Thursday, 24 March 2022

ಲವ್ ಮಾಕ್ಟೈಲ್ ಯಶಸ್ಸಿನ ನಂತರ ಲೋಕಲ್ ಟ್ರೈನ್ ಮೂಲಕ ಮತ್ತೆ ಎಂಟ್ರಿ ಕೊಡುತ್ತಿರುವ ನಟ ಡಾರ್ಲಿಂಗ್ ಕೃಷ್ಣ..!

ಹೌದು ಇತ್ತೀಚಿಗೆ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್ ನಲ್ಲಿ ಲವ್ ಮಾಕ್ಟೈಲ್-2 ಸಿನಿಮಾ ಭರ್ಜರಿಯಾಗಿ ಹಿಟ್ ಆಗಿದೆ. ಕೋವಿಡ್ ನಡುವೆ ಲವ್ ಮಾಕ್ಟೈಲ್ ಸಿನಿಮಾ ಮಾಡಿ, ಸಿನಿ ಪ್ರೇಕ್ಷಕರನ್ನು ಹೆಚ್ಚು ರಂಜಿಸಿ ಇನ್ನೊಂದು ಕಡೆ ನಿಧಿಮಾ ನೆನಪಲ್ಲಿಯೇ ಕಣ್ಣೀರು ಹಾಕಿಸಿದ್ದ ಈ ಜೋಡಿ ಮತ್ತೊಮ್ಮೆ ತೆರೆಯ ಮೇಲೆ ಲವ್ ಮಾಕ್‌ಟೇಲ್ 2 ಮಾಡಿ ಗೆದ್ದಿದೆ ಎನ್ನಬಹುದು. ಹೌದು ನಾಯಕ ನಟ ಕೃಷ್ಣ ಅವರ ಮತ್ತೊಂದು ದೀರ್ಘಾವಧಿಯ ಚಿತ್ರ ಲೋಕಲ್ ಟ್ರೈನ್ ಈಗ ಎಲ್ಲಾ ಸಿದ್ಧತೆ ಮಾಡಿಕೊಂಡು ಅಂತಿಮವಾಗಿ ತೆರೆಗೆ ಬರಲು ಸಜ್ಜಾಗಿದೆಯಂತೆ. ಸಿನಿಮಾ ಇದೆ ಏಪ್ರಿಲ್ ಒಂದಕ್ಕೆ ಬರುತ್ತಿದ್ದು, ಅಭಿಮಾನಿಗಳು ಇಟ್ಟ ಆ  ನಿರೀಕ್ಷೆಯನ್ನು ನಿಜ ಮಾಡಲು ಎಂಟ್ರಿ ಕೊಡುತ್ತಿದೆ. 

ಲೋಕಲ್ ಟ್ರೈನ್ ಸಿನಿಮಾವನ್ನ ಎಸ್ ಹೆಚ್ ವಾಲ್ಕೆ ಅವರು ನಿರ್ಮಾಣ ಮಾಡುತ್ತಿದ್ದಾರೆ. ಮೀನಾಕ್ಷಿ ದೀಕ್ಷಿತ್, ಎಸ್ಟರ್ ನೊರೊನ್ಹಾ ಮತ್ತು ಸಾಧು ಕೋಕಿಲಾ ಕೂಡ ನಟಿಸಿರುವ ಆಕ್ಷನ್ ಹಾಗೂ ಸಕತ್ ರೋಮ್ಯಾಂಟಿಕ್ ಚಿತ್ರ ಲೋಕಲ್ ಟ್ರೈನ್ ಏಪ್ರಿಲ್ 1 ರಂದು ಬರುತ್ತಿದೆ. ಹೌದು ನಿರ್ದೇಶಕ ರುದ್ರಮಣಿ ನಿರ್ದೇಶನದಲ್ಲಿ ಈ ಲೋಕಲ್ ಟ್ರೈನ್ ಸಿನಿಮಾ ಮೂಡಿ ಬರುತ್ತಿದ್ದು ತಮ್ಮ ದೈನಂದಿನ ಚಟುವಟಿಕೆಗಳಿಗಾಗಿ ರೈಲಿನಲ್ಲಿ ಪ್ರಯಾಣಿಸುವ ಜನರ ಸುತ್ತವೆ ಸುತ್ತುತ್ತದಂತೆ ಈ ಲೋಕಲ್ ಟ್ರೈನ್ ಸಿನಿಮಾ ಕಥೆ. ಹೌದು ಸುಬ್ರಾಯ ವಾಲ್ಕೆ ಅವರ ಬೆಂಬಲದೊಂದಿಗೆ, ಲೋಕಲ್ ಟ್ರೈನ್‌ನಲ್ಲಿ ಭಜರಂಗಿ ಲೋಕಿ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ..

ಅರ್ಜುನ್ ಜನ್ಯ ಸಂಗೀತವಿದ್ದು, ಲೋಕಲ್ ಟ್ರೈನ್ ಚಿತ್ರಕ್ಕೆ ರಮೇಶ್ ಬಾಬು ಅವರು ಛಾಯಾಗ್ರಹಣ ನೀಡಿದ್ದಾರೆ. ಲವ್ ಮಾಕ್ಟೈಲ್ 2 ರ ನಂತರ, ನಟ ಡಾರ್ಲಿಂಗ್ ಕೃಷ್ಣ ಅವರು ತಮ್ಮ ನಟನೆಯ ಕಾರ್ಯಯೋಜನೆಯ ಮೇಲೆ ಹೆಚ್ಚು ಸಕಾರಾತ್ಮಕವಾಗಿ ಕೇಂದ್ರೀಕರಿಸುತ್ತಿದ್ದಾರೆ. ಹೌದು ಹೆಚ್ಚು ಸಿನಿಮಾಗಳಲ್ಲಿ ಬಿಜಿ ಇರುವ ನಟ ಡಾರ್ಲಿಂಗ್ ಕೃಷ್ಣ ಅವರ ಕೈಯ್ಯಲ್ಲಿ ಇದೀಗ ಸಾಕಷ್ಟು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಲಕ್ಕಿ ಮ್ಯಾನ್ ಬಿಡುಗಡೆಗೆ ಎದುರು ನೋಡುತ್ತಿರುವ ನಟ ಕೃಷ್ಣ ಅವರು, ಶುಗರ್ ಫ್ಯಾಕ್ಟರಿ, ದಿಲ್ ಪಸಂದ್, ಲವ್ ಮಿ ಆರ್ ಹೇಟ್ ಮಿ, ಹಾಗೆ ಮತ್ತೊಂದು ಪ್ರೇಮ್ ಕಹಾನಿ ಲವ್ ಬರ್ಡ್ಸ್ ಸಿನಿಮಾ ನಿರ್ಮಾಣದ ವಿವಿಧ ಹಂತಗಳಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೆ ಎಲ್ಲರೂ ತಪ್ಪದೆ ಏಪ್ರಿಲ್ ಒಂದಕ್ಕೆ ಲೋಕಲ್ ಟ್ರೈನ್ ಸಿನಿಮಾವನ್ನು ಥಿಯೇಟರ್ ನಲ್ಲೇ ವೀಕ್ಷಿಸಿ ಪ್ರೋತ್ಸಾಹ ನೀಡಿ ಧನ್ಯವಾದ..

Tuesday, 22 March 2022

ವಿಭಿನ್ನ ಅನುಭವ ನೀಡಲು ತೆರೆಗೆ ಅಪ್ಪಳಿಸಲು ಸಜ್ಜಾದ ತ್ರಿಕೋನ..! ಯಾವಾಗ ಬಿಡುಗಡೆ ಗೊತ್ತಾ..?


Highlights

1. ವಿಭಿನ್ನ ಅನುಭವ ನೀಡಲು ತೆರೆಗೆ ಅಪ್ಪಳಿಸಲು ಸಜ್ಜಾದ              ತ್ರಿಕೋನ..

2. ಸಿನಿಮಾ ಇದೆ ಏಪ್ರಿಲ್ ಒಂದಕ್ಕೆ ಭರ್ಜರಿಯಾಗಿ ಎಂಟ್ರಿ..

3. ಚಂದ್ರಕಾಂತ್ ನಿರ್ದೇಶನದಲ್ಲಿ ಮೂಡಿಬಂದ ತ್ರಿಕೋನ.. 

4. ತ್ರಿಕೋನದಲ್ಲಿ ಜಲಕ್ ನೀಡಲಿರುವ ಕನ್ನಡದ ಅತಿ ದೊಡ್ಡ           ತಾರಬಳಗ..

ಬೆಂಗಳೂರು: ನಿರ್ಮಾಪಕ-ಬರಹಗಾರ ಆಗಿರುವ ರಾಜಶೇಖರ್ ಅವರ ಮುಂಬರುವ ಚಂದ್ರಕಾಂತ್ ನಿರ್ದೇಶನದ 'ತ್ರಿಕೋನ' ಒಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಇದು ಏಪ್ರಿಲ್‌ ಒಂದಕ್ಕೆ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಯೌಟ್ಯೂಬ್ ನಲ್ಲಿ ಈಗಾಗಲೇ ಟ್ರೈಲರ್ ಹಾಗೂ ಹಾಡುಗಳ ಮೂಲಕ ಹೆಚ್ಚು ನಿರೀಕ್ಷೆ ಮೂಡಿಸಿದೆ.. ತ್ರಿಕೋನ ಮುಂಬರುವ ಕನ್ನಡ ಚಿತ್ರ. ಹೌದು ಚಂದ್ರಕಾಂತ್ ನಿರ್ದೇಶನದ ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ಲಕ್ಷ್ಮಿ, ಅಚ್ಯುತ್ ಕುಮಾರ್ ಮತ್ತು ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸಾಧು ಕೋಕಿಲ, ಮಂದೀಪ್ ರೈ ಮತ್ತು ರಾಕ್‌ಲೈನ್ ಸುಧಾಕರ್ ತ್ರಿಕೋನಕ್ಕಾಗಿ ಆಯ್ಕೆಯಾದ ಇತರ ಜನಪ್ರಿಯ ನಟರು ಸಹ ಈ ತ್ರಿಕೋನ ಸಿನಿಮಾದಲ್ಲಿ ಅಭಿನಯ ಮಾಡಿದ್ದಾರೆ.

ತ್ರಿಕೋನ ಸಿನಿಮಾದ ಹಾಡುಗಳ ಜಲಕ್ ಯೂಟ್ಯೂಬ್ ನಲ್ಲಿ ಈಗಾಗಲೇ ಸಕ್ಕತ್ ಸದ್ದು ಮಾಡುತ್ತಿವೆ. ಚಲ್ ಚಲ್ ಚುಲ ಎಂಬ ಲಿರಿಕಲ್ ಹಾಡು ಒಂದು ಮಿಲಿಯನ್ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಒಂದು ವಿಭಿನ್ನವಾದ ಪ್ರಯತ್ನದಲ್ಲಿ ಸಿನಿಮಾ ಅಭಿಮಾನಿಗಳ ಎದುರು ತ್ರಿಕೋನವನ್ನ ಬಿಡುಗಡೆ ಮಾಡಲು ಚಿತ್ರತಂಡ ಎಲ್ಲಾ ತಯಾರಿ ನಡೆಸಿದೆ. ಹೌದು ಸಿನಿಮಾರಂಗದಲ್ಲಿ ಮೊಟ್ಟಮೊದಲ ಬಾರಿ ಟ್ರೈಲರ್ ಜೊತೆ ಸಾಂಗ್ ಮಿಕ್ಸ್ ಮಾಡಿಬಿಟ್ಟಿದ್ದಾರೆ. ಟ್ರೈಲರ್ ಇದೀಗ ಒಂದು ಮಿಲಿಯನ್ ವೀಕ್ಷಣೆ ಪಡೆದಿದ್ದು, ವಿಭಿನ್ನ ಪ್ರಯತ್ನದ ಛಾಯೆ ಈ ತ್ರಿಕೋನದಲ್ಲಿ ಎದ್ದು ಕಾಣುತ್ತಿದೆ. ಈ ಸಿನಿಮಾ ಒಂದು ಸಕತ್ ತ್ರಿಲ್ಲರ್ ಸಿನಿಮಾ ಆಗಿರಲಿದೆ. ಹಾಗೇ ನೋಡುಗರಿಗೆ ವಿಭಿನ್ನ ಹೊಸ ಅನುಭವ ನೀಡುವುದಂತೂ ಗ್ಯಾರಂಟಿ.

ಚಿತ್ರತಂಡ ಇದೇ ಏಪ್ರಿಲ್ ಒಂದನೇ ತಾರೀಕು ರಾಜ್ಯಾದ್ಯಂತ ಸಿನಿಮಾ ಬಿಡುಗಡೆಗಾಗಿ ತಯಾರಿ ನಡೆಸಿದ್ದು, ಸಿನಿಮಾದ ಪೋಸ್ಟರ್ ಹಾಡುಗಳು ಎಲ್ಲರನ್ನ ಥಿಯೇಟರ್ ಬಳಿ ಪಕ್ಕಾ ಕರೆ ತರುತ್ತಿವೆ. ಹೌದು ಪ್ರೇಕ್ಷಕರು ಕೂಡ ಈ ಸಿನಿಮಾವನ್ನು ತೆರೆಯ ಮೇಲೆ ನೋಡಲು ತುಂಬಾ ಕಾತುರರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ತ್ರಿಕೋನ ಚಿತ್ರದಲಿ ಒಬ್ಬ ಮನುಷ್ಯ  ಜೀವನದಲ್ಲಿ ಎಂಥಹ ಸಮಸ್ಯೆಗಳನ್ನ ಎದುರಿಸುತ್ತಾನೆ. ಹೇಗೆ ಅಹಂ ಕೋಪ ತಾಳ್ಮೆ ನಡುವೆ ಸಿಕ್ಕಿ ಒದ್ದಾಡುತ್ತಾನೆ ಎಂದು ತೋರಿಸಿದ್ದು, ಅದರಿಂದ ನಾವು ಹೊರ ಬರುವುದು ಹೇಗೆ ಎಂಬುದಾಗಿಯೂ ತೋರಿಸಲಾಗಿದೆ. ತ್ರಿಕೋನ ಚಿತ್ರತಂಡಕ್ಕೆ ಒಳ್ಳೆಯದು ಆಗಲಿ ಎಂದು ನೀವು ಶುಭಕೋರಿ. ಹಾಗೆ ಎಲ್ಲಾರೂ ತಪ್ಪದೆ ಏಪ್ರಿಲ್ ಒಂದನೆ ತಾರಿಕಿಗೆ ಥಿಯೇಟರ್ಗೆ ಹೋಗಿಯೇ ಸಿನಿಮಾ ನೋಡಿ...


Thursday, 10 March 2022

ಪ್ಯಾನ್ ಇಂಡಿಯಾ ಕಬ್ಜದಲ್ಲಿ ಮಧುಮತಿ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ ಶ್ರೀಯಾ..! ಹೇಗಿದೆ ಫಸ್ಟ್ ಲುಕ್..?



ವರ್ಷದ ಬಹು ನಿರೀಕ್ಷಿತ ಸ್ಯಾಂಡಲ್‌ವುಡ್ ಚಿತ್ರಗಳಲ್ಲಿ ಒಂದಾದ ಕಬ್ಜಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ನಟಿ ಶ್ರಿಯಾ ಸರನ್ ಮಾರ್ಚ್ 7 ರಂದು ಅವರ ಅಭಿಮಾನಿಗಳ ಮುಂದೆ ಭಾನುವಾರ ಘೋಷಿಸಿದರು. ಅಭಿಮಾನಿಗಳೊಂದಿಗೆ ಪ್ರಕಟಣೆಯನ್ನು ಹಂಚಿಕೊಂಡ ಶ್ರೀಯಾ ಹೀಗೆ ಬರೆದಿದ್ದಾರೆ: “ಕಬ್ಜಾ 1970 ರ ದಶಕದಲ್ಲಿ ನಡೆದ ಆಕ್ಷನ್ ಚಲನಚಿತ್ರವಾಗಿದೆ. ಈ ಚಲನಚಿತ್ರವು ಭಾರತದ ಇತಿಹಾಸದಲ್ಲಿ ಇದುವರೆಗೆ ಬಹಿರಂಗಪಡಿಸದ ಕ್ರೂರ ದರೋಡೆಕೋರನ ಪ್ರಯಾಣವನ್ನು ಚಿತ್ರಿಸುತ್ತದೆ. ನನಗೂ ಅದರ ಬಗ್ಗೆ ತಿಳಿಯುವ ಕುತೂಹಲವಿದೆ.. ಅಲ್ಲವೇ?”  ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾ, ಶ್ರೀಯಾ ಬರೆದಿದ್ದಾರೆ...

ಹೌದು ಕಬ್ಜ ಚಿತ್ರವನ್ನು ನಿರ್ದೇಶಕ ಆರ್ ಚಂದ್ರು ಅವರು ನಿರ್ದೇಶನ ಮಾಡಿದ್ದಾರೆ. ಹಾಗೇನೇ ರವಿ ಬಸ್ರುರು ಅವರು ಸಿನಿಮಾಗೆ ಮ್ಯೂಸಿಕ್ ನೀಡಿದ್ದಾರೆ. ಪ್ಯಾನ್ ಇಂಡಿಯಾ ಕಬ್ಜ ಈಗಾಗಲೇ ಕುತೂಹಲ ಮೂಡಿಸಿದ್ದು ಯಾವಾಗ ಸಿನಿಮಾ ಬಿಡುಗಡೆ ಆಗುತ್ತದೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂಡಿಯಾದ ಖ್ಯಾತ ನಿರ್ದೇಶಕ ಹಾಗೂ ನಟ ಸೂಪರ್ ಸ್ಟಾರ್ ಉಪೇಂದ್ರ ಅವರ ಅಭಿನಯದ ಈ ಕಬ್ಜ ಸಿನಿಮಾದಲ್ಲಿ ಸ್ಯಾಂಡಲ್ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಸೌತ್ ಸಿನಿ ರಂಗದ ಇನ್ನೂ ಖ್ಯಾತ ಸ್ಟಾರ್ ನಟರುಗಳ ತಾರಾ ಬಳಗವಿದೆ. ನಟಿ ಕಾಜಲ್ ಅಗರ್ವಾಲ್, ಶ್ರೀಯಾ, ನಯನತಾರ ಅವರು ಸಹ ನಟನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಹೌದು ಕಬ್ಜ ಸಿನಿಮಾದಲ್ಲಿ ನಟಿ ಶ್ರೀಯಾ ಸರನ್ ಅವರು ಕೂಡ ಅಭಿನಯಿಸುತ್ತಿದ್ದು, ಶ್ರೇಯಾ ಅವರ ಮಧುಮತಿ ಪಾತ್ರದ ಹೊಸ ಪೋಸ್ಟರ್ ಮೊನ್ನೆ ಬಿಡುಗಡೆಯಾಯಿತು. ಪ್ಯಾನ್ ಇಂಡಿಯಾ ಕಬ್ಜಾ ಸಿನಿಮಾ ಅತಿ ದೊಡ್ಡ ಬಜೆಟ್ ಸಿನಿಮಾವಾಗಿ ಮೂಡಿ ಬರಲಿದೆ. ಕೆಜಿಎಫ್ ಬಳಿಕ ಇದು ಅತಿ ದೊಡ್ಡ ಹೈಪ್ ಕ್ರಿಯೇಟ್ ಮಾಡುತ್ತದೆ ಎಂದು ಸಿನಿ ತಜ್ಞರು ಹೇಳುತ್ತಿದ್ದಾರೆ. ಹೌದು ಈ ಖುಷಿ ವಿಚಾರವನ್ನು ನಟಿ ಶ್ರೀಯಾ ಸರನ್ ಅವರು ಹೇಳಿಕೊಂಡಿದ್ದು ಜೊತೆಗೆ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಅವರು ಅವರ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೆ ಖ್ಯಾತ ಕನ್ನಡ ನಟರುಗಳಾದ ಕಿಚ್ಚ ಸುದೀಪ್ ಹಾಗೂ ಉಪೇಂದ್ರ ಅವರ ಜೊತೆ ಅಭಿನಯ ಮಾಡಲು ತುಂಬಾ ಖುಷಿಯಾಗುತ್ತಿದೆ ಎಂದು ಇನ್ಸ್ಟಾದಲಿ ಬರೆದುಕೊಂಡಿದ್ದಾರೆ. ಹೌದು ಈ ನಟರೊಂದಿಗೆ ಕೆಲಸ ಮಾಡಲು ತುಂಬಾ ಸಂತೋಷವಾಗಿದೆ….  ಇದೊಂದು ಅದ್ಭುತ ಚಿತ್ರವಾಗಲಿದೆ. ” ಎಂದಿದ್ದಾರೆ ನಟಿ ಶ್ರೀಯಾ...