.




              1>ಅಸಲಿ ನಾಣ್ಯದಲ್ಲಿ ರೂಪಾಯಿ ನಿಶಾನೆ ಇದೆ, ನಕಲಿಯಲ್ಲಿ ಬರಿ 10 ಅಂತ ಇದೆ.



              2>ಅಸಲಿ ನಾಣ್ಯದಲ್ಲಿ 10 ಗೆರೆಗಳು ಇವೆ ,  ನಕಲಿಯಲ್ಲಿ 15 ಗೆರೆಗಳು ಇವೆ.

            3>ಅಸಲಿ ನಾಣ್ಯದಲ್ಲಿ "ರೂಪಾಯಿ RUPEES "  ಎಂದು ಬರೆದಿಲ್ಲ ,ನಕಲಿಯಲ್ಲಿ ಬರೆದಿದೆ.
             4>ಅಸಲಿ ನಾಣ್ಯದಲ್ಲಿ 10 ಎಂಬುವ ಅಂಕೆ ಮೇಲೆ ಹಾಗು ಕೆಳಗಿನ ಲೋಹದ ಮೇಲಿದೆ ,                           ನಕಲಿಯಲ್ಲಿ ಒಂದೇ ಲೋಹದ ಮದ್ಯ ಭಾಗದಲ್ಲಿ ಇದೆ.  
                                        
             5>ಅಸಲಿ ನಾಣ್ಯದಲ್ಲಿ ಭಾರತ್ ಮತ್ತು ಇಂಡಿಯಾ ಎಡ ಹಾಗು ಬಲ ಭಾಗದಲ್ಲಿದೆ,                                  ನಕಲಿಯಲ್ಲಿ ನಾಣ್ಯದ ಮೇಲಭಾಗದಲ್ಲಿದೆ.



             6>ಅಸಲಿ ನಾಣ್ಯದಲ್ಲಿ ಎರಡು ಗೆರೆಗಳು ಇಲ್ಲನಕಲಿಯಲ್ಲಿವೆ . 


ಮಲೆನಾಡಿನ ರೋಡಿನ ರಾಜ -ಸಹಕಾರ ಸಾರಿಗೆ


ಸಹಕಾರ ಸಾರಿಗೆ ಎಂಬುದು ಕಾರ್ಮಿಕರೇ ಮಾಲೀಕರಾಗಿರುವ ಒಂದು ವಿಶಿಷ್ಟ ಸಂಸ್ಥೆ. ಇದರ ಪ್ರಧಾನ ಕಛೇರಿ ಕೊಪ್ಪ ದಲ್ಲಿದೆ. ಚಿಕ್ಕಮಗಳೂರುಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದರ ಸಾರಿಗೆ ಜಾಲವು ಹರಡಿದೆ. ಸಿಬ್ಬಂದಿಯ ನಗುಮೊಗದ ಸೇವೆ, ವಿದ್ಯಾರ್ಥಿಗಳು ಹಾಗೂ ಹಿರಿಯ ನಾಗರೀಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಮುಂತಾದ ಸೌಲಭ್ಯಗಳನ್ನು ನೀಡುತ್ತಿರುವುದರಿಂದ ಇದು ಮಲೆನಾಡಿಗರ ಅಚ್ಚುಮೆಚ್ಚಿನ ಸಾರಿಗೆ ವ್ಯವಸ್ಥೆಯಾಗಿದೆ.




ಆಳಾಗಿ ದುಡಿದವನು ಅರಸಾಗಿ ಆಳುವನು-ಎಂಬ ಮಾತಿದೆಯಲ್ಲ ಅದಕ್ಕೆ ಇದು ಉದಾಹರಣೆ ಎನ್ನಬಹುದು.ಒಮ್ಮೆ ಇನ್ನಾರದೋ ಕೈಕೆಳಗೆ ಅಲ್ಪ ವೇತನಕ್ಕೆ ಡ್ರೈವರ್, ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದವರು ಇಂದು ಕೋಟಿಗಟ್ಟಲೆ ವ್ಯವಹಾರವಿರುವ ಸಾರಿಗೆ ಸಂಸ್ಥೆಯ ಮಾಲೀಕರು.ಇವರೇ ಸಂಸ್ಥೆಯ ಕೆಲಸಗಾರರೂ ಕೂಡ ,ಇವರೇ ಮಾಲೀಕರೂ ಕೂಡ.ಇದು ಯಾವುದೂ ಸಿನಿಮಾದ ಕಥೆಯಲ್ಲ, ನಿಜಜೀವನದ ಕಥೆ-ಅದರಲ್ಲಿಯೂ ಈ ಕಥೆ ನನ್ನೂರಿನ ಸಮೀಪದ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿನ ಕಥೆ. ೧೯೯೦ ರಲ್ಲಿ ಕೊಪ್ಪದ ಸಾರಿಗೆ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮಗೆ ನೀಡುತ್ತಿದ್ದ ವೇತನ ಸಾಲದೆಂದು ಧರಣಿ ನಡೆಸಿದಾಗ ಆ ಸಂಸ್ಥೆ ಲಾಕೌಟ್ ಘೋಶಿಸಿಬಿಟ್ಟಿತು, ಇದರಿಂದ ಆ ಬದಪಾಯಿಗಳು , ಮತ್ತವರ ಕುಟುಂಬಅಕ್ಷರಶಃ ಬೀದಿಗೆ ಬಿದ್ದಂತಾದರು. ಕೆಲಸ ಮಾಡುತ್ತಿದ್ದ ಸಂಸ್ಥೆ ಅವರಿಗೆ ಸ್ವಲ್ಪ ಪರಿಹಾರವನ್ನೇನೋ ಕೊಟ್ಟಿತ್ತು. ಆದರೆ ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು ಎಂಬಂತೆ ಆ ಹಣ ಇನ್ನೊಂದು ಕೆಲಸ ಸಿಗುವುದರೊಳಗೆ ಖರ್ಚಾಗಿಯೇಬಿಡುವ ಭಯ. ದಾರಿಗಾಣದೆ ತೊಳಲಾಡುತ್ತಿದ್ದಾಗ ನಮ್ಮ ಚಿಕ್ಕಮಗಳೂರಿನವರೇ ಆದ ಕಾರ್ಮಿಕ ಸಂಘದ ಧುರೀಣ ಬಿ ಕೆ ಸುಂದರೇಶ್ ರವರು ಇವರೆಲ್ಲರನ್ನು ಕುರಿತು ನೀವು ಇನ್ನೆಲ್ಲೆಲ್ಲೋ ಕೆಲಸ ಅರಸಿಕೊಂಡು, ಪುನಹ ಇನ್ನಾರದೋ ಕೈಕೆಳಗೆ ದುಡಿಯುವುದರ ಬದಲು ನೀವೆಲ್ಲ ಒಟ್ಟಾಗಿ, ನಿಮಗೀಗ ದೊರೆತಿರುವ ಪರಿಹಾರ ಹಣವನ್ನೇ ಬಂಡವಾಳವನ್ನಾಗಿ ಹಾಕಿಕೊಂಡು ನಿಮ್ಮದೇ ಆದ ಸಾರಿಗೆ ಸಂಸ್ಥೆ ಕಟ್ಟಿ, ನೀವೆಲ್ಲಾ ಒಗ್ಗಟ್ಟಾಗಿ ಶ್ರಮಿಸಿದರೆ ಖಂಡಿತಾ ಅದನ್ನು ಲಾಭದಾಯಕವಾಗಿ ನಡೆಸಬಹುದಲ್ಲದೆ ನೀವೇ ಅದರ ಮಾಲೀಕರೂ ಆಗಿ ನಿಮ್ಮ ಬದುಕನ್ನೂ ಕಟ್ಟಿಕೊಳ್ಳುವುದಲ್ಲದೆ ಇನ್ನಷ್ಟು ಜನರಿಗೆ ಕೆಲಸವನ್ನೂ ನೀಡಬಹುದು ಎಂದು ಸಲಹೆ ನೀಡಿದರು.ಅವರು ಕಟ್ಟಿಕೊಟ್ಟ ಕನಸೇನೋ ಸುಂದರವಾಗಿತ್ತು. 


ಆದರೆ ತಾಳ ತಪ್ಪಿದರೆ ಮುಳುಗುವ ಭಯವೂ ಇತ್ತು. ಆದರೂ ಒಟ್ಟು ೧೫೦ ಮಂದಿ ಕಾರ್ಮಿಕರು ಒಟ್ಟಾಗಿ, ಅಳುಕು ಬಿಟ್ಟು, ಈ ಕನಸನ್ನು ನನಸಾಗಿಸಿಕೊಳ್ಳಲು ದುಡಿಯುವ ನಿರ್ಧಾರ ಕೈಗೊಂಡರು. ತಮ್ಮೆಲ್ಲಾ ಪರಿಹಾರ ಹಣವನ್ನು ಒಟ್ಟಾಗಿಸಿ ಬಂಡಾವಾಳವನ್ನಾಗಿಸಿಕೊಂಡು, ತಮ್ಮ ಹಳೆಯ ಕಂಪೆನಿಯಿಂದ ಓಡಿಸದೆ ನಿಲ್ಲಿಸಿದ್ದ ನಾಲ್ಕು ಬಸ್ ಗಳನ್ನು ಕೊಂಡುಕೊಂಡು ದಿ-೮-೩-೧೯೯೧ರಲ್ಲಿ ತಮ್ಮದೇ ಆದ ಸಾರಿಗೆ ಕಂಪೆನಿಯನ್ನು ತೆರೆದೇ ಬಿಟ್ಟರು.ಒಟ್ಟು ೧೫೦ ಮಂದಿಯಲ್ಲಿ ೩೫ ಜನ ಆಡಳಿತ ನೋಡಿಕೊಳ್ಳಲು, ಉಳಿದವರು ಉಳಿದೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಲು ತೀರ್ಮಾನಿಸಿದರು. ಹಿಂದಿನ ಕಂಪೆನಿಯಲ್ಲಿ ಡ್ರೈವರ್, ಕಂಡಕ್ಟರ್ ಆಗಿ ಎಲ್ಲಾರೀತಿಯ ಅನುಭವಗಳಿದ್ದ ಇವರುಗಳಿಗೆ ಸಾರಿಗೆ ವ್ಯವಸ್ಥೆ, ಬಸ್ ಗಳ ನಿರ್ವಹಣೆ ಇವುಗಳ ಬಗ್ಗೆಆಳವಾದ ಜ್ನ್ಯಾನವಿತ್ತು.ಇದರಿಂದ ಯಾವುದೇ ರೀತಿಯ ಸಮಸ್ಯೆ ಬಂದರೂ ಎದುರಿಸುವುದು ಸುಲಭವಾಗಿತ್ತು. ಅಲ್ಲದೆ ಮಾಲೀಕರೂ ಇವರೇ, ಕೆಲಸಗಾರರೂ ಇವರೇ ಆದುದರಿಂದ ಕೆಲಸಕಾರ್ಯಗಳಲ್ಲಿ ಸೋಮಾರಿತನವಾಗಲೀ, ಮೋಸ, ವಂಚನೆ ಮಾಡುವುದಾಗಲೀ, ಕಾಟಾಚಾರದ ಕೆಲಸ ಮಾಡುವುದಾಗಲೀ, ಬೇಜವಾಬ್ದಾರಿಗಾಗಲೀ ಎಳ್ಳಷ್ಟೂ ಅವಕಾಶವಿಲ್ಲ. ಇದು ನನ್ನದೇ ಕಂಪೆನಿ, ನಾನು ಕಷ್ಟಪಟ್ಟು ದುಡಿದಷ್ಟೂ ಲಾಭ ನನಗೇನೇ ಎಂಬ ಅರಿವು ಆ ಪ್ರತಿಯೊಬ್ಬರಲ್ಲೂ ಕಂಪೆನಿಗಾಗಿ ತಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಿ ಕಾರ್ಯ ನಿರ್ವಹಿಸುವ ಶಕ್ಥಿ ನೀಡಿತ್ತು. ಅವರೆಲ್ಲಾ ಸೇರಿ ಮನಃಪೂರ್ವಕವಾಗಿ ಶ್ರಧ್ಧೆಯಿಂದ ದುಡಿದದ್ದರ,ದುಡಿಯುತ್ತಿರುವುದರ ಫಲವಾಗಿ ಇಂದು ೧೯೯೧ರಲ್ಲಿ ಇವರು ಸ್ಥಾಪಿಸಿದ ಕೊಪ್ಪದ ಸಹಕಾರಸಾರಿಗೆ ಕಂಪೆನಿ ಉಛ್ಛ್ರಾಯ ಸ್ಥಿತಿಯಲ್ಲಿದೆ. ನಾಲ್ಕು ಬಸ್ ಗಳಿಂದ ಪ್ರಾರಂಭವಾದ ಕಂಪೆನಿ ಇಂದು ೮೦ ಬಸ್ ಗಳನ್ನು ಹೊಂದಿದೆ.ತನ್ನದೇ ಆದ ಅತ್ಯುತ್ತಮ ವ್ಯವಸ್ಥೆಯಿಂದ ಕೂಡಿದ ಗ್ಯಾರೇಜ್.ಒಟ್ಟು ೧೨ ವಿಭಾಗಗಳನ್ನು ಹೊಂದಿರುವ ಕಂಪೆನಿಯ ಮುಖ್ಯ ಕಚೇರಿ ಕಟ್ಟಡ, ಚಾಲಕರು, ನಿರ್ವಾಹಕರುಗಳಿಗೆ ವಿಶ್ರಾಂತಿಗಾಗಿ ಕಟ್ಟಡ ಎಲ್ಲವನ್ನೂ ಹೊಂದಿದೆ,ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ ಜಿಲ್ಲೆಗಳಾದ್ಯಂತ ತನ್ನ ಹಸಿರು ಬಸ್ಸುಗಳನ್ನು ಓಡಿಸುತ್ತಾ ಮಲೆನಾಡಿನ ಕುಗ್ರಾಮಗಳವರಿಗೂ ಕೂಡ ಸಾರಿಗೆ ಸೌಲಭ್ಯವನ್ನು ಕಲ್ಪಿಸಿರುವ ಹಿರಿಮೆ ಈ ಸಂಸ್ಥೆಯದ್ದು.ಮಲೆನಾಡಿಗರು ಈ ಹಸಿರು ಬಸ್ಸುಗಳನ್ನು "ನಂ ಸಾರಿಗೆ ಬಸ್ಸು" ಎಂದು ಅಭಿಮಾನದಿಂದ ಕರೆಯುವಂತೆ ಮನೆಮಾತಾಗಿರುವ ಈ ಸಂಸ್ಥೆ ಎಲ್ಲಾ ಸಹಕಾರ ಸಂಸ್ಥೆಗಳಂತಲ್ಲದೆ ಹಲವು ವೈಶಿಷ್ಟ್ಯತೆ ಹೊಂದಿದೆ.ಇಂತಹ ಕಾರ್ಮಿಕರೇ ಮಾಲೀಕರೂ ಆಗಿರುವ ಈ ಸಹಕರ ಸಂಸ್ಥೆ ಭಾರತದಲ್ಲಿಯೇ ವಿಶಿಷ್ಟ್ವವಾದುದು ಎಂದು ಗುರುತಿಸಲ್ಪಟ್ಟಿದ್ದು ,ಜಪಾನ್ ಸೇರಿದಂತೆ ಹಲವಾರು ವಿದೇಶಗಳಿಂದ ಈ ಸಂಸ್ಥೆಯ ಕಾರ್ಯ ವೈಖರಿಯನ್ನು ಅಧ್ಯಯನ ಮಾಡಲು ಪ್ರತಿನಿಧಿಗಳು ಭೇಟಿ ನೀಡಿದ್ದಾರೆ.


ಇದಲ್ಲದೆ ಅತಿ ವಿಶಿಷ್ಟವಾದ ಈ ಸಂಸ್ಥೆಯನ್ನು ತಮ್ಮ ಪ್ರಾಜೆಕ್ಟ್ ಗಳಿಗಾಗಿ ಆಯ್ಕೆ ಮಾಡಿಕೊಂಡು ಎಂ ಫಿಲ್, ಪಿ ಹೆಚ್ ಡಿ, ಬಿಕಾಮ್ ವಿದ್ಯಾರ್ಥಿಗಳು ಅಧ್ಯಯನ ಮಾಡಿದ್ದಾರೆ-ಮಾಡುತ್ತಿದ್ದಾರೆ.೩೦೦ ರರಷ್ಟು ಕೆಲಸಗಾರರು ಈಗ ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು,ಇದರಲ್ಲಿ ಬಹಳಷ್ಟು ಹೆಣ್ಣುಮಕ್ಕಳೂ ಕೂಡ ಕೆಲಸ ಮಾಡುತ್ತಿದ್ದಾರೆ.ಇಲ್ಲಿಯ ಮ್ಯಾನೇಜಿಂಗ್ ಡೈರೆಕ್ಟರ್ಸ್ ಪೈಕಿ ಓರ್ವ ಮಹಿಳೆಯೂ ಇದಾರೆಂಬುದೂ ಒಂದು ವಿಶೇಷ, ಸಹಕಾರ ಸಾರಿಗೆ ಸಂಸ್ಥೆ ಹಲವಾರು ಸಾಮಾಜಿಕ ಸೇವಾ್ಕಾರ್ಯಗಳಲ್ಲೂಕೂಡಾ ತನ್ನನ್ನು ತೊಡಗಿಸಿಕೊಂಡಿದೆ. ೧ಪ್ರತಿ ವರ್ಷ ಸುತ್ತಮುತ್ತಲ ಎಲ್ಲಾ ಶಾಲೆಗಳಲ್ಲಿ ಎಸೆಸೆಲ್ ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಕಾರ್ಯ ಮಾಡಲಾಗುತ್ತಿದೆ. ೨- ವಿದ್ಯಾರ್ಥಿಗಳಿಗೆ ಪ್ರಯಾಣ ಶುಲ್ಕದಲ್ಲಿ೫೦% ರಷ್ಟು ವಿನಾಯ್ತಿ ೩-ವಿಕಲಾಂಗ ವಿದ್ಯಾರ್ಥಿಗಳಿಗೆ,,ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಯಾಣಶುಲ್ಕ ಸಂಪೂರ್ಣ ವಿನಾಯ್ತಿ. ೪-ಅಂಗವಿಕಲ ಪ್ರಯಾಣಿಕರು, ಮತ್ತು ವೃಧ್ಧರಿಗೆ ೫೦% ರಷ್ಟು ಪ್ರಯಾಣ ಶುಲ್ಕ ವಿನಾಯ್ತಿನೀಡಲಾಗುತ್ತದೆ. ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳೇ ಹೊರತರುತ್ತಿದ್ದ "ಇಂಚರ " ಎಂಬ ತ್ರೈಮಾಸಿಕ ಪತ್ರಿಕೆಗೆ ತಪ್ಪದೇ ೧೫ ವರ್ಷಗಳ ಕಾಲ ಈ ಸಂಸ್ಥೆ ಜಾಹೀರಾತು ನೀಡಿ ಬೆಂಬಲಿಸಿದೆ. ಈ ಸಂಸ್ಥೆಗೆ ಅತ್ಯುತ್ತಮ ಸಾರಿಗೆ ಸಂಸ್ಥೆ ಎಂಬ ಪ್ರಶಂಸೆಯೊಂದಿಗೆ ಹಲವಾರು ಪ್ರತಿಷ್ಟಿತ ಪ್ರಶಸಿಗಳು ,ಪುರಸ್ಕಾರಗಳು ಲಭಿಸಿವೆ. ನಾನು ಈ ಸಂಸ್ಥೆಯ ವಿವಿಧ ಬಸ್ ಗಳಲ್ಲಿ ೧೮ ವರ್ಷಗಳಷ್ಟು ಸುದೀರ್ಘಕಾಲ, ಪ್ರತಿದಿನ ಪಯಣಿಸಿದ್ದೇನೆ.ಈ ಸಂಸ್ಥೆಯ ಎಲ್ಲಾ ಚಾಲಕರು, ನಿರ್ವಾಹಕರು ಅತ್ಯಂತ ಸೌಜನ್ಯಪೂರ್ಣವಾದ ಸೇವೆಯನ್ನು ಸದಾ ನಗುಮೊಗದಿಂದ ನೀಡುವುದನ್ನು ಕಂಡಿದ್ದೇನೆ.ಏನಾದರೂ ತೊಂದರೆ, ಸಮಸ್ಯೆ ಇದ್ದರೆ ತಿಳಿಸಿದರೆ ಕೂಡಲೇ ಅತ್ಯಂತ ಕಾಳಜಿಯಿಂದ ಅದನ್ನು ಪರಿಹರಿಸುವ ಸೌಜನ್ಯ ಇವರಲ್ಲಿದೆ.ನಾನಂತೂ ಈ ಸಂಸ್ಥೆಯ ಹಲವರು ಕಾರ್ಯಕ್ರಮಗಳಲ್ಲಿ ಅಥಿತಿಯಾಗಿ ಪಾಲ್ಗೊಂಡಿದ್ದೇನೆ.ಈ ಬಸ್ ಪ್ರಯಾಣದ ನನ್ನ ನೂರಾರು ಅನುಭವಗಳನ್ನು ನಾನು "ಬಸ್ಸುಮಾತು" ಎಂಬ ನನ್ನ ಕೃತಿಯೊಂದರಲ್ಲಿ ದಾಖಲಿಸಿ ಈ ಕೃತಿಯನ್ನು ಈ ನನ್ನ ಮೆಚ್ಚಿನ ಸಹಕಾರ ಸಾರಿಗೆ ಸಂಸ್ಥೆಗೇ ಅರ್ಪಣೆ ಮಾಡಿದ್ದೇನೆ. ಕೈ ಕೆಸರಾದರೆ, ಬಾಯಿ ಮೊಸರು,ಒಗ್ಗಟ್ಟಿನಲ್ಲಿ ಬಲವಿದೆ.ಇಫ್ ಯು ಟೇಕ್ ರಿಸ್ಕ್-ಯು ವಿಲ್ ಗೆಟ್ ಸಕ್ಸಸ್ ಎಂಬ ಮಾತುಗಳನ್ನು ಸಾಕ್ಷೀಕರಿಸಿದ ಈ ಸಂಸ್ಥೆಯ ಸದಸ್ಯರು ನಿಜಕ್ಕೂಸ್ಫೂರ್ಥಿಯ ಸೆಲೆ. ಅಭಿನಂದನಾರ್ಹರು. ಈ ಸಂಸ್ಥೆ ಮಲೆನಾಡ ಜನರಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳನ್ನು ಒದಗಿಸುತ್ತಾ,ಅತ್ಯುತ್ತಮ ಸೇವೆ ನೀಡುತ್ತಾ ತನ್ನ ಕೀರ್ತಿಯನ್ನು ಹೆಚ್ಚಿಸಿಕೊಳ್ಳಲಿ