Type Here to Get Search Results !

K G F ಸಿನಿಮಾ ಮಧ್ಯಂತರ ತಡೆಯಾಜ್ಞೆ, ಯಶ್ ಅಭಿಮಾನಿಗಳಿಗೆ ನಿರಾಸೆ

Raj Pruthvi 0







ದೇಶಾದ್ಯಂತ ನಾಳೆ ತೆರೆಕಾಣಬೇಕಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಬಹು ನಿರೀಕ್ಷಿತ 'ಕೆಜಿಎಫ್' ಬಿಡುಗಡೆಗೆ ಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.



 ಇದರಿಂದ 'ಕೆಜಿಎಫ್'ಗಾಗಿ ಕಾಯುತ್ತಿದ್ದ ಯಶ್ ಅಭಿಮಾನಿಗಳಿಗೆ ತೀವ್ರ ನಿರಾಶೆಯಾಗಿದೆ.
'ಕೆಜಿಎಫ್' ರೌಡಿ ತಂಗಂ ಜೀವನಾಧರಿತ ಸಿನಿಮಾ ಆಗಿದೆ ಎಂದು ಆರೋಪಿಸಿ ವೆಂಕಟೇಶ್ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ 10ನೇ ಸಿಟಿ ಸಿವಿಲ್ ಕೋರ್ಟ್, 2019, ಜನವರಿ 7ರ ವರೆಗೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ.




ತಂಗಂ ಎಂಬ ಕುಖ್ಯಾತ ರೌಡಿಯ ಜೀವನಾಧಾರಿತ ಕತೆಯನ್ನೇ 'ಕೆ.ಜಿ.ಎಫ್​' ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಆದರೆ ಈ ಹಿಂದೆಯೇ ತಂಗಂ ಜೀವನಾಧಾರಿತ ಕತೆಯನ್ನು ಚಿತ್ರೀಕರಿಸಲು ವೆಂಕಟೇಶ್​ ಅವರು ಹಕ್ಕು ಪಡೆದಿದ್ದರು. ಈಗ ವೆಂಕಟೇಶ್​ ಅವರ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಾಲಯ ಮಧ್ಯಂತರ ತಡೆ ನೀಡಿದೆ.

ಅದೇ ರೀತಿ KGF ಎಂಬ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ
ಎಂದು ಅಲ್ಲಲ್ಲಿ ಗುಸು ಪಿಸು ಕೇಳಿ ಬರುತ್ತಿದೆ.

ಟ್ರಯಲ್ ಮೂಲಕ ಭಾರಿ ಸುದ್ದಿ ಮಾಡಿದ್ದ ಭರವಸೆ ಮೂಡಿಸಿದ್ದ ಕೆಜಿಎಫ್​ ಚಿತ್ರ ಸುಮಾರು 40 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಕನ್ನಡ ಸೇರಿದಂತೆ ಇತರೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಶುಕ್ರವಾರ ಬಿಡುಗಡೆಯಾಗಬೇಕಿತ್ತು.
ರಾಜ್ಯದಲ್ಲಿ 340ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೆಜಿಎಫ್ ಬಿಡುಗಡೆಗೆ ಸಿದ್ಧವಾಗಿತ್ತು.

ಇವೆಲ್ಲದರ ನಡುವೆ KGF ಸಿನಿಮಾ ನಾಳೆ ಬಿಡುಗಡೆ ಆಗೆ ಆಗುತ್ತೆ ಎನ್ನುವ ಭರವಸೆ K G F ತಂಡ ನೀಡಿದೆ.  ನಿರಾಶಾರಗದೆ ಕಾದು  ನೋಡೋಣ.

Post a Comment

0 Comments
* Please Don't Spam Here. All the Comments are Reviewed by Admin.
Chat via WhatsApp