Saturday, 26 July 2025

ಜೀವನದಲ್ಲಿ ಪ್ರತಿ ತಿರುವು ಮುಂದಿನ ತಿರುವಿಗೆ ಪೂರಕವಾಗಿರುತ್ತದೆ


 ಜೀವನದಲ್ಲಿ ಪ್ರತಿ ತಿರುವು ಮುಂದಿನ ತಿರುವಿಗೆ ಪೂರಕವಾಗಿರುತ್ತದೆ

ಜೀವನ ಎಂದರೆ ನೇರರೇಖೆ ಅಲ್ಲ — ಅದು ತಿರುವುಗಳ, ಏರುಪೇರುಗಳ, ಆಶ್ಚರ್ಯಗಳ ಸಂಚಯ. ನಾವು ಎದುರಿಸುವ ಪ್ರತಿಯೊಂದು ತಿರುವು ಒಂದು ಪಾಠ. ಅದನ್ನು ಆ ಕ್ಷಣದಲ್ಲಿ ನೋವಿನಂತೆ ಅನಿಸಬಹುದು, ಆದರೆ ಮುಂದೆ ಹೋಗುವ ದಾರಿ ಅಂದರೆ ಅದೇ ಪಾಠದ ಬುನಾದಿ.

ಕಟ್ಟಡದೊಳಗಿನ ಪ್ರತಿಯೊಂದು ಇಟ್ಟಿಗೆ ಇನ್ನೊಂದು ಇಟ್ಟಿಗೆಯ ಆಧಾರವಾಗಿರುವಂತೆ, ಜೀವನದಲ್ಲಿಯೂ ಪ್ರತಿ ಅನುಭವ, ಪ್ರತಿ ನಿರ್ಧಾರ, ಪ್ರತಿ ತಪ್ಪು ಕೂಡ ಮುಂದಿನ ಹಂತದ ಪೂರಕವಾಗಿರುತ್ತದೆ. ನಾವು ಇಂದು ನೋಡುವ ಸೋಲು, ನಾಳೆಯ ಗೆಲುವಿಗೆ ಪೂರ್ವಭಾವಿಯಾಗಿರಬಹುದು. ನಾವೆಂದುಕೊಳ್ಳುವುದು "ಅಂತ್ಯ" ಎಂಬುದು, ಬಹುಷಃ ಹೊಸ ಅಧ್ಯಾಯದ ಆರಂಭವಾಗಿರಬಹುದು.

ಇದು ಹೇಗೆ ಸಾಧ್ಯ?
ಒಮ್ಮೆ ಯೋಚಿಸಿ — ನೀವು ಯಾವುದಾದರೂ ಸವಾಲು ಎದುರಿಸಿ, ಅದರಲ್ಲಿಂದ ಪಾಠ ಕಲಿತೀರಿ. ನಂತರ ಬಂದ ಮತ್ತೊಂದು ಸಮಸ್ಯೆಯನ್ನು ನೀವು ಸುಲಭವಾಗಿ ಎದುರಿಸಿದಿರಿ. ಅದುವರೆಗೆ ಕಂಡಿದ್ದ ಕಷ್ಟ, ಮುಂದೆ ನೀನು ನೋಡುವ ಬೆಳಕಿಗೆ ತಳಹದಿ ಹಾಕಿತ್ತೆಂಬುದು ನಿಮಗರ್ಥವಾಗುತ್ತದೆ. ಹಾಗಾಗಿಯೇ, ಹಿಂದೆ ನಡೆದ ತಿರುವುಗಳು, ಮುಂದಿನ ದಾರಿಗಳಿಗೆ ಕಣ್ಣು ತೆರೆಸುವ ಸಾಧನವಾಗುತ್ತವೆ.

ಪ್ರತಿಯೊಂದು ತಿರುವೂ ನಮ್ಮನ್ನು ರೂಪಿಸುತ್ತದೆ. ಕೆಲವೊಂದು bizi ತಿರುವುಗಳು ನಾವು ಯಾವಾಗಲೂ ನೆನೆಸಿಕೊಳ್ಳುವ ಪಾಠವಾಗಿ ಉಳಿಯುತ್ತವೆ. ಕೆಲವು ತಿರುವುಗಳು ನಮ್ಮನ್ನು ಬದಲಾಯಿಸುತ್ತವೆ, ನಮ್ಮ ದೃಷ್ಟಿಕೋಣವನ್ನೇ ಮರುಆಕರಿಸುತ್ತವೆ.

ಸಾರಾಂಶ:
ಜೀವನದಲ್ಲಿ ಎಲ್ಲವೂ ಕಾರಣವಿರದೆ ಸಂಭವಿಸದು. ಪ್ರತಿಯೊಂದು ಅನುಭವಕ್ಕೂ ಒಂದು ಉದ್ದೇಶವಿದೆ. ಪ್ರತಿಯೊಂದು ತಿರುವು ಮುಂದಿನ ತಿರುವಿಗೆ ದಾರಿ ತೋರಿಸುತ್ತವೆ. ಆತ್ಮವಿಶ್ವಾಸದಿಂದ, ಧೈರ್ಯದಿಂದ, ನಂಬಿಕೆಯಿಂದ ಮುಂದೆ ನಡೆದರೆ – ಪ್ರತಿಯೊಂದು ತಿರುವೂ ನಿನಗೆ ಬೆಳಕಾಗಿ ಮಾರ್ಗದರ್ಶನ ನೀಡುತ್ತದೆ.



✍️ ಪೃಥ್ವಿರಾಜ್ ಕೊಪ್ಪ 

Friday, 25 July 2025

ನಂಬಿಕೆ ಇಲ್ಲದ ಪ್ರೀತಿ ಹುಚ್ಚು ಕುದುರೆಯಂತೆ

 

ಪ್ರೀತಿಯಲ್ಲಿ ನಂಬಿಕೆ ಅತ್ಯಂತ ಮುಖ್ಯ.

ಯಾವಾಗಲೂ ಸಂದೇಹ ಪಡುವುದು ಸಂಬಂಧವನ್ನು ಹಾಳು ಮಾಡುತ್ತದೆ.

ಒಬ್ಬರ ಮೇಲೆ ಭರವಸೆ ಇಟ್ಟು ಬದುಕಿದಾಗ ಪ್ರೀತಿಗೆ ಅರ್ಥ ಬರುತ್ತದೆ.

ನಂಬಿಕೆ ಇಲ್ಲದೆ ಪ್ರೀತಿ ನಡೆಸುವುದು ಕಲ್ಲಿನ ಮೇಲೆ ಮನೆ ಕಟ್ಟಿದಂತೆ – ಯಾವ ಕ್ಷಣವಾದರೂ ಕುಸಿಯಬಹುದು.

ಹೃದಯದಿಂದ ನಂಬಿದರೆ, ಪ್ರೀತಿಯ ಬಂಧನ ಇನ್ನಷ್ಟು ಬಲವಾಗುತ್ತದೆ.


ಪ್ರೀತಿ ಅಂದರೆ ಹೃದಯಗಳ ಸಂಗಮ, ಆದರೆ ನಂಬಿಕೆ ಅಂದರೆ ಆ ಸಂಗಮದ ಅಡಿಷ್ಠಾನ.

ನಂಬಿಕೆ ಇರುವ ಸ್ಥಳದಲ್ಲಿ ಅರ್ಥಪೂರ್ಣ ಪ್ರೀತಿ ಮೂಡುತ್ತದೆ, ಅಲ್ಲದೆ ಯಾವುದೇ ಬಿಕ್ಕಟ್ಟುಗೂ ತಡೆಯಾಗುತ್ತದೆ.

ಯಾವಾಗಲೂ ಅನುಮಾನ ಪಡುತ್ತಾ ಹೋದರೆ, ಪ್ರೀತಿಯ ಮೌಲ್ಯವೇ ಕಳೆದುಹೋಗುತ್ತದೆ.

ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಹಾಗೂ ವಿಶ್ವಾಸ ಬೇಕಾಗಿರುವಾಗ, ಸಂದೇಹವು ಬಂಧನ ತರುತ್ತದೆ.

ಪ್ರೇಮದಲ್ಲಿ ನಂಬಿಕೆಗೆ ಜಾಗವಿಲ್ಲದಿದ್ದರೆ, ಅದು ನಿಜವಾದ ಪ್ರೇಮವಲ್ಲ.

ಒಬ್ಬನನ್ನು ನಂಬಿದಾಗ ಮಾತ್ರ ಅವರೊಂದಿಗೆ ಭವಿಷ್ಯದ ಕನಸು ಕಟ್ಟಬಹುದು.

ಸಂದೇಹಗಳು ಪ್ರೀತಿಯನ್ನು ಕ್ಷೀಣಗೊಳಿಸುತ್ತವೆ, ನಂಬಿಕೆ ಮಾತ್ರ ಅದನ್ನು ಬಲಪಡಿಸುತ್ತದೆ.

ಹೃದಯವಿಟ್ಟು ಪ್ರೀತಿಸಿ, ಶ್ರದ್ಧೆಯಿಂದ ನಂಬಿದರೆ ಪ್ರೀತಿ ಶಾಶ್ವತವಾಗುತ್ತದೆ.

ಪ್ರೇಮವು ಕಣ್ಣಲ್ಲಿ ಕಾಣದು, ಅದು ನಂಬಿಕೆಯಲ್ಲಿ ಬದುಕುತ್ತದೆ.

ಒಬ್ಬರನ್ನು ನಂಬುವುದು ಅಂದರೆ, ಅವರ ತಪ್ಪುಗಳನ್ನು ಮನ್ನಿಸಿ ಮುಂದುವರಿಯುವುದು.


ನಂಬಿಕೆಯಿಲ್ಲದ ಪ್ರೀತಿ ಅಂತರಾಳದಲ್ಲಿ ತುಂಡಾಗುವ ಗಾಜು.

ಹೃದಯ ಕೊಡುವ ಮುನ್ನ ನಂಬಿಕೆ ನೀಡಬೇಕು, ಏಕೆಂದರೆ ಪ್ರೀತಿ ನಂಬಿಕೆಯ ಮೇಲೆ ಬಾಳುತ್ತದೆ.

ಅವನು/ಅವಳು ಎಷ್ಟು ದೂರ ಇದ್ದರೂ ನಂಬಿಕೆ ಇದ್ದರೆ ಪ್ರೀತಿ ಅದೆಷ್ಟೋ ಹತ್ತಿರವಾಗಿರುತ್ತದೆ.

ಸಂದೇಹಗಳು ಬಂದಾಗ ಮಾತನಾಡಿ, ಸಂಬಂಧ ಮುರಿಯಬೇಡಿ.

ನಂಬಿಕೆಯಿಂದಲೇ ಪ್ರೀತಿಯಲಿ ಶಾಂತಿ, ಸಂತೋಷ, ಮತ್ತು ಸಮಾಧಾನ ಇರುತ್ತದೆ.

ಪ್ರತಿಯೊಂದು ಸಂಬಂಧದಲ್ಲೂ ನಂಬಿಕೆ ಸ್ತಂಭವೋ, ಅದು ಉರುಳಿದರೆ ಪ್ರೀತಿ ಕುಸಿಯುತ್ತದೆ.

ಪ್ರೇಮಿಸಿ, ಆದರೆ ಮೊದಲಿಗೆ ನಂಬಿಕೆಗೆ ಸ್ಥಳ ನೀಡಿ – ಅದು ಎಲ್ಲವನ್ನೂ ಕಟ್ಟುತ್ತದೆ.

ಪ್ರೀತಿಯಲಿ ಮಾತುಗಳಿಗಿಂತ ನಂಬಿಕೆಯ ಶಕ್ತಿ ಹೆಚ್ಚು.

ನಂಬಿದವನು ದೂರವಾದರೂ ತೊಂದರೆಯಾಗುವುದಿಲ್ಲ, ಆದರೆ ಅನುಮಾನಿಸಿದವನು ಹತ್ತಿರವಿದ್ದರೂ ನರಕವೇ.

ನಂಬಿಕೆ ಉಳಿದರೆ ಸಂಬಂಧ ಉಳಿಯುತ್ತದೆ, ಇಲ್ಲದಿದ್ದರೆ ಪ್ರೀತಿ ನಿರರ್ಥಕ.


ಹುಡುಗರಿಗಾಗಲಿ ಹುಡುಗಿಯರಿಗಾಗಲಿ – ನಂಬಿಕೆ ಇರುವುದು ಪ್ರೀತಿಯ ಪ್ರಥಮ ಗುರಿ.

ಒಬ್ಬರನ್ನು ನಂಬುವುದು ಅಂದರೆ ಅವರ ನೆರಳಿಗು ಬೆನ್ನುಹತ್ತುವುದು – ಬೆಳಕು ಬರುವವರೆಗೆ.


ಸಂಬಂಧ ಉರುಳುವುದು ಹೆಚ್ಚು ವೇಳೆ ದೋಷದಿಂದ ಅಲ್ಲ, ನಿರಂತರವಾದ ಅನುಮಾನಗಳಿಂದ.

ನಿನ್ನ ಸಂಗಾತಿಯ ತೊಂದರೆಗಳನ್ನು ಕೇಳು, ಅವರ ನಿಶ್ಶಬ್ದವನ್ನೂ ಅರ್ಥಮಾಡಿಕೋ.

ನಂಬಿಕೆಯಿಂದ ಪ್ರೀತಿ ಬೆಳೆಯುತ್ತದೆ, ಅನುಮಾನದಿಂದ ಅದು ಉಡಿದು ಹೋಗುತ್ತದೆ.

ಪ್ರತಿ ಸಣ್ಣ ವಿಷಯವನ್ನೂ ಪ್ರಶ್ನಿಸುವ ಬದಲು, ಆ ವ್ಯಕ್ತಿಯೆಂಬ ಜೀವವನ್ನೇ ಒಮ್ಮೆ ನಂಬಿ ನೋಡಿ.

ಪ್ರೀತಿ ಎರಡೂ ಹೃದಯಗಳ ನಡುವಿನ ಒಪ್ಪಂದ. ನಂಬಿಕೆ ಅದು ಕಾಪಾಡುವ ಗೃಹಪ್ರವೇಶ.

ಅವನಿಗೆ ಅಥವಾ ಅವಳಿಗೆ ನಿನ್ನ ಮೇಲೆಯಾದ ನಂಬಿಕೆಯನ್ನು ತೋರಿಸು — ಅದು ಪ್ರೀತಿಗೆ ಉಸಿರಾಗುತ್ತದೆ.


ಪೃಥ್ವಿರಾಜ್ ಕೊಪ್ಪ

Tuesday, 22 July 2025

ಬಸ್ಸಿನ ಪಕ್ಕದ ಸೀಟಿನಲ್ಲಿ ಒಂದು ಭೂತ

 Seat Number UW28 😍 ಬಸ್ಸಿನಲ್ಲಿ ಒಂದು ಭೂತ 


ರಾತ್ರಿ 9.40 pm ಗಂಟೆ. ಊರಿಂದ ಬೆಂಗಳೂರಿಗೆ ಹೋಗುವ ಬಸ್‌ ಅದ್ಧೂರಿಯಾಗಿ ಬಂದು ನಿಂತಿತು.

ಸಿಂಗಲ್ ಸೀಟ್ ಇಲ್ಲದ ಕಾರಣ ಎರಡು ಸೀಟ್ನಲ್ಲಿ ಒಂದು ಕಿಟಕಿ ಬದಿಯ ಸೀಟ್ ಬುಕ್ ಮಾಡಿದ್ದೆ.

ನನ್ನ ಸೀಟು no UW28 ಹಾಗೆ ಬುಕ್ ಮಾಡಿದ ಸೀಟ್ಅನ್ನು ಹತ್ತಿ ಮಲಗಿದೆ.

ಪಕ್ಕದ ಸೀಟ್ನಲ್ಲಿ ಯಾರು ಬರುವರೆಂದು ಕಾಯುತ್ತಾ ಮಲಗಿದ್ದೆ ಸ್ವಲ ಸಮಯದ ನಂತರ ಬಸ್ ಹೊರಟಿತು. ಕಂಡಕ್ಟರ್ ಕೇಳಿ ತಿಳಿದುಕೊಂಡೆ ಪಕ್ಕದ ಸೀಟ್ ಬುಕ್ ಆಗಿಲ್ಲವೆಂದು ಕುಶಿಯಿಂದ ಫುಲ್ ಎರಡು ಸೀಟ್ ಸೇರಿ ಆರಾಮಾಗಿ ಮಲಗಬಹುದು ತಂದಿದ್ದ ಬ್ಲಾಂಕೆಟ್ ಹೊದ್ದು ಮಲಗಿದೆ.– 


ಸರಿಸುಮಾರು ಎರಡು ತಾಸಿನ ನಂತರ ಜೋರಾಗಿ ಗೊರಕೆ ಹೊಡೆಯುವ ಶಬ್ದ ಕೇಳಿ ಎಚ್ಚರವಾಯಿತು 

ಅದೇ ಸಮಯದಲ್ಲಿ ನನ್ನ ಪಕ್ಕದ ಸೀಟಿನಲ್ಲಿ ಒಬ್ಬ ಬಿಳಿ ಶರ್ಟ್, ಕಪ್ಪು ಜೀನ್ಸ್ ಧರಿಸಿರುವ, ಅಪರಿಚಿತ ವ್ಯಕ್ತಿ ಮಲಗಿದ್ದ . ಅವನು ನನ್ನ ಕಡೆ ನೋಡಿ ಒಮ್ಮೆ ನೋಡಿ ತುಸು ನಗುಹರಿಸಿದ್ದ. ನಾನು ಕೂಡ ತಲೆಅಡಗಿಸಿದಂತೆ ನಗುಮಾಡಿ  ಕಂಡಕ್ಟರ್ ಸುಳ್ಳು ಹೇಳಿದ್ದಾನೆ ಎಂದು ಮಗ್ಗಲು ಬದಲಿಸಿ ಮಲಗಿದೆ.


ಸ್ವಲ ಸಮಯದ ನಂತರ ಪಟ್ ಎಂದು ಅವನ ಕಾಲು ನನ್ನ ಕಾಲಿನ ಮೇಲೆ ಬಿತ್ತು , ಯಮ್ಮ ಎಂದು ಬೆಚ್ಚಿ ಬಿದ್ದೆ ! ಪಕ್ಕದವನು ಕರೆದೆ ಚಲನವಲನವೇ ಇರಲಿಲ್ಲ.

ಅರ್ಧ ಗಂಟೆ ಕಳೆದರೂ… ಅವನು ಎದ್ದಿಲ್ಲ. ನಾನು ಹೆದರಲಾರಂಭಿಸಿದೆ.

ಹೆದರಿ ಹೆದರಿ ಕೇಳಿದೆ – "ಸರ್…?"

ಯಾವುದೆ ಪ್ರತಿಕ್ರಿಯೆ ಇಲ್ಲ.

ಚಂಗನೆ ಅವನ ಮೇಲೆಇಂದ ಇಳಿದು ಕಂಡಕ್ಟರ್ ಹತ್ತಿರ ಓಡಿದೆ ಹಾಗೆ ನಡೆದ ವಿಷಯ ತಿಳಿಸಿದೆ! 

ಕಂಡಕ್ಟರ್ ಏನು ಕಾಮಿಡಿನ ಆ ಸೀಟ್ ಕಾಲಿ ಇದೆ ಎಂದು ಮೊದಲೆ ಹೇಳಿದೆ ತಾನೆ ಅಂದರು 


ಮೊದಲೆ ಹೆದರಿದ ನಾನು ಏನು ಸರ್ ಹೇಳ್ತಾ ಇದಿರಿ 

ಈಗ ಅಷ್ಟೆ ನನ್ನ ಪಕ್ಕ ಹಾಗಾದ್ರೆ ಮಲಗಿದ್ದು ಯಾರು ?


ಎಂದು ಇಬ್ಬರು ನನ್ನ ಸೀಟಿನ ಹತ್ತಿರ ಬಂದೆವು ಅಲ್ಲಿ ಯಾರೂ ಕೂಡ ಇರಲಿಲ್ಲ 😒 

ಏನ ಸರ್ ನಿಮಗೆ ಏನೊ ಕನಸು ಬಿದ್ದಿರುತ್ತೆ ಸುಮ್ಮನೆ ಮಲಕೊಳ್ಳಿ ಎಂದು ಗೊಣಗಿಕೊಂಡು ಹೋದ. 


ನಾನು ಇದು ಹೆಂಗೆ ಗುರು ನಿದ್ದೆ ಕಣ್ಣಲ್ಲಿ ನಾನು ಅವನನ್ನು ನೋಡಿದನ ಹಾಗಾದರೆ ಅವನು ಎಲ್ಲಿ 


ಒಂದು ಕ್ಷಣದಲ್ಲಿ ಕಂಡಕ್ಟರ್ ನಿಜ ನ ಸುಳ್ಳು ಮಾಡಿದನಲ್ಲ! ಇದರ ಬಗ್ಗೆ ಇನ್ವೆಸ್ಟಿಗೇಷನ್ ಆಗಲೇ ಬೇಕು ಎಂದು ಜಾಡು ಹಿಡಿದು ಕುಳಿತೆ.. 


ಬೆಂಗಳೂರಿಗೆ ಬರುವಾಗ ಜಾಲಹಳ್ಳಿ ಇಂದ ಕೆಂಪೇಗೌಡ ಬರುವರೆಗೂ ಇಳಿದವರನ್ನು ಬಗ್ಗಿ ನೋಡಿ ಹುಡುಕಿದೆ ನಾ ನೋಡಿದ ವಕ್ತಿ ಬಸ್ಸಿನಿಂದ ಇಳಿಯಲಿಲ್ಲ. 


ಹಾಗೆ ಬಸ್ಸು ಮುಂದೆ ನನ್ನ ಸ್ಟಾಪ್ ಶಾಂತಿನಗರದ ಕಡೆ ಚಲಿಸಿತು .. ನಾನು ಅಪ್ಪರ್ ಸೀಟ್ ಇಳಿದು ಇಳಿಯಲು ಡೋರ್ ಬಳಿಗೆ ನಡೆದುಕೊಂಡು ಬಂದು ನಿಂತೆ!  ತಕ್ಷಣ ಯಾರೋ ಕರೆದಹಾಗಾಯಿತು ! 


ಸರ್ ಸ್ವಲ್ಪ ಕಾಲು ತೆಗಿರಿ ಚಪ್ಪಲಿ ತೆಗಿಬೇಕು ಎಂದು 

ತಿರುಗಿ ನೋಡಿದರೆ ಬಿಳಿ ಶರ್ಟ್, ಕಪ್ಪು ಜೀನ್ಸ್ ಧರಿಸಿರುವ ಅದೆ ವ್ಯಕ್ತಿ ಮುಖ ನೋಡಿ ಮತ್ತೆ ಆದೆ ರೀತಿ ನಕ್ಕುಬಿಟ್ಟ | ಇವನೇ ಅವನು ಕನಸಲ್ಲ ನನಸು.


 । ರಾತ್ರಿ ನನ್ನ ಪಕ್ಕ ಮಲಗಿದ್ರಿ ತಾನೆ ಆಮೇಲೆ ಎಲ್ಲಿ ಹೋಗಿದ್ರಿ ಸರ್ ನೀವು ಎಂದೆ ! ?


ಅವರು ನಗುತ್ತಾ 😁ಸರ್ ನಮ್ದು ಕೆಳಗಡೆ ಸೀಟ್ 

ಅಲ್ಲಿ ನಮ್ಮ ಫ್ಯಾಮಿಲಿ ನಾನು ನನ್ನ ಮಗು ಹೆಂಡತಿ ಮಲಗಿದೆವು ನಾನು ಗೊರಕೆ ಹೊಡೆಯುವ ಕಾರಣಕ್ಕೆ ನನ್ನ ಮಗು ಮಲಗಲಿಲ್ಲ ಹಾಗು ಜಾಗ ಕೂಡ ಚಿಕ್ಕದಿತ್ತು 

ಮೇಲೆ ಸೀಟ್ ಖಾಲಿ ಇದ್ದ ಕಾರಣ ಬಂದು ಮಲಗಿದೆ ಎಂದರು.. 


ಅದು ಸರಿ ನಾನು ಕಂಡಕ್ಟರ್ ಇಬ್ಬರೂ ಬಂದು ನೋಡಿದ್ದಾಗ ನೀವು ಎಲ್ಲಿ ಹೋಗಿದ್ರಿ ? 


ಸರ್ ನೀವು ಕಂಡಕ್ಟರ್ ಗೆ ನನ್ನ ಎಬ್ಬಿಸಲು ಹೇಳಲು ಹೋಗಿದ್ದಿರೆಂದು ಯಾಕೆ ಸುಮ್ಮನೆ ಖಾಲಿ ಸೀಟ್ ನಲ್ಲಿ ಮಲಗಿಕೊಂಡರೆ ಕಂಡಕ್ಟರ್ ಸುಮ್ಮನೆ ಬಯ್ತಾರೆ ಎಂದು ನಾನು ಕೆಳಗಡೆ ಬಂದು ಮಲಗಿದೆ . 

ಮತ್ತೆ ನೀವು ಎಲ್ಲಿ ಇಳಿಯೋದು sir ಅಂತ ಕೇಳಿದರು …


ಎಂತಸಾವು ಮರ್ರೆ ನಿಮದ್ದು ಕಥೆ ಕೇಳಿ ನಾನು ಎಲ್ಲಿ ಇಳಿಬೇಕು ಅನ್ನೋದೆ ಮರೆತು ಹೋದೆ 🙈🙈🤪


✍️ ಪೃಥ್ವಿರಾಜ್ ಕೊಪ್ಪ