Type Here to Get Search Results !

ಪುಂಗಿ ದಾಸನ ಲುಂಗಿ ಕಥೆ

Raj Pruthvi 0


ಅಲ್ಲೊಬ್ಬ ಪುಂಗಿ ದಾಸನಿಗೆ ತಾನು ಊದುವ ಕೊನೆಯ ಪುಂಗಿಯ ಮುನ್ನ 

ತಾನು ಊದುವ ಪುಂಗಿಯ ಸ್ವರ ಜನರ ಹೃದಯದಲ್ಲಿ 

ಇರುವ ಹಾಗೆ ಊದಬೇಕು ಎಂದು ಯೋಚಿಸಿದ.


ಆದರೆ ಸಮಸ್ಯೆ ಏನು ಅಂದರೆ  ಪುಂಗಿಯ ಸ್ವರ ಗೊತ್ತಿರುವವರ ಮುಂದೆ ಊದಿದರೆ ಮಾತ್ರ ಅವರ ಮನದಲ್ಲಿ ಹಾಗೆಯೇ ಉಳಿಯುತ್ತದೆ ಹಾಗು ಪುಂಗಿ ಊದುವವನಿಗೂ ಪುಂಗಿಗೂ ಬೆಲೆ ಇರುತ್ತದೆ. 


ಇದರ ನಡುವೆ ಒಮ್ಮೆ ಊರ ಜಾತ್ರೆಯಲ್ಲಿ ಅವನು ಪುಂಗಿ ಊದುವ ಸಮಯದಲ್ಲಿ ಲುಂಗಿ ಗಾಳಿಯೊಂದಿಗೆ ಹಾರಿ ಹೋಗುತ್ತದೆ. 
ಆದರೂ ಕೂಡ ಅವನು ಪುಂಗಿ ಊದುವುದನ್ನೂ ನಿಲ್ಲಿಸಲಿಲ್ಲ. 
“ಲುಂಗಿ ಹೋದ್ರು ಪರವಾಗಿಲ್ಲ,  ಪುಂಗಿ ಸ್ವರ ಮಾತ್ರ ಉಳಿಬೇಕು !” ಅಂದಿದ್ದ.

ಕೊನೆಗೆ ಅವನಿಗೆ 
“ಲುಂಗಿ ಹಾರಿದ ಪುಂಗಿ ದಾಸ, ಎಂದು ಹೆಸರು ಬಂತು . ಆದರೆ ಅವನ ಪುಂಗಿಯ ಸ್ವರ ಮಾತ್ರ ಜನರ ಮನಸಲ್ಲಿ ಅಜರಾಮರವಾಗಲಿಲ್ಲ.


ಜನರ ಮುಂದೆ ಎಸ್ಟೆ ಪುಂಗಿ ಊದಿದರು , ಪುಂಗಿಯ ನಾದಕ್ಕೆ ತಲೆದೂಗಿದರೆ ಹೊರತು ಪುಂಗಿಯ ಸ್ವರವನ್ನು ಅರ್ಥಹಿಸದೆ ಹೋದರು. 


ಆದರೂ ಕೂಡ ಅವನು ಪುಂಗಿ ಊದುವುದನ್ಮು ಮಾತ್ರ ನಿಲ್ಲಿಸಲಿಲ್ಲ ಹೀಗೆ ಅವನ ಕೊನೆಯ ಪುಂಗಿ ಊದುವದಿನ ಅವನು ನಕ್ಕು ಹೇಳಿದ .😁


ನನ್ನ ಉಸಿರಿನಲ್ಲಿ ಊದುವ ಪುಂಗಿ ನಿಲ್ಲಬಹುದು ಆದರೆ ಸ್ವರ ಬೇರೆಯವರ ಉಸಿರಲ್ಲಿ ಮುಂದುವರೆಯುತ್ತದೆ ..


ಇಲ್ಲಿ ಅರ್ಥವಾಗದ ವಿಷಯವನ್ನು ಎಷ್ಟು ಅರ್ಥಹಿಸಿ ಹೇಳಿದರು ಅರ್ಥವಾಗದ ಜನರಿಗೆ ಅರ್ಥವಾಗುವುದಿಲ್ಲ, ಅರ್ಥಹಿಸಲೇ ಬೇಕು ಎಂದು ಅರ್ಥಹಿಸಿದರೆ ಅದು ಅರ್ಥಹೀನವಾಗುವುದೆ ವಿನಹ ಅರ್ಥ ಗಹನವಾಗುವುದಿಲ್ಲ. 


ಇಷ್ಟೆ ಲುಂಗಿ ಹಾರಿದ ಪುಂಗಿ ದಾಸನ ಕಥೆ 😂


ಅರ್ಥ ಆದರೆ ಕನೆಕ್ಟ್ ಮಾಡಿಕೊಳ್ಳಿ .  


✍️ ಪೃಥ್ವಿರಾಜ್ ಕೊಪ್ಪ.

Post a Comment

0 Comments
* Please Don't Spam Here. All the Comments are Reviewed by Admin.
Chat via WhatsApp