Sunday, 30 August 2020

ಕಬ್ಜ ಚಿತ್ರತಂಡದ ವಿನೂತನ ಪ್ರಯತ್ನದ ವೆಬ್ಸೈಟ್ ಲಾಂಚ್ ಮಾಡಿದ ಶಿವಣ್ಣ...!

 



ಹೌದು ಆರ್ ಚಂದ್ರು ಅವರು ನಿರ್ದೇಶನ ಮಾಡುತ್ತಿರುವ, ರಿಯಲ್ ಸ್ಟಾರ್ ಉಪ್ಪಿ ಅಭಿನಯದ ಕಬ್ಜ ಚಿತ್ರ, ಈಗಾಗಲೇ ಎಲ್ಲಾ ಕಡೆ ಸಖತ್ ಸುದ್ದಿಯಲ್ಲಿದೆ. ಮತ್ತು ಚಿತ್ರತಂಡ ಮೊದಲಿನಿಂದಲೂ ವಿಭಿನ್ನವಾದ ಸೆಟ್ ನಿರ್ಮಿಸಿಕೊಂಡು ಶೂಟಿಂಗ್ ಆರಂಭ ಮಾಡಿತ್ತು , ಕೊರೊನ ಬರುವ ಮುಂಚೆ ಸಿನಿಮಾ ಶೂಟಿಂಗ್ ಅಬ್ಬರ ಜೋರಾಗಿಯೆ ನಡೆದಿತ್ತು, ಜೊತೆಗೆ ನಟ ಉಪೇಂದ್ರ ಅವರು ಕೂಡ ತಮ್ಮ ವಿಭಿನ್ನ ಗೆಟಪ್ ನಲ್ಲಿ, ಸಖತ್ ಆಗಿ ಕಾಣಿಸಿಕೊಳ್ಳುವ ಮೂಲಕ, ಕಬ್ಜ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುವ ರೀತಿ ಮಾಡಿದರು. 


ಕಬ್ಜ ಚಿತ್ರತಂಡ ಯಾವಾಗಲೂ ವಿಭಿನ್ನವಾಗಿ ವಿನೂತನ ಪ್ರಯತ್ನ ಮಾಡುತ್ತಾ, ಸಿನಿಮಾ ರಸಿಕರಿಗೆ ಒಂದಿಲ್ಲೊಂದು ಸಿಹಿ ಸುದ್ದಿಯನ್ನು ಉಣ ಬಡಿಸುತ್ತಲೆ ಇರುತ್ತಾರೆ, ಅದೇ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಮಾದ್ಯಮ ಒಂದರ ಮೂಲಕ ಇಂದು ತಿಳಿದು ಬಂದಿರುವ ಮಾಹಿತಿ ಪ್ರಕಾರ. ಕಬ್ಜ ಟೀಮ್ ಅವರು ಒಂದು ಸಾಧನೆ ರೂಪದಲ್ಲಿ ಮತ್ತೆ ಎಲ್ಲರೂ ಗಮನ ಸೆಳೆಯುವ ಹಾಗೆ ಮಾಡಿದ್ದಾರೆ. ಹಾಗೆ ಎಲ್ಲಾ ಭಾಷೆಯ ಸಿನಿಮಾ ಇಂಡಸ್ಟ್ರಿಯವರು ಮಾಡದಿರುವ ಒಂದು ಸಾಧನೆಯನ್ನ, ನಮ್ಮ ಕಬ್ಜ ಚಿತ್ರತಂಡ ಮಾಡಿದೆ.. 

ಕಬ್ಜ ಚಿತ್ರದ ಆಫೀಸಿಯಲ್ ವೆಬ್ಸೈಟ್ ಅನ್ನು ಚಿತ್ರತಂಡ ಲಾಂಚ್ ಮಾಡಿದೆ. ಜೊತೆಗೆ ಈ ವೆಬ್ಸೈಟ್ ಒಟ್ಟು 7 ಭಾಷೆಗಳಿಂದ ಕೂಡಿ, ನಿರ್ಮಿತವಾಗಿದೆ. ಇಡೀ ಎಲ್ಲಾ ಸಿನಿಮಾ ರಂಗದಲ್ಲಿಯೆ ಇದೇ ಮೊಟ್ಟ ಮೊದಲ ಬಾರಿಗೆ, ಇಂತಹದೊಂದು ಸಾಧನೆ ಮಾಡಿ ಬೇರೆ ಸಿನಿಮಾ ರಂಗದ ಕಲಾವಿದರು ಅಚ್ಚರಿ ಪಡುವ ಹಾಗೆ ಗಮನ ಸೆಳೆದಿದ್ದಾರೆ. ಮತ್ತು ಇಂದಿನ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಿವಣ್ಣ ಅವರು ಉಪಸ್ಥಿತರಿದ್ದರು. ಮತ್ತು ವೆಬ್ಸೈಟ್ ಅನ್ನು ಲಾಂಚ್ ಮಾಡಿದರು, ಚಿತ್ರತಂಡ ತುಂಬಾ ಕಾರ್ಯಕ್ರಮ ಮುಗಿದ ಬಳಿಕ ಹೆಚ್ಚು ಸಂತಸ ವ್ಯಕ್ತಪಡಿಸಿತು.. 

ಜೊತೆಗೆ ಕನ್ನಡ ಕಬ್ಜ ಚಿತ್ರದ ಪ್ರಚಾರವನ್ನು ಯುವಿ ಡಿಜಿಟಲ್ ಸಂಸ್ಥೆಯ ಉಮೇಶ್ ಕೆ ಎನ್ ಅವರು ಮಾಡುತ್ತಿದ್ದಾರೆ, ಮತ್ತು ಉಪ್ಪಿ ಅವರ 








ಕಬ್ಜ ಸಿನಿಮಾ ಮುಂದಿನ ವರ್ಷ 2021 ಕ್ಕೆ ಬಿಡುಗಡೆ ಮಾಡಲು ಎಲ್ಲಾ ಸಿದ್ಧತೆ ನಡೆಸಿದೆ ಚಿತ್ರತಂಡ ಎನ್ನಲಾಗಿದೆ. ಶಿವಣ್ಣ ಅವರು ಲಾಂಚ್ ಮಾಡಿದ ಸಿಹಿ ಕ್ಷಣದ ಫೋಟೋ ಗ್ಯಾಲರಿ ನೋಡಿ, ಮತ್ತು ಕಬ್ಜ ಚಿತ್ರತಂಡಕ್ಕೆ ಶುಭ ಕೋರಿ ಧನ್ಯವಾದಗಳು...

Thursday, 27 August 2020

ಮುಂಗಾರು ಮಳೆ ಸಂಗೀತ ನಿರ್ದೇಶಕ ಮನೋ ಮೂರ್ತಿಯವರ ಮನದಾಳದಲ್ಲಿ ಅಲೆವ ಮೋಡ..!

 



ರಾಜೇಶ್ & ದೇವಿ ಫಿಲ್ಮ್ಸ್ ಸಂಸ್ಥೆಯಡಿಯಲ್ಲಿ ನಿರ್ಮಾಪಕರಾದ ಯೋಗೇಶ್ ಗೌಡ ಮಾಯಗಾನಹಳ್ಳಿ, ಸಹಾ ನಿರ್ಮಾಪಕರಾದ ನರಸಿಂಹ ಮೂರ್ತಿ (ನರ್ಸಿ)ರವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರ "ಅಲೆವ ಮೋಡ"  ತ್ರಿಮೂರ್ತಿಗಳ ಮಡಿಲಿನಿಂದ  ತಲೆದೂಗೋ ಹಾಡು ಮನೋ ಮೂರ್ತಿ , ಜಯಂತ್ ಕಾಯ್ಕಿಣಿ, ಸೋನು ನಿಗಮ್ ಅವರು ಸೇರಿ, ಮೌನ ಧ್ಯಾನ ಮೀರಿದ ಸೊಗಸನ್ನು ಸಂಗೀತದಲ್ಲಿ ಕನ್ನಡ ಸಿನಿ ರಸಿಕರಿಗೆ ಉಣಬಡಿಸಿದ್ದ ಸಂಗೀತ ನಿರ್ದೇಶಕ ಮನೋಮೂರ್ತಿ, ಹೌದು ಮನೋ ಮೂರ್ತಿಯವರ ಬತ್ತಳಿಕೆ ಇಂದ ಮತ್ತನ್ನು ಹಾಡೊಂದು ಹೊತ್ತು ತಂದಿದೆ, ಸೋನು ನಿಗಮ್ ರವರ ಗಾಯನದಲ್ಲಿ. 


ಅಲೆವ ಮೋಡದ ಹಾಡು ಸೋನು ನಿಗಮ್ ಅವರ ಈ ವರ್ಷದ ಮೊದಲ ಕನ್ನಡ ಹಾಡು ಎನ್ನಬಹುದು. ಅನೇಕ ವರ್ಷಗಳಿಂದ, ಸೋನು ನಿಗಮ್ ರವರ ಧ್ವನಿ ಕನ್ನಡ ಚಲನಚಿತ್ರದ ಹಾಡುಗಳಲ್ಲಿ ಕಡ್ಡಾಯವಾಗಿ ಇರುತ್ತಿತ್ತು ಆದರೆ, ಕಳೆದ ಒಂದೆರಡು ವರ್ಷಗಳಲ್ಲಿ, ಅವರ ಹಾಡುಗಳ ಸಂಖ್ಯೆ ಕಡಿಮೆ ಆಗುವುದನ್ನು ನೀವು ಗಮನಿಸಬಹುದು, ಅವರು ಸ್ಯಾಂಡಲ್‌ವುಡ್‌ನಲ್ಲಿರುವ ಎಲ್ಲಾ ಸಂಗೀತ ನಿರ್ದೇಶಕರ ಜೊತೆ ಕೆಲಸ ಮಾಡಿದ್ದಾರೆ. ಮನೋ ಮೂರ್ತಿಯವರ ಜೊತೆಗಿನ ಹಾಡುಗಳದ್ದೆ ಮೇಲುಗೈ ಎದ್ದು ಕಾಣುಸುತ್ತೆ‌, ಇವರಿಬ್ಬರ ಕಾಂಬಿನೇಷನ್ ನಲ್ಲಿ ಮುಂಗಾರು ಮಳೆ, ಈ ಬಂಧನ, ಚೆಲುವಿನ ಚಿತ್ರಾ, ಮಿಲನ, ಮನಸಾರೆ, ಮಾಧ ಮತ್ತು ಮನಸಿ, ಗೊಕುಲಾ, 



ಮತ್ತು ಪಾರಿಜಾತ ಇನ್ನು ಮುಂತಾದ ಚಿತ್ರಗಳಲ್ಲಿ ಇವರಿಬ್ಬರು ಗಮನಾರ್ಹವಾಗಿ ಕೆಲಸ ಮಾಡಿದ್ದಾರೆ.  ಅವರ ಕೆಲವು ಹಿಟ್ ಸಾಂಗುಗಳಲ್ಲಿ ಅನಿಸುತ್ತದೆ (ಮುಂಗಾರು ಮಳೆ), ಕನಸೊ ಇದು (ಚೆಲುವಿನ ಚಿತ್ತಾರ), ನಿನ್ನಿಂದಲೇ ನಿನ್ನಿಂದಲೇ (ಮಿಲನ), ಆರಾಮಾಗಿ(ಗೊಕುಲಾ) ಮುಂತಾದವು ಸೇರಿವೆ. ಈ ಅನೇಕ ಹಿಟ್ ಸಾಂಗುಗಳನ್ನು ಸಾಹಿತಿ ಜಯಂತ್ ಕಾಯ್ಕಿಣಿಯವರು ಬರೆದಿದ್ದಾರೆ ಅನ್ನೋದು ವಿಶೇಷ. ಈಗ, ಈ ತ್ರಿಮೂರ್ತಿಗಳು ಮತ್ತೆ "ಅಲೆವ ಮೋಡ" ಸಿನಿಮಾದ ಮೂಲಕ ಒಂದಾಗಿದ್ದಾರೆ ಎನ್ನಬಹುದು. 


ಈ ಚಿತ್ರವನ್ನು ಸತೀಶ್ ಪ್ರಧಾನ್ ನಿರ್ದೇಶಿಸಿದ್ದಾರೆ, ಇವರು ಈ ಮೊದಲು ಪೂಜಾ ಗಾಂಧಿಯವರೊಂದಿಗೆ ಅಭಿನೇತ್ರಿ, ಪ್ರಜ್ವಲ್ ದೇವರಾಜ್ ಜೊತೆಗೆ ಮಾಧ ಮತ್ತು ಮಾನಸಿ ಚಿತ್ರಗಳನ್ನು ನಿರ್ದೇಶಿಸಿದ್ದರು ಎಂದು ತಿಳಿದುಬಂದಿದೆ. ಉಳಿದಂತೆ ಚಿತ್ರದಲ್ಲಿ  ಶಿಶಿರ್ ಶಾಸ್ತ್ರಿ, ಪ್ರಿಯಾಂಕ ಚಿಂಚೋಲಿ, ಶುಭ ಪೂಂಜ, ವಿಜಯಲಕ್ಷ್ಮಿ, ವೀಣಾ ಸುಂದರ್, ಪವನ್ ಕುಮಾರ್, ವಿ.ಮನೋಹರ್, ಶೋಭರಾಜ್, ಮಂಡ್ಯ ರಮೇಶ್, ಮೈಕೋ ನಾಗರಾಜ್, ಅರಸು, ಮೋಹನ್ ಜುನೇಜ, ಡ್ಯಾನಿ ಕುಟ್ಟಪ್ಪ ಇನ್ನೂ  ಮುಂತಾದ ತರಗಣವಿದೆ.


ಚಿತ್ರಕ್ಕೆ ಗುರು ಪ್ರಶಾಂತ್ ರೈ ಅವರ ಛಾಯಾಗ್ರಹಣ, ಮತ್ತು ಅತ್ತ ಎ. ಆರ್.ಸಾಯಿರಾಮ್ ಅವರ ಸಂಭಾಷಣೆ, ಅರ್ಜುನ್ ಕಿಟ್ಪು ಅವರ ಸಂಕಲನ, ವಿಕ್ರಮ್ ಮೊರ್ ಅವರ ಸಾಹಸ ಸಂಯೋಜಿಸಿದ್ದಾರೆ ಹಾಗೂ,  ಬಿ. ಧನಂಜಯ, ಮತ್ತು ಮೋಹನ್, ನೃತ್ಯ ಸಂಯೋಜನೆ ಮಾಡಿದ್ದಾರೆ, ಅರ್ಜುನ್ ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ಚಮತ್ಕಾರ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಚಿತ್ರತಂಡವು ಚಿತ್ರದ ಟೈಟಲ್ ಸಾಂಗ್ ಲಿರಿಕಲ್ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ಚಿತ್ರ ಸೊಗಸಾಗಿ ಮೂಡಿ ಬಂದಿದ್ದು, ಅತೀ ಶೀಘ್ರದಲ್ಲಿ ಉಳಿದ ಹಾಡುಗಳನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದೆ ಚಿತ್ರತಂಡ.


ಅಳೆವ ಮೋಡ ಅವಳು, ಹಾಡು ನೀವು ಕೇಳಿ, ನಿಮ್ಮ ಅಭಿಪ್ರಾಯ ತಿಳಿಸಿ, ಇಷ್ಟ ಆದ್ರೆ ಶೇರ್ ಮಾಡುವ ಮೂಲಕ ಪ್ರೋತ್ಸಾಹ ನೀಡಿ ಧನ್ಯವಾದಗಳು...