Wednesday, 17 June 2020

ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ ಅಂದ್ರೆ ಅದು ಕಬ್ಜ..! ಈ ಸುದ್ದಿ ನೋಡಿ



ಹೌದು ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಜಿಎಫ್ ಚಿತ್ರದ ನಂತರ ಭಾರಿ ಸದ್ದು ಮಾಡುತ್ತಿರುವ ಸಿನಿಮಾ, ಅಂದ್ರೆ ಅದು ನಮ್ಮ ಸೂಪರ್ ಸ್ಟಾರ್ "ಉಪೇಂದ್ರ" ಅವರು ಅಭಿನಯಿಸಿದ "ಕಬ್ಜ" ಸಿನಿಮಾ. ಎಸ್ ಭಾರತದ ಹೆಸರಾಂತ ಪತ್ರಿಕೆ ಮತ್ತು ವೆಬ್ಸೈಟ್ಗಳು ನಡೆಸಿರುವ ಟಾಪ್ ಹತ್ತರ ಇಂಡಿಯಾ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳು ಎಂಬ ಸಮೀಕ್ಷೆಯಲ್ಲಿ ನಮ್ಮ ಹೆಮ್ಮೆಯ ಕನ್ನಡದ ಕೆಜಿಎಫ್ ಚಿತ್ರ ಎರಡನೇ ಸ್ಥಾನದಲ್ಲಿದ್ದರೆ,ಉಪೇಂದ್ರ ಅವರ " ಕಬ್ಜ" ಚಿತ್ರ ಮೂರನೇ ಸ್ಥಾನದಲ್ಲಿದೆ.



ಇಂಡಿಯಾದ ಮೋಸ್ಟ್ ಎಕ್ಸ್ಪೆಕ್ಟೆಡ್ ಟಾಪ್ ಟೆನ್ ಸಿನಿಮಾಗಳ ಪಟ್ಟಿಯಲ್ಲಿ ಕನ್ನಡದ ಎರಡು ಚಿತ್ರಗಳು ಸ್ಥಾನವನ್ನು ಪಡೆದಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಇದೊಂದು ಹೆಮ್ಮೆಯ ವಿಷಯ ಅಲ್ವಾ,
ಸೂಪರ್ ಸ್ಟಾರ್ ಉಪೇಂದ್ರ ಅವರು ಈ ಹಿಂದೆ, 20 ವರ್ಷಗಳ ಹಿಂದೆ ಇಡೀ ಭಾರತ ಚಿತ್ರರಂಗವೆ ನಮ್ಮ ಕನ್ನಡ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿದ ಸಾಧಕ ಇವರು.

ಓಂ ಸಿನಿಮಾ ಇತ್ತೀಚೆಗೆ 25 ವರ್ಷಗಳ ಸಂಭ್ರಮಾಚರಣೆ ಆಚರಿಸಿದೆ ಹಾಗೂ ಮತ್ತೆ ಮುಂದಿನ 25 ವರ್ಷಗಳ ಕಾಲ ನೆನಪಿರುವಂತೆ ಮಾಡುವ ಸಿನಿಮಾ ಕಬ್ಜ ಎಂದು ಉಪೇಂದ್ರ ಅವರು ತುಂಬಾ ಆತ್ಮವಿಶ್ವಾಸದಿಂದ ನುಡಿದಿದ್ದಾರೆ. ಸರ್ಕಾರದಿಂದ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ ನಂತರ ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ಇನ್ನೂ ಹಲವಾರು ವೈಭವಪೂರಿತ ಸೆಟ್ಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ಸಜ್ಜಾಗಿದೆ.


ನಿರ್ದೇಶಕ ಆರ್ ಚಂದ್ರು ಅವರು ಕೆಜಿಎಫ್ ರೀತಿಯೇ ಕಬ್ಜ ಚಿತ್ರದ ಮೇಲೆ ಪ್ರೇಕ್ಷಕರಿಗೆ ಭರವಸೆಯನ್ನು ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಕಬ್ಜ ಚಿತ್ರದ ಟ್ರೈಲರ್ ಹಾಗೂ ಶೋ ರೀಲ್ ಅನ್ನು ನೋಡಿದ ತೆಲುಗು ಹಾಗೂ ಹಿಂದಿ ಚಿತ್ರರಂಗದ ಬಹು ದೊಡ್ಡ ನಿರ್ಮಾಪಕರುಗಳು ಉಪೇಂದ್ರ ಹಾಗೂ ಆರ್ ಚಂದ್ರು ಅವರನ್ನು ಶ್ಲಾಘಿಸಿದ್ದಾರೆ.

ಕಬ್ಜ ಚಿತ್ರ ಬಿಡುಗಡೆಯ ನಂತರ ಭಾರತ ಚಿತ್ರರಂಗವೇ ತಿರುಗಿ ನೋಡುವಂಥ ಸಿನಿಮಾ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಹಾಗೂ ಕೊರೋನಾದ ಅಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿತ್ರೋದ್ಯಮ ಉಳಿಯಬೇಕಾದರೆ ಕೆಜಿಎಫ್ ಮತ್ತು ಕಬ್ಜ ಅಂತಹ ಪ್ರಯೋಗಾತ್ಮಕ ಪ್ಯಾನ್ ಇಂಡಿಯಾ ಸಿನಿಮಾಗಳ ಅವಶ್ಯಕತೆ ಇದೆ ಎಂದು ಸ್ವತಹ ಬುದ್ಧಿವಂತ ಉಪೇಂದ್ರ ಅವರೇ ಹೇಳಿದ್ದಾರೆ.

Tuesday, 16 June 2020

ಅಶ್ವ ಸಿನಿಮಾದ ಪಸ್ಟ್ ಲುಕ್ ಪೋಸ್ಟರ್ ಇಲ್ಲಿದೆ ನೋಡಿ..! ಹೊಸಬರಿಗೆ ಅಶ್ವ ಸಿನಿಮಾ ಒಂದು ವಿಭಿನ್ನ ಚಿತ್ರ ಆಗಬಹುದಾ..?




ಹೌದು ಈಗಾಗಲೇ ನಮಗೂ ನಿಮಗೂ ಗೊತ್ತಿರುವ ಹಾಗೆ ಕೊರೊನ ವೈರಸ್ ಎಂಬ ಸಾಂಕ್ರಾಮಿಕ ಕಾಯಿಲೆ ದೇಶದ ತುಂಬೆಲ್ಲಾ ಹರಡಿದ್ದು, ನಮ್ಮ ಕರ್ನಾಟಕದಲ್ಲಿ ಕೂಡ ಇದರ ತೀವ್ರತೆ ಹೆಚ್ಚಿದ್ದು, 2 ತಿಂಗಳಿಂದ ಎಲ್ಲಾ ಕಡೆ ಎಲ್ಲಾ ಕೆಲಸಗಳನ್ನು ನಿಲ್ಲಿಸಿದ್ದು ಕೆಲವು ದಿನಗಳಿಂದ ಲಾಕ್ ಡೌನ್ ಜಾರಿಗೆಯಲ್ಲಿತ್ತು. ಹಾಗಾಗಿ ಯಾವದೇ ಸಿನಿಮಾ ಕೆಲಸಗಳು ನಡೆದಿದ್ದೀಲ್ಲ.



ಆದ್ರೆ ಇಂದು ಅಶ್ವ ಸಿನಿಮಾದ ಭರ್ಜರಿ ಪಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್ ನೋಡಿದ ಸಿನಿಪ್ರಿಯರಿಗೆ, ಈ ಅಶ್ವ ಸಿನಿಮಾದ ಪೋಸ್ಟರ್ ನಲ್ಲಿ, ಏನೋ ಒಂದು ಹೊಸತನ ಕಂಡುಬಂದ ರೀತಿಯಲ್ಲಿ ಕಾಣುತ್ತಿದೆ , ನೋಡಲು ತುಂಬಾ ಚೆನ್ನಾಗಿದೆ, ಮತ್ತು ಕೇವಲ ಹೊಸಬರನ್ನು ಆಧರಿಸಿ ಮಾಡಿರುವ ಚಿತ್ರ ಇದಾಗಿದ್ದು ವಿಭಿನ್ನ ರೀತಿಯಲ್ಲಿ ಚಿತ್ರವನ್ನು ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಎನ್ನುವ ಹಾಗೆ ಕಂಡು ಬರುತ್ತಿದೆ.


ಮತ್ತು ಅಶ್ವ ಸಿನಿಮಾಕ್ಕೆ, ನಮ್ಮ ನಿಮ್ಮೆಲ್ಲರ ಎ ಆರ್ ಸಾಯಿರಾಮ್ ಅವರು ಮೊದಲಿಗೆ ಕೆಲವು ಕನ್ನಡ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ, ಸಹಾಯಕ ನಿರ್ದೇಶಕರಾಗಿ ಕೂಡ ಕೆಲಸ ಮಾಡಿ, ಸಿನಿಮಾ ರಂಗದಲ್ಲಿ ತುಂಬಾ ಏರು ಪೆರುಗಳನ್ನು ಕಂಡು, ಮತ್ತು ಕಷ್ಟ ಪಟ್ಟು ಈಗ ಇದೇ ಮೊದಲ ಬಾರಿಗೆ, ಅಶ್ವ ಚಿತ್ರಕ್ಕೆ ನಿರ್ದೇಶಕ ಆಗಿ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಇವರ ಈ ಅಶ್ವ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ, ಇದೆ ಪೋಸ್ಟರ್ ತುಂಬಾ ವೈರಲ್ ಆಗುತ್ತಿದೆ.


ಮತ್ತು ಸಿನಿಮಾದಲ್ಲಿ ನಾಯಕ ಆಗಿ ಉದಯೋನ್ಮುಖ ನಟ ಹೊಸ ಪ್ರತಿಭೆ "ವಿವಾನ್ ಕೆ ಕೆ" ಅವರು ನಟನೆ ಮಾಡುತ್ತಿದ್ದಾರೆ. ಮತ್ತು ನಾಯಕಿ ಆಗಿ ಸಾರಿಕಾ ಮತ್ತು ಸಾಗರಿಕ ಇಬ್ಬರೂ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಮತ್ತು ಬಿ.ಅಜನೀಶ್ ಲೋಕನಾಥ್ ರವರ ಸಂಗೀತ , ರವಿಕುಮಾರ್ ಸನ ಅವರು ಕ್ಯಾಮರಾ ವರ್ಕ್,  ಶ್ರೀಕಾಂತ ಗೌಡ ಸಂಕಲನ, ಹಾಗೂ ನೃತ್ಯ ಧನಂಜಯ್, ಸಾಹಸ ಕುನ್ಫ್ಯೂ ಚಂದ್ರು, ಮತ್ತು ತುಳಸಿ ರಾಮ್ ರಾಜ್ ಪ್ರಚಾರ ವಿನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ..